ಕನ್ನಡ ಕ್ಯಾಡ್ನೆಸ್ಟ್ ಓದುಗರಿಗೆ, ವಿದ್ಯಾರ್ಥಿಗಳಿಗೆ ನಮಸ್ಕಾರ. ಇಂದು ನಿಮಗೆ ಅತ್ಯಂತ ಬೇಡಿಕೆಯ ಕೋರ್ಸ್ ಅನ್ನು ಪರಿಚಯಿಸುತ್ತಿದ್ದೇವೆ. ಆ ಕೋರ್ಸ್ ಹೆಸರು Interior design course. ಮನೆ ಖರೀದಿ ಬಳಿಕ ಹಲವು ಲಕ್ಷ ರೂಪಾಯಿಗಳನ್ನು ಇಂಟೀರಿಯರ್ ಡಿಸೈನ್ಗೆ ಜನರು ವ್ಯಯಿಸುತ್ತಾರೆ. ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ವರ್ಗದವರು ಒಳಾಂಗಣ ವಿನ್ಯಾಸಕ್ಕೆ ಒಂದೆರಡು ಲಕ್ಷ ರೂ. ಖರ್ಚು ಮಾಡಿದರೆ, ಶ್ರೀಮಂತರು ಹತ್ತು ಲಕ್ಷ ರೂ.ನಿಂದ 50 ಲಕ್ಷ ರೂ.ವರೆಗೂ ಖರ್ಚು ಮಾಡುವುದುಂಟು. ಅವರವರ ಟೇಸ್ಟ್ಗೆ ತಕ್ಕಂತೆ ಒಳಾಂಗಣವನ್ನು ವಿನ್ಯಾಸ ಮಾಡಿಕೊಡುವ ಈ ಇಂಟೀರಿಯರ್ ಪರಿಣಿತರಿಗೆ ದೇಶದಲ್ಲಿಂದು ಬೇಡಿಕೆ ಹೆಚ್ಚಿದೆ.
ಹೊಸ ಮನೆಯ ಒಳಾಂಗಣ ವಿನ್ಯಾಸ, ಹಳೆ ಮನೆಯ ನವೀಕರಣ ಮಾತ್ರವಲ್ಲದೆ ಆಫೀಸ್, ಹೋಟೆಲ್, ಅಂಗಡಿ ಸೇರಿದಂತೆ ವಿವಿಧ ವಾಣಿಜ್ಯ ಕಟ್ಟಡಗಳ ಒಳಾಂಗಣ ರೂಪಿಸಲು ಇಂಟೀರಿಯರ್ ಡಿಸೈನರ್ಗಳು ಬೇಕೇಬೇಕು. ಸ್ಥಳಾವಕಾಶ ಯೋಜನೆ, ಬಣ್ಣಗಳ ಆಯ್ಕೆ ಇತ್ಯಾದಿಗಳ ಕುರಿತೂ ಇಂಟೀರಿಯರ್ ಡಿಸೈನರ್ ಗಮನ ನೀಡಬೇಕಾಗುತ್ತದೆ. ಆರ್ಕಿಟೆಕ್ಟ್, ಎಂಜಿನಿಯರ್ ಮತ್ತು ಬಿಲ್ಡರ್ಗಳ ಜೊತೆ ಇಂಟೀರಿಯರ್ ಡಿಸೈನರ್ ಕಾರ್ಯನಿರ್ವಹಿಸಬೇಕಾಗುತ್ತದೆ.
ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನ್ ಕೋರ್ಸ್ ಕಲಿಯಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ
ಇಂಟೀರಿಯರ್ ಡಿಸೈನರ್ ಕರಿಯರ್ ಸ್ಕೋಪ್
ಇಂಟೀರಿಯರ್ ಡಿಸೈನ್ ಕಲಿತರೆ ಏನು ಪ್ರಯೋಜನವಿದೆ? ಈ ಕೋರ್ಸ್ ಕಲಿತರೆ ಸ್ಕೋಪ್ ಇದೆಯೇ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಜನರ ಜೀವನಶೈಲಿ, ಆಸಕ್ತಿಗಳಲ್ಲಿ ಬದಲಾವಣೆಯಾಗುತ್ತಿದೆ. ನಗರೀಕರಣವೂ ವೇಗಗೊಳ್ಳುತ್ತಿದೆ. ಇಂತಹ ಸಮಯದಲ್ಲಿ ಇಂಟೀರಿಯರ್ ಡಿಸೈನ್ಗೆ ಗಮನಾರ್ಹ ಬೇಡಿಕೆ ಉಂಟಾಗಿದೆ. ದೇಶದಲ್ಲಿ ಕುಶಲ ಇಂಟೀರಿಯರ್ ಡಿಸೈನರ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಾಸ್ಮೊಪಾಲಿಟನ್ ಸಂಸ್ಕøತಿಯ ಜೊತೆಗೆ ಸೋಷಿಯಲ್ ಮೀಡಿಯಾದ ಟ್ರೆಂಡ್ಗಳು ಸೇರಿ, ನನ್ನ ಮನೆ ಹಾಗಿರಲಿ, ಹೀಗಿರಲಿ ಎಂಬ ಬಯಕೆಯು ಮನೆಮಾಲಿಕರಲ್ಲಿ ಉಂಟಾಗುತ್ತಿದೆ.
ಈಗ ಮನೆಗಳ ದರ ದುಬಾರಿ. ಇದರಿಂದ ಮನೆಗಳು ಕಿರಿದಾಗುತ್ತಿವೆ. ಇಂತಹ ಸಮಯದಲ್ಲಿ ಮನೆಯೊಳಗೆ ಸ್ಥಳಾವಕಾಶದ ಕೊರತೆ ಉಂಟಾಗುವುದನ್ನು ತಡೆಯಲು ಇಂಟೀರಿಯರ್ ಡಿಸೈನರ್ಗಳು ನೆರವಾಗುತ್ತಾರೆ. ಯಾವುದಾದರೂ ಥೀಮ್ ಆಧರಿತವಾಗಿ ಮನೆಯ ವಿನ್ಯಾಸ ಮಾಡಿಕೊಳ್ಳಲು ಜನರು ಬಯಸುತ್ತಿದ್ದಾರೆ.
ಹೇಗಿದೆ ಬೇಡಿಕೆ?
ವರ್ಷದಿಂದ ವರ್ಷಕ್ಕೆ ಇಂಟೀರಿಯರ್ ಡಿಸೈನರ್ಗಳ ಬೇಡಿಕೆ ಹೆಚ್ಚಾಗುತ್ತಿದೆ.
- 2025ರ ವೇಳೆಗೆ ಜಾಗತಿಕವಾಗಿ ಇಂಟೀರಿಯರ್ ಡಿಸೈನ್ ಮಾರುಕಟ್ಟೆಯು ಅಗಾಧ ಬೆಳವಣಿಗೆ ಉಂಟಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
- 2018ರ ಮಾರ್ಕೆಟ್ ವಾಚ್ ವರದಿಯ ಪ್ರಕಾರ ಇಂಟೀರಿಯರ್ ಡಿಸೈನ್ ಮಾರುಕಟ್ಟೆಯ ಮೌಲ್ಯ 1,30,100 ದಶಲಕ್ಷ ಡಾಲರ್ಗೆ ತಲುಪಿದ್ದು, 2019-2024ಕ್ಕೆ ಶೇಕಡ 8.5ರಷ್ಟು ಬೆಳವಣಿಗೆ ಕಾಣಲಿದೆ.
- ಸಿಐಐ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಭಾರತದಲ್ಲಿರುವ 36,387 ಡಿಸೈನರ್ಗಳಲ್ಲಿ ಶೇಕಡ 10.17ರಷ್ಟು ಡಿಸೈನರ್ಗಳು ಇಂಟೀರಿಯರ್ ಡಿಸೈನರ್ಗಳಾಗಿದ್ದಾರೆ.
- ಮುಂದಿನ ದಶಕದಲ್ಲಿ ಇಂಟೀರಿಯರ್ ಡಿಸೈನರ್ ಉದ್ಯೋಗವು ಶೇಕಡ 13ರಷ್ಟು ಏರಿಕೆ ಕಾಣಲಿದೆ ಎಂದು ಬ್ರಾಂಡ್ಆನ್ಗೈಲಿ ವರದಿ ಹೇಳಿದೆ.
- ಇಂತಹ ಹಲವು ಅಂಕಿಅಂಶಗಳು ಮತ್ತು ಮನೆ ಖರೀದಿದಾರರು ಹೆಚ್ಚುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇಂಟೀರಿಯರ್ ಡಿಸೈನರ್ಗಳ ಸಂಖ್ಯೆ ಏರಿಕೆ ಕಾಣುವುದರಲ್ಲಿ ಸಂಶಯವಿಲ್ಲ ಎಂದು ನೌಕ್ರಿ.ಕಾಂ ವರದಿ ಹೇಳಿದೆ.
ಈ ಹುದ್ದೆಯ ವಿಶೇಷತೆಗಳೇನು?
- ಕ್ರಿಯಾಶೀಲತೆಗೆ ಅವಕಾಶ
- ಅತ್ಯುತ್ತಮ ಕರಿಯರ್ ಪ್ರಗತಿ
- ಆರಾಮದಾಯಕ ಕೆಲಸದ ಅವಧಿ.
- ಉದ್ಯೋಗ ತೃಪ್ತಿ
ಈ ಕ್ಷೇತ್ರದಲ್ಲಿ ಸ್ಥಿರ ಗ್ರಾಹಕರು ಇರುವುದಿಲ್ಲ. ಇಂಟೀರಿಯರ್ ಡಿಸೈನರ್ ಸತತವಾಗಿ ಅಪ್ಡೇಟ್ ಆಗುತ್ತಿರಬೇಕು. ಕೆಲವೊಮ್ಮೆ ಕೆಲಸದ ಒತ್ತಡ ಅಧಿಕವಾಗಿರಬಹುದು. ಸ್ಥಿರ ವೇತನ ಇಲ್ಲ. ಅತ್ಯಂತ ಕಾಳಜಿಯಿಂದ ಕೆಲಸ ಮಾಡಬೇಕು, ಮನೆ ಮಾಲಿಕರ ಒತ್ತಡ ಇತ್ಯಾದಿ ಕೆಲವು ಸವಾಲುಗಳು ಈ ಹುದ್ದೆಯಲ್ಲಿವೆ. ಆದರೆ, ಈ ಸವಾಲುಗಳನ್ನು ಮೆಟ್ಟಿನಿಂತು ಕೈತುಂಬಾ ಹಣ ಸಂಪಾದಿಸಲು, ಒಳ್ಳೆಯ ಕರಿಯರ್ ರೂಪಿಸಲು ಇಂಟೀರಿಯರ್ ಡಿಸೈನ್ ಪ್ರೊಫೆಷನ್ ಸೂಕ್ತವಾಗಿದೆ.
ಯಾವ ಕೌಶಲಗಳು ಬೇಕು?
- ತಾಂತ್ರಿಕ ಜ್ಞಾನ ಇರಬೇಕು. ಗ್ರಾಹಕರಿಗೆ ಡಿಜಿಟಲ್ ರೂಪದಲ್ಲಿ ರಚಿಸಿದ ವಿನ್ಯಾಸಗಳನ್ನು ತೋರಿಸಬೇಕು. ಇದಕ್ಕಾಗಿ ವಿಕ್ಟೊರ್ವಕ್ರ್ಸ್, ಆಟೋ ಡೆಸ್ಕ್ ರೆವಿಟ್, 3ಡಿ ಮ್ಯಾಕ್ಸ್, ಆರ್ಕಿಕ್ಯಾಡ್, ಆಟೋಕ್ಯಾಡ್, ಸ್ಕೆಚಪ್, 3ಡಿ ಹೋಮ್ ಪ್ಲ್ಯಾನರ್, ಚೀಫ್ ಆರ್ಕಿಟೆಕ್ಟ್ ಇತ್ಯಾದಿ ಸಾಫ್ಟ್ವೇರ್ಗಳ ಪರಿಚಯ ಇರಬೇಕು.
- ವೆಚ್ಚದ ಅಂದಾಜು, ಆಯವ್ಯಯ ಸಿದ್ಧಪಡಿಸುವುದು, ಒಳ ಖರ್ಚುಗಳನ್ನು ಗುರುತಿಸುವುದು, ಚೌಕಾಶಿ, ಅತ್ಯುತ್ತಮ ಬುಕ್ ಕೀಪಿಂಗ್ ಸೇರಿದಂತೆ ಹಣದ ದಕ್ಷ ಬಳಕೆಯ ಕೌಶಲ ಇರಬೇಕು.
- ಸ್ಥಳಾವಕಾಶವು ಯೋಗ್ಯವಾಗಿ ಬಳಕೆಯಾಗುವಂತೆ ಒಳಾಂಗಣ ವಿನ್ಯಾಸ ಮಾಡುವ ಕೌಶಲ ಇರಬೇಕು.
- ನಿಗದಿತ ಸಮಯದೊಳಗೆ ಕೆಲಸ ಮಾಡಿ ಮುಗಿಸಿಕೊಡುವುದು ಸೇರಿದಂತೆ ಸಮರ್ಪಕ ಸಮಯದ ನಿರ್ವಹಣೆಯ ಅರಿವು ಇರಬೇಕು.
- ಸಾಫ್ಟ್ ಸ್ಕಿಲ್ಗಳು ಇರಬೇಕು. ಅನನ್ಯ ಸಂವಹನ ಕೌಶಲ, ಸಮಸ್ಯೆ ಬಗೆಹರಿಸುವ ಕೌಶಲ, ನಿರ್ಣಾಯಕ ಚಿಂತನೆ ಇತ್ಯಾದಿ ಹಲವು ಸಾಫ್ಟ್ ಸ್ಕಿಲ್ಗಳನ್ನೂ ಇಂಟೀರಿಯರ್ ಡಿಸೈನರ್ ಹೊಂದಿರಬೇಕು.
- ಒಳಾಂಗಣ ವಿನ್ಯಾಸಕ ಸೃಜನಶೀಲನಾಗಿರಬೇಕು.
- ಕಲಾತ್ಮಕ ಶೈಲಿಗಳು, ಬಣ್ಣಗಳು, ಬಟ್ಟೆಗಳು, ಇತ್ತೀಚಿನ ಟ್ರೆಂಡ್ಗಳ ಅರಿವು ಇರಬೇಕು.
ಏನು ವಿದ್ಯಾರ್ಹತೆ ಹೊಂದಿರಬೇಕು?
10 +2 ವಿದ್ಯಾರ್ಹತೆ ಹೊಂದಿರುವ ಯಾರೂ ಬೇಕಾದರೂ ಇಂಟೀರಿಯರ್ ಡಿಸೈನಿಂಗ್ನಲ್ಲಿ ಪದವಿ/ಡಿಪ್ಲೊಮಾ ಪಡೆಯಬಹುದು. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂನ ಕ್ಯಾಡ್ನೆಸ್ಟ್ ಅಥವಾ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ ಆಂಡ್ ಕಮ್ಯುನಿಕೇಷನ್ ಶಿಕ್ಷಣ ಸಂಸ್ಥೆಯ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಹೆಚ್ಚು ಜನಪ್ರಿಯವಾಗಿದೆ. ಹೆಚ್ಚಿನ ಮಾಹಿತಿಗೆ ಈ ಪುಟಕ್ಕೆ ಭೇಟಿ ನೀಡಿ.