Kannada CADD Nest Private Limited

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಪಡೆಯಿರಿ, ಟೆಕ್ ಉದ್ಯೋಗ ಪಡೆಯಿರಿ

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಪಡೆಯಿರಿ, ಟೆಕ್ ಉದ್ಯೋಗ ಪಡೆಯಿರಿ

ಇದು ಡಿಜಿಟಲ್‌ ಯುಗ. ಈ ಕಾಲದಲ್ಲಿ ಕಂಪನಿಗಳು ತಮ್ಮ ವ್ಯವಹಾರ, ಸೇವೆಗಳ ಪ್ರಚಾರವನ್ನು ಡಿಜಿಟಲ್‌ ಮೂಲಕವೇ ಹೆಚ್ಚಾಗಿ ನಡೆಸುತ್ತಿವೆ. ಇಂತಹ ಟ್ರೆಂಡ್‌ ಅನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಕ್ಯಾಡ್‌ನೆಸ್ಟ್‌‌ನ ಈ ಲೇಖನದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಸಾಂಪ್ರದಾಯಿಕ ಪ್ರಚಾರ, ಜಾಹೀರಾತು ಆಯ್ಕೆಗಳಿಗಿಂತ ಅಗ್ಗವೂ ಹೌದು. ಎಲ್ಲವೂ ಇಂಟರ್‍ನೆಟ್‍ಮಯವಾಗುತ್ತಿರುವ ಈ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಲ್ಲವರಿಗೆ ಉತ್ತಮ ಬೇಡಿಕೆಯಿದೆ. ಸರ್ಚ್ ಎಂಜಿನ್ ಆಪ್ಟಿಮಿಜೇಷನ್, ಸೋಷಿಯಲ್ ಮೀಡಿಯಾ ಆಪ್ಟಿಮಿಜೇಷನ್ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯಲು ಎಲ್ಲರೂ ಆಸಕ್ತಿ ವಹಿಸುತ್ತಿದ್ದಾರೆ.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?

ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‍ಫೋನ್‌ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು ವಿಶೇಷ ಸ್ಕಿಲ್ ಬೇಕಾಗುತ್ತದೆ. ಇಂತಹ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್‍ಗಳು ಕಲಿಸಿ ಕೊಡುತ್ತವೆ.

ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ನಲ್ಲಿ ಏನು ಕಲಿಯಬಹುದು?

ಡಿಜಿಟಲ್ ಮಾರುಕಟ್ಟೆಯ ಬೇಸಿಕ್ಸ್, ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಡಿಜಿಟಲ್ ಮಾರುಕಟ್ಟೆ ಕಾರ್ಯತಂತ್ರ ರೂಪಿಸುವುವುದು, ಮೊಬೈಲ್, ಸರ್ಚ್ ಮತ್ತು ಸೋಷಿಯಲ್ ನೆಟ್‍ವರ್ಕಿಂಗ್ ಇತ್ಯಾದಿ ನವಮಾಧ್ಯಮಗಳನ್ನು ಬಳಸಿ ಮಾರುಕಟ್ಟೆ ವಿಸ್ತರಿಸುವುದು, ಡಿಜಿಟಲ್ ಮಾರುಕಟ್ಟೆಗೆ ಸಂಬಂಧಪಟ್ಟ ಕಾನೂನುಗಳನ್ನು ತಿಳಿದುಕೊಳ್ಳುವುದು ಸಹ ಈ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಒಳಗೊಂಡಿರುತ್ತದೆ.

ದುಬಾರಿಯೇ?

ಡಿಜಿಟಲ್‌ ಮಾರ್ಕೆಟಿಂಗ್ ಕೋರ್ಸ್‌ ಎಂದು ಹುಡುಕಿದರೆ ನಿಮಗೆ ಹಲವು ಬಗೆಯ ಶುಲ್ಕಗಳಿರುವ ಕೋರ್ಸ್‌ಗಳು ಕಾಣಬಹುದು. “ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ತುಂಬಾ ಬೇಡಿಕೆಯ ಕೋರ್ಸ್‌. ಇದರಿಂದಾಗಿ ಕೆಲವು ಶಿಕ್ಷಣ ಸಂಸ್ಥೆಗಳು ಈ ಕೋರ್ಸ್‌ ಶುಲ್ಕವನ್ನು ತುಂಬಾ ದುಬಾರಿಯಾಗಿಸಿವೆ. ನೀವು ಕೆಲವೊಂದು ಶಿಕ್ಷಣ ಸಂಸ್ಥೆಗಳ ಕೋರ್ಸ್‌ಗಳ ದರ ನೋಡಿದರೆ ಬೆಚ್ಚಿಬೀಳಬಹುದು. ಆರು ತಿಂಗಳ ಕೋರ್ಸ್‌ಗೆ ೫೦ ಸಾವಿರ ರೂ.ನಿಂದ ಒಂದೆರಡು ಲಕ್ಷ ಶುಲ್ಕ ಪಡೆಯುವ ಶಿಕ್ಷಣ ಸಂಸ್ಥೆಗಳಿವೆ. ಈ ರೀತಿ ಇದ್ದರೆ ಬಡ ವಿದ್ಯಾರ್ಥಿಗಳು ಇಂತಹ ಅವಶ್ಯ ಟೆಕ್‌ ಸ್ಕಿಲ್‌ ಕಲಿಯುವುದು ಹೇಗೆ?’ ಎಂದು ಪ್ರಕಾಶ್‌ ಇನ್ಫೋಟೆಕ್‌ನ ಸ್ಥಾಪಕ ಮತ್ತು ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್‌ ಹೇಳುತ್ತಾರೆ.

ಡಿಟಿಪಿಯಂತೆಯೇ ಡಿಜಿಟಲ್‌ ಮಾರ್ಕೆಟಿಂಗ್‌ ಕಲಿಯೋಣ

“ಕೆಲವು ಕಂಪ್ಯೂಟರ್‌ ಕೋರ್ಸ್‌ಗಳ ದರ ತುಂಬಾ ಅಗ್ಗವಾಗಿರುತ್ತವೆ. ಟೈಪಿಂಗ್‌ ಅಥವಾ ಡಿಟಿಪಿ ಕಲಿಯಲು ಹೆಚ್ಚು ಹಣ ಪಾವತಿಸಬೇಕಿಲ್ಲ. ಇದೇ ರೀತಿ ಅಥವಾ ಇದೇ ದರದ ಆಸುಪಾಸಿನಲ್ಲಿಯೇ ಡಿಜಿಟಲ್‌ ಮಾರ್ಕೆಟಿಂಗ್ ಕೋರ್ಸ್‌ ಅನ್ನು ವಿದ್ಯಾರ್ಥಿಗಳಿಗೆ ನೀಡುವ ಸಾಹಸಕ್ಕೆ ನಾವು ಮುಂದಾಗಿದ್ದೇವೆ. ಇದರಿಂದ ಬಡ ಕನ್ನಡ ವಿದ್ಯಾರ್ಥಿಗಳು ಒಳ್ಳೆಯ ಅವಕಾಶವನ್ನು ಪಡೆಯಬಹುದು. ಪ್ಲೇಸ್‌ಮೆಂಟ್‌ ಖಾತರಿಯನ್ನೂ ನಾವು ನೀಡುತ್ತಿದ್ದೇವೆ. ಇಂಟರ್ನ್‌ಶಿಪ್‌ಗೂ ಅವಕಾಶ ನೀಡುತ್ತೇವೆ. ಖಂಡಿತವಾಗಿಯೂ ನಮ್ಮ ಡಿಜಿಟಲ್‌ ಮಾರ್ಕೆಟಿಂಗ್ ಕೋರ್ಸ್‌ ಕಲಿತ ವಿದ್ಯಾರ್ಥಿಯು ಒಳ್ಳೆಯ ಉದ್ಯೋಗ ಪಡೆಯಬಹುದು. ಸ್ವಂತ ಡಿಜಿಟಲ್‌ ಮಾರ್ಕೆಟಿಂಗ್‌ ಸಂಸ್ಥೆಯನ್ನು ಸ್ಥಾಪಿಸಿ ತನ್ನ ಕಾಲಮೇಲೆ ನಿಂತುಕೊಳ್ಳಬಹುದು’ ಎಂದು ಕ್ಯಾಡ್‌ನೆಸ್ಟ್‌‌ನ ಪ್ರಕಾಶ್‌ ಹೇಳುತ್ತಾರೆ.

ಆಫ್‌ಲೈನ್‌ ಅಥವಾ ಆನ್‌ಲೈನ್‌ ಮೂಲಕ ಕಲಿಯಿರಿ

ಕೋವಿಡ್‌-೧೯ನಿಂದಾಗಿ ಎಲ್ಲರಿಗೂ ನಮ್ಮ ತರಗತಿಗಳಿಗೆ ಹಾಜರಾಗುವುದು ಕಷ್ಟ. ನಮ್ಮ ಆನ್‌ಲೈನ್‌ ಕ್ಲಾಸ್‌ ಮೂಲಕವೂ ವಿದ್ಯಾರ್ಥಿಗಳು ಡಿಜಿಟಲ್‌ ಮಾರ್ಕೆಟಿಂಗ್‌ ಕಲಿಯಬಹುದು. ಆಮೇಲೆ ಕೊರೊನಾದ ತೊಂದರೆಗಳೆಲ್ಲವೂ ಕಡಿಮೆಯಾದ ಬಳಿಕ ಬೇಕಿದ್ದರೆ ಆನ್‌ಲೈನ್‌ನಿಂದ ಆಫ್‌ಲೈನ್‌ ಕ್ಲಾಸ್‌ಗೂ ವಿದ್ಯಾರ್ಥಿಗಳು ಬರಬಹುದು. ಬೇಕಿದ್ದರೆ, ವಿದ್ಯಾರ್ಥಿಗಳಿಗೆ ಅನುಕೂಲ ಎನ್ನುವುದಾದರೆ ಪೂರ್ತಿ ಕೋರ್ಸ್ ಅನ್ನು ಆನ್‌ಲೈನ್‌ನಲ್ಲಿಯೇ ಕಲಿಯಬಹುದು ಎಂದು ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆ ತಿಳಿಸಿದೆ.

ಪ್ಲೇಸ್‌ಮೆಂಟ್‌ ಗ್ಯಾರಂಟಿ

“ನಾವು ಕೇವಲ ವಿದ್ಯಾರ್ಥಿಗಳಿಗೆ ಕೋರ್ಸ್‌ ಕಲಿಸಿ ಅವರ ದಾರಿ ಅವರಿಗೆ ಎನ್ನುವ ರೀತಿ ವರ್ತಿಸುವುದಿಲ್ಲ. ನಮ್ಮ ಸಂಸ್ಥೆಯ ಯಶಸ್ಸು ನಿಂತಿರುವುದೇ ವಿದ್ಯಾರ್ಥಿಗಳ ಯಶಸ್ಸಿನ ಮೇಲೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್‌ ಮಾಡಲು ಅವಕಾಶ ನೀಡುವ ಹಲವು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್‌ ನೀಡುವ ಹಲವು ಕಂಪನಿಗಳ ಜೊತೆ ಟೈಅಪ್‌ ಮಾಡಿಕೊಂಡಿದ್ದೇವೆ’ ಎಂದು ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಕಲಿಯಲು ಆಸಕ್ತ ವಿದ್ಯಾರ್ಥಿಗಳು ಈ ಕೂಡಲೇ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಸಂಸ್ಥೆಯನ್ನು ಸಂಪರ್ಕಿಸಬಹುದು. ಈ ವೆಬ್‌ಸೈಟ್‌ನಲ್ಲಿರುವ ವಾಟ್ಸಪ್‌ ಬಟನ್‌ ಅನ್ನು ಕ್ಲಿಕ್ ಮಾಡಿಯೂ ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದು.

Ad Widget

Related Posts

error: Content is protected !!
Scroll to Top