Kannada CADD Nest Private Limited

ಕಂಪ್ಲಿಟ್ ಗೈಡ್: ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್, ಪಠ್ಯಕ್ರಮ ಮತ್ತು ಉದ್ಯೋಗಾವಕಾಶ

ಕಂಪ್ಲಿಟ್ ಗೈಡ್: ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್, ಪಠ್ಯಕ್ರಮ ಮತ್ತು ಉದ್ಯೋಗಾವಕಾಶ

ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಕಳೆದ ಕೆಲವು ವರ್ಷಗಳಿಂದ ತುಂಬಾ ಬೇಡಿಕೆಯಲ್ಲಿರುವ ಉದ್ಯೋಗ. ಸಣ್ಣ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಪ್ರತಿಯೊಬ್ಬರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಆನ್‌ಲೈನ್‌ ಮೂಲಕ ಪ್ರಚಾರ ಮಾಡಲು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ ಕೌಶಲ ಕಲಿತವರ ನೇಮಕವೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದೇ ಕಾರಣಕ್ಕೆ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಕಲಿಯಲು ಬಯಸುವ ವಿದ್ಯಾರ್ಥಿಗಳು (ಯಾವುದೇ ವಯೋಮಿತಿ ಇಲ್ಲದೆ, ಬಿಸ್ನೆಸ್‌ಮ್ಯಾನ್‌ಗಳು ಸೇರಿದಂತೆ) ಹೆಚ್ಚಾಗುತ್ತಿದ್ದಾರೆ.

ಆದರೆ, ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಫೀಸ್‌ಗಳನ್ನು ನೋಡಿ ಕೆಲವರು ಬೆಚ್ಚಿ ಬೀಳುವುದಂಟು. ೩೦ ಸಾವಿರ ರೂ.ನಿಂದ ಒಂದೆರಡು ಲಕ್ಷ ರೂ.ವರೆಗೂ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಫೀಸ್‌ ಇರುತ್ತದೆ. ಈ ರೀತಿ ಫೀಸ್‌ ಇದ್ದರೆ ಸಾಮಾನ್ಯ ಜನರಿಗೆ ಇದು ಕೈಗೆಟುಕದ ಶಿಕ್ಷಣವಾಗಿ ಪರಿಣಮಿಸಬಹುದು. ಡಿಜಿಟಲ್‌ ಜಗತ್ತಿನಲ್ಲಿ ಒಳ್ಳೆಯ ಅವಕಾಶ ಪಡೆಯಲು ಬಯಸುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‌ ಸೇರಿದಂತೆ ಹಲವು ಬೇಡಿಕೆಯ ಕೋರ್ಸ್‌ಗಳು ಗಗನಕುಸುಮವಾಗಬಾರದು, ಮುಖ್ಯವಾಗಿ ಕನ್ನಡಿಗರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕನ್ನಡ ಕ್ಯಾಡ್‌ನೆಸ್ಟ್‌‌ನ ಮಾತೃಸಂಸ್ಥೆಯಾದ ಪ್ರಕಾಶ್‌ ಇನ್ಫೋಟೆಕ್‌ ತನ್ನ ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆಗಳಲ್ಲಿ (ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ)  ಡಿಜಿಟಲ್‌ ಮಾರ್ಕೆಟಿಂಗ್‌ ಅನ್ನು ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ನೀಡಲು ಮುಂದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದು.

ಡಿಜಿಟಲ್‌ ಮಾರ್ಕೆಟಿಂಗ್‌ ಎಂದರೇನು?

ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‌ಫೋನ್‌ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು ವಿಶೇಷ ಸ್ಕಿಲ್ ಬೇಕಾಗುತ್ತದೆ. ಇಂತಹ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್‍ಗಳು ಕಲಿಸಿ ಕೊಡುತ್ತವೆ. ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಬಸವನಗುಡಿ ಮತ್ತು ಶೇಷಾದ್ರಿಪುರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆಯು ಯಾವುದೇ ಶಿಕ್ಷಣ ಪಡೆದವರಿಗೆ (ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪಾಸ್‌ ಅಥವಾ ಫೇಲ್‌ ಆಗಿದ್ದರೂ) ಸೂಕ್ತವಾಗುವಂತೆ ಡಿಜಿಟಲ್‌ ಮಾರ್ಕೆಟಿಂಗ್ ಕೋರ್ಸ್‌ ಅನ್ನು ಪರಿಚಯಿಸಿದೆ. ನೀವು ಯಾವುದೇ ಟೆಕ್‌ ಕೋರ್ಸ್‌ ಪಡೆಯದೆ ಇದ್ದರೂ ಟೆಕ್‌ ಜಗತ್ತಿನಲ್ಲಿ ಒಳ್ಳೆಯ ಉದ್ಯೋಗ ಪಡೆಯಲು ಈ ಕೋರ್ಸ್‌ ನೆರವು ನೀಡಲಿದೆ. ಜೊತೆಗೆ ನಿಮಗೆ ಪ್ಲೇಸ್‌ಮೆಂಟ್‌, ಇಂಟರ್ನ್‌ಶಿಪ್‌ಗೂ ಅವಕಾಶವನ್ನು ನೀಡುತ್ತದೆ.

ಯಾರು ಕಲಿಯಬಹುದು?

ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಈಗಿನ ತಂತ್ರಜ್ಞಾನ ಜಗತ್ತಿನಲ್ಲಿ ಪ್ರಮುಖ ಹುದ್ದೆ. ವಿಶೇಷವೆಂದರೆ ಈ ಹುದ್ದೆ ಪಡೆಯಲು ನಿಮ್ಮಲ್ಲಿ ವಿಶೇಷ ಎಂಜಿನಿಯರಿಂಗ್, ತಂತ್ರಜ್ಞಾನ ಪದವಿ ಇರಬೇಕಾಗಿಲ್ಲ. ನೀವು ಎಸ್‌ಎಸ್‌ಎಲ್‌ಸಿ ಪಾಸ್‌ ಆಗಿದ್ದರೂ, ಫೇಲ್‌ ಆಗಿದ್ದರೂ ಈ ಕೋರ್ಸ್‌ ಕಲಿಯಬಹುದು. ಎಂಜಿನಿಯರಿಂಗ್‌ ಓದಿದ್ದರೂ ಕಲಿಯಬಹುದು. ಈಗಾಗಲೇ ಯಾವುದಾದರೂ ಬಿಸ್ನೆಸ್‌ ಮಾಡುತ್ತಿರುವವರೂ ಕಲಿಯಬಹುದು. ಯಾವುದೇ ವಯೋಮಿತಿ, ಶೈಕ್ಷಣಿಕ ಅರ್ಹತೆ ಬಯಸದ ವಿನೂತನ ಕೋರ್ಸ್‌ ಇದಾಗಿದೆ.

ಕೋರ್ಸ್‌ನ ಗುರಿ

ವಿದ್ಯಾರ್ಥಿಗಳು ಮತ್ತು ಸಣ್ಣ, ಮಧ್ಯಮ ಮತ್ತು ಬೃಹತ್‌ ಬಿಸ್ನೆಸ್‌ಮ್ಯಾನ್‌ಗಳಿಗೆ ಡಿಜಿಟಲ್‌ ಮಾರ್ಕೆಟಿಂಗ್‌ ಅನ್ನು ಸರಳವಾಗಿ ಕಲಿಸಿಕೊಡುವುದು. ಈ ಮೂಲಕ ಮಾರ್ಕೆಟಿಂಗ್‌ ಯಶಸ್ಸು ಪಡೆಯಲು ನೆರವಾಗುವುದು. ಸೋಷಿಯಲ್‌ ಮೀಡಿಯಾ, ಎಸ್‌ಇಒ, ಅನಾಲಿಟಿಕ್ಸ್‌, ಗೂಗಲ್‌ ಆಡ್‌ವರ್ಡ್ಸ್‌ ಕ್ಯಾಂಪೈನ್‌, ಸೋಷಿಯಲ್‌ ಮೀಡಿಯಾ ಪ್ಲ್ಯಾನಿಂಗ್‌, ಎಸ್‌ಇಒ ಆಪ್ಟಿಮೈಜೇಷನ್‌, ನಿರ್ದಿಷ್ಟ ಗ್ರಾಹಕರನ್ನು ಟಾರ್ಗೆಟ್‌ ಮಾಡಿ ಡಿಜಿಟಲ್‌ ಮಾರ್ಕೆಟಿಂಗ್‌ ಮಾಡುವುದು ಸೇರಿದಂತೆ ನೂರಾರು ಕೌಶಲಗಳನ್ನು ಈ ಕೋರ್ಸ್‌ ಮೂಲಕ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಕಲಿಸುವ ಗುರಿಯನ್ನು ಕ್ಯಾಡ್‌ನೆಸ್ಟ್‌ ಹೊಂದಿದೆ.

ಯಾವ ಹುದ್ದೆ ಪಡೆಯಬಹುದು?

ಬಿಸ್ನೆಸ್‌ ಮ್ಯಾನ್‌ ಆಗಿದ್ದರೆ ತನ್ನ ವ್ಯವಹಾರಕ್ಕೆ ಈ ಡಿಜಿಟಲ್‌ ಮಾರ್ಕೆಟಿಂಗ್‌ ತಂತ್ರಗಳನ್ನು ಅನ್ವಯಿಸಿ ಒಳ್ಳೆಯ ಫಲಿತಾಂಶ ಪಡೆಯಬಹುದು. ತನ್ನ ಬಿಸ್ನೆಸ್ ಪ್ರಗತಿಯನ್ನು ಉತ್ತಮಪಡಿಸಬಹುದು. ವಿದ್ಯಾರ್ಥಿಗಳಾದರೆ ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ತಮ್ಮ ಕೌಶಲಕ್ಕೆ ತಕ್ಕಂತೆ ವಿನೂತನ ಹುದ್ದೆಗಳನ್ನು ಪಡೆಯಬಹುದಾಗಿದೆ. ಪಡೆಯಬಹುದಾದ ಕೆಲವು ಹುದ್ದೆಗಳು ಇಂತಿವೆ;

  • ಡಿಜಿಟಲ್ ಮಾರ್ಕೆಟರ್‌
  • ಎಸ್‌ಇಒ ಸ್ಪೆಷಲಿಸ್ಟ್‌
  • ಸೋಷಿಯಲ್‌ ಮೀಡಿಯಾ ಮ್ಯಾನೇಜರ್‌
  • ಮಾರ್ಕೆಟಿಂಗ್‌ ಮ್ಯಾನೇಜರ್‌
  • ಪಾಟ್ನರ್‌ಶಿಪ್‌ ಮಾರ್ಕೆಟರ್‌
  • ಮಾರ್ಕೆಟಿಂಗ್ ಸ್ಪೆಷಲಿಸ್ಟ್‌
  • ಮಾರ್ಕೆಟಿಂಗ್‌ ಕೋ-ಆರ್ಡಿನೇಟರ್‌
  • ಮಾರ್ಕೆಟಿಂಗ್‌ ಅನಾಲಿಸ್ಟ್‌
  • ಬ್ರ್ಯಾಂಡ್‌ ಮ್ಯಾನೇಜರ್‌
  • ಬ್ರ್ಯಾಂಡ್‌ ಮಾರ್ಕೆಟಿಂಗ್‌ ಮ್ಯಾನೇಜರ್‌
  • ಬ್ರ್ಯಾಂಡ್‌ ಸ್ಟ್ರಾಟರ್ಜಿಸ್ಟ್‌
  • ಎಸ್‌ಇಎಂ ಮ್ಯಾನೇಜರ್‌
  • ಪೇ ಪರ್‌ ಕ್ಲಿಕ್‌ ಮ್ಯಾನೇಜರ್‌
  • ಪೈಡ್‌ ಸರ್ಚ್‌ ಮ್ಯಾನೇಜರ್‌
  • ಇಂಟರ್ನೆಟ್‌ ಮಾರ್ಕೆಟಿಂಗ್‌ ಸ್ಪೆಷಲಿಸ್ಟ್‌
  • ವೆಬ್‌ ಮಾರ್ಕೆಟಿಂಗ್‌ ಮ್ಯಾನೇಜರ್‌
  • ಡೈರೆಕ್ಟರ್‌ ಆಫ್‌ ಇಮೇಲ್‌ ಮಾರ್ಕೆಟಿಂಗ್‌, ಡಿಮಾಂಡ್‌ ಜನರೇಷನ್‌ ಮ್ಯಾನೇಜರ್‌
  • ಇಕಾಮರ್ಸ್‌ ಕಂಟೆಂಟ್‌ ಸ್ಪೆಷಲಿಸ್ಟ್‌

ಹೀಗೆ ಹತ್ತು ಹಲವು ಬಗೆಯ ಹುದ್ದೆಗಳು ಡಿಜಿಟಲ್‌ ಮಾರ್ಕೆಟಿಂಗ್‌ ಪರಿಣತಿ ಪಡೆದವರನ್ನು ಕೈಬೀಸಿ ಕರೆಯುತ್ತವೆ. ಈ ಕೋರ್ಸ್‌ನಲ್ಲಿ ಕಲಿತಿ ಸ್ಕಿಲ್‌ಗಳ ಕೀವರ್ಡ್ಗಳನ್ನು ನಿಮ್ಮ ರೆಸ್ಯೂಂನಲ್ಲಿ ಹಾಕಿಬಿಟ್ಟರೆ ಸಾಕಷ್ಟು ಉದ್ಯೋಗದ ಆಫರ್‌ಗಳು ನಿಮಗೆ ದೊರಕುತ್ತದೆ.

ಪಠ್ಯಕ್ರಮ (ಕ್ಯಾಡ್‌ನೆಸ್ಟ್‌‌ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ)

  • ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಪೀಠಿಕೆ
  • ಡಿಜಿಟಲ್‌ ಮಾರ್ಕೆಟಿಂಗ್‌ ವರ್ಸಸ್‌ ರಿಯಲ್‌ ಮಾರ್ಕೆಟಿಂಗ್‌
  • ಡಿಜಿಟಲ್‌ ಮಾರ್ಕೆಟಿಂಗ್‌ ಚಾನೆಲ್‌ಗಳು
  • ಆರಂಭಿಕ ಡಿಜಿಟಲ್‌ ಮಾರ್ಕೆಟಿಂಗ್‌ ಯೋಜನೆ ರೂಪಿಸುವುದು
  • ಕಂಟೆಂಟ್‌ ಮಾರ್ಕೆಟಿಂಗ್‌
  • ಎಸ್‌ಡಬ್ಲ್ಯುಒಟಿ ವಿಶ್ಲೇಷಣೆ
  • ಟಾರ್ಗೆಟ್‌ ಗ್ರೂಪ್‌ ವಿಶ್ಲೇಷಣೆ
  • ಚಟುವಟಿಕೆ: ಟಾರ್ಗೆಟ್‌ ಗ್ರೂಪ್‌ ವ್ಯಾಖ್ಯಾನಿಸುವ ಕುರಿತು ವಿದ್ಯಾರ್ಥಿಗಳಿಗೆ ಚಟುವಟಿಕೆಗಳು
  • ವೆಬ್ ವಿನ್ಯಾಸ ಬೇಸಿಕ್‌
  • ವೆಬ್‌ಸೈಟ್‌ಗಳ ಆಪ್ಟಿಮೈಜೇಷನ್‌
  • ಚಟುವಟಿಕೆ: ವಿದ್ಯಾರ್ಥಿಗಳಿಂದ ಬೇಸಿಕ್‌ ವೆಬ್‌ಸೈಟ್‌ ರಚಿಸುವುದು, ಬಳಿಕ ಅದನ್ನು ಆಪ್ಟಿಮೈಜೇಷನ್‌ ಮಾಡಿಸುವುದು
  • ಎಸ್‌ಇಒ ಕುರಿತು ವಿವರಣೆ
  • ಎಸ್‌ಇಒ ಅಗತ್ಯ
  • ಎಸ್‌ಇಒ ಆಪ್ಟಿಮೈಜೇಷನ್‌
  • ಎಸ್‌ಇಒ ಕಂಟೆಂಟ್‌ ಬರೆಯಲು ಮಾರ್ಗದರ್ಶನ
  • ಚಟುವಟಿಕೆ: ವಿದ್ಯಾರ್ಥಿಗಳಿಂದ ಎಸ್‌ಇಒ ಕಂಟೆಂಟ್‌ ಬರೆಸುವುದು
  • ಗೂಗಲ್‌ ಆಡ್‌ವರ್ಡ್ಸ್‌ ಪರಿಚಯ
  • ಗೂಗಲ್‌ ಅಕೌಂಟ್‌ ವಿಧಗಳು
  • ಗೂಗಲ್‌ ಆಡ್‌ವರ್ಡ್ಸ್‌ನಲ್ಲಿ ಖಾತೆ ತೆರೆಯುವುದು
  • ಗೂಗಲ್‌ ಆಡ್‌ವರ್ಡ್ಸ್‌ನಲ್ಲಿ ಜಾಹೀರಾತು ರಚಿಸುವುದು
  • ಗೂಗಲ್‌ ಆಡ್‌ವರ್ಡ್ಸ್‌ನಲ್ಲಿ ಪರಿಣಾಮಕಾರಿಯಾಗಿ ಹೇಗೆ ಕ್ಯಾಂಪೈನ್‌ ಮಾಡಬಹುದು ಎಂಬ ವಿವರಣೆ
  • ಚಟುವಟಿಕೆ: ಗೂಗಲ್‌ ಆಡ್‌ವರ್ಡ್ಸ್‌ನಲ್ಲಿ ವಿದ್ಯಾರ್ಥಿಗಳಿಂದಲೇ ಕ್ಯಾಂಪೈನ್‌ ಮಾಡಿಸುವುದು
  • ಸಿಆರ್‌ಎಂ ಅಥವಾ ಕಸ್ಟಮರ್‌ ರಿಲೇಷನ್‌ ಮ್ಯಾನೇಜ್‌ಮೆಂಟ್‌ ಕುರಿತು ಪರಿಚಯ
  • ಸಿಆರ್‌ಎಂ ಫ್ಲಾಟ್‌ಫಾರ್ಮ್‌ಗಳ ಪರಿಚಯ
  • ಸಿಆರ್‌ಎಂ ಮಾಡೆಲ್‌ಗಳು
  • ಸಿಆರ್‌ಎಂ ಸ್ಟಾರ್ಟಜಿ ಚಟುವಟಿಕೆ
  • ವೆಬ್‌ ಅನಾಲಿಟಿಕ್ಸ್‌ ಪರಿಚಯ
  • ಗೂಗಲ್‌ ಅನಾಲಿಟಿಕ್ಸ್‌ ಮತ್ತು ಇತರೆ ಅನಾಲಿಟಕ್ಸ್‌ ಅಗತ್ಯಗಳ ಬಗ್ಗೆ ಮಾಹಿತಿ
  • ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ಗೆ ವೆಬ್ ಅನಾಲಿಟಿಕ್ಸ್‌ ಅಗತ್ಯ
  • ಫೇಸ್‌ಬುಕ್‌ನಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌
  • ಫೇಸ್‌ಬುಕ್‌ ಪುಟ ರಚಿಸುವುದು
  • ಫೇಸ್‌ಬುಕ್‌ ಪುಟವನ್ನು ಅಂದಗೊಳಿಸುವುದು
  • ಫೇಸ್‌ಬುಕ್‌ ಪುಟದಲ್ಲಿ ಇರುವ ವಿಧಗಳ ವಿವರಣೆ
  • ಫೇಸ್‌ಬುಕ್‌ ಫಾರ್ ಬಿಸ್ನೆಸ್‌ ಪರಿಚಯ
  • ಫೇಸ್‌ಬುಕ್‌ನಲ್ಲಿ ಮಾರ್ಕೆಟಿಂಗ್‌ ಹೇಗೆ ಮಾಡುವುದು ಎಂಬ ಮಾರ್ಗದರ್ಶನ
  • ಇನ್‌ಸ್ಟಾಗ್ರಾಂನಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌
  • ಬಿಸ್ನೆಸ್‌ ಅವಕಾಶಗಳು ಮತ್ತು ಇನ್‌ಸ್ಟಾಗ್ರಾಂ ಆಯ್ಕೆಗಳು
  • ಇನ್‌ಸ್ಟಾಗ್ರಾಂ ಪ್ರೊಫೈಲ್‌ ಆಪ್ಟಿಮೈಜೇಷನ್‌
  • ವೆಬ್‌ಸೈಟ್‌ ಮತ್ತು ಇತರೆ ಸೋಷಿಯಲ್‌ ನೆಟ್‌ವರ್ಕ್‌ಗಳ ಜೊತೆ ಇನ್‌ಸ್ಟಾಗ್ರಾಂ ಇಂಟಿಗ್ರೇಷನ್‌
  • ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡುವ ಕೌಶಲ
  • ಲಿಂಕ್ಡ್‌ಇನ್‌ನಲ್ಲಿರುವ ಬಿಸ್ನೆಸ್ ಟೂಲ್‌ಗಳು
  • ಲಿಂಕ್ಡ್‌ಇನ್‌ನಲ್ಲಿ ಕ್ಯಾಂಪೈನ್‌ ಮಾಡುವುದು
  • ಲಿಂಕ್ಡ್‌ಇನ್‌ನಲ್ಲಿ ಫಲಿತಾಂಶದ ವಿಶ್ಲೇಷಣೆ
  • ಯೂಟ್ಯೂಬ್‌ನಲ್ಲಿ ಬಿಸ್ನೆಸ್‌ ಅಕೌಂಟ್ಸ್‌ ರಚಿಸುವುದು
  • ಯೂಟ್ಯೂಬ್‌ ಜಾಹೀರಾತು
  • ಯೂಟ್ಯೂಬ್‌ ಅನಾಲಿಟಿಕ್ಸ್‌
  • ಫೇಸ್‌ಬುಕ್‌ ಜಾಹೀರಾತುಗಳು
  • ಫೇಸ್‌ಬುಕ್‌ ಜಾಹೀರಾತುಗಳನ್ನು ರಚಿಸುವುದು
  • ಇಮೇಲ್‌ ಮಾರ್ಕೆಟಿಂಗ್‌ ಪರಿಚಯ
  • ಇಮೇಲ್‌ ಮಾರ್ಕೆಟಿಂಗ್‌ ಪ್ಲ್ಯಾನ್‌
  • ಇಮೇಲ್‌ ಮಾರ್ಕೆಟಿಂಗ್‌ ಕ್ಯಾಂಪೈನ್‌ ಅನಾಲಿಸಿಸ್‌
  • ರಿಜಿಟಲ್‌ ಮಾರ್ಕೆಟಿಂಗ್‌ ಬಜೆಟ್‌ ಅಥವಾ ಆಯವ್ಯಯ ರಚಿಸುವುದು
  • ಸಂಪನ್ಮೂಲ ಯೋಜನೆ
  • ವೆಚ್ಚ ಅಂದಾಜು
  • ವೆಚ್ಚ ನಿಯಂತ್ರಣ
  • ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲದ ಮೂಲಕ ಹಣ ಸಂಪಾದನೆ
  • ಡಿಜಿಟಲ್‌ ಮಾರ್ಕೆಟಿಂಗ್‌ ಕ್ಷೇತ್ರದ ಸ್ಪರ್ಧೆ ಮತ್ತು ಅವಕಾಶಗಳು

Related Posts

error: Content is protected !!
Scroll to Top