ಕನ್ನಡ ಕ್ಯಾಡ್‌ನೆಸ್ಟ್ ಕರಿಯರ್ ಗೈಡ್ ಮಾಲಿಕೆಯಲ್ಲಿ ಈ ಹಿಂದೆ ಜಾಬ್ ಇಂಟರ್ ವ್ಯೂನಲ್ಲಿ ಕೇಳಬಹುದಾದ ಹಲವು ಪ್ರಶ್ನೆಗಳ ವಿವರ ಮತ್ತು ಅದಕ್ಕೆ ಹೇಗೆ ಉತ್ತರಿಸಬಹುದೆಂಬ ಮಾಹಿತಿ ನೀಡಲಾಗಿತ್ತು. ಆ ಸಂಚಿಕೆಯ ಮುಂದುವರೆದ ಭಾಗ ಇಲ್ಲಿದೆ.
ಇದನ್ನೂ ಓದಿ:ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ?
ಕನ್ನಡ ಕ್ಯಾಡ್‌ನೆಸ್ಟ್‌ನಲ್ಲಿ ಈಗಾಗಲೇ ಉದ್ಯೋಗ, ಶಿಕ್ಷಣ ಮತ್ತು ಯಶಸ್ಸಿಗೆ ಸಂಬಂಧಪಟ್ಟಂತೆ ಹಲವು ಲೇಖನಗಳು ಪ್ರಕಟಗೊಂಡಿದ್ದು, ನೀವು ಇದೇ ಮೊದಲ ಬಾರಿಗೆ ಈ ಬ್ಲಾಗ್‌ಗೆ ಭೇಟಿ ನೀಡಲು ಮರೆಯಬೇಡಿ. ಇಲ್ಲಿರುವ ಮಾಹಿತಿಗಳನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಮರೆಯಬೇಡಿ.
* ಸ್ಯಾಲರಿ ಪ್ರಶ್ನೆ: ನಿಮಗೆಷ್ಟು ಸ್ಯಾಲರಿ ಬೇಕು?
ಸ್ಯಾಲರಿ ಅಂದರೆ ಎಲ್ಲರಿಗೂ ಇಷ್ಟ. ಉದ್ಯೋಗ ಮಾಡುವ ಪ್ರಮುಖ ಉದ್ದೇಶವೂ ಇದು ಎಂದರೆ ಸುಳ್ಳಾಗದು. ಇಂತಹ ಪ್ರಶ್ನೆಗೆ ಉತ್ತರಿಸಲು ಬಹುತೇಕರು ಸಿದ್ಧತೆ ನಡೆಸಿರುತ್ತಾರೆ. ಇದಕ್ಕೆ ತಕ್ಷಣ ಇದಮಿತ್ತಂ ಎಂದು ಉತ್ತರಿಸಬೇಡಿ. ಅದರ ಬದಲು, ನನಗೆ ಈ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ನೀಡಿ ಎಂದು ನೀವೇ ಪ್ರಶ್ನಿಸಿ. ಈ ರೀತಿ ಒಂದಿಷ್ಟು ಅವರಿಂದ ವಿವರ ಪಡೆದು ವೇತನದ ಕುರಿತು ತುಸು ಹಿಂಟ್ ನೀಡಬಹುದು.
* ನಮ್ಮ ಆರ್ಗನೈಜೇಷನ್‌ಗೆ ನೀವು ಹೇಗೆ ಬೆಸ್ಟ್ ಪ್ರಾಪರ್ಟಿ ಆಗಬಲ್ಲಿರಿ?
ನೀವು ಮೊದಲೇ ಕಂಪನಿಯ ಕುರಿತು ತಿಳಿದುಕೊಂಡು ಸಂದರ್ಶನಕ್ಕೆ ಬಂದರೆ ಈ ಪ್ರಶ್ನೆಗೆ ಉತ್ತರಿಸುವುದು ಸುಲಭ. ನಿಮ್ಮ ಹುದ್ದೆಗೆ ಸಂಬಂಧಪಟ್ಟ ಅತ್ಯುತ್ತಮ ಅಂಶಗಳನ್ನು ವಿವರಿಸಿ. ನಿಮ್ಮ ಕೌಶಲವು ಕಂಪನಿಗೆ ಹೇಗೆ ಪ್ರಯೋಜನವಾಗಬಹುದು ಎಂದು ತಿಳಿಸಿರಿ.
* ಟೀಮ್ ನಿರ್ವಹಣೆ ಮಾಡುವ ಛಾತಿ ನಿಮಗಿದೆಯಾ?
ಈ ಪ್ರಶ್ನೆಗೆ ಉದಾಹರಣೆ ಸಹಿತ ಉತ್ತರ ನೀಡಿ. ಹಿಂದಿನ ಕಂಪನಿಯಲ್ಲಿ ನೀವು ತಂಡವನ್ನು ಹೇಗೆ ಸಮರ್ಥವಾಗಿ ನಿಭಾಯಿಸಿದ್ದೀರಿ ಇತ್ಯಾದಿಗಳನ್ನು ತಿಳಿಸಿ.
* ನಮ್ಮ ಕಂಪನಿಯಲ್ಲಿ ಎಷ್ಟು ವರ್ಷಗಳ ಕಾಲ ಜಾಬ್ ಮಾಡುವ ಯೋಚನೆಯಲ್ಲಿದ್ದೀರಿ?
ಜಾಬ್ ಚೇಂಜ್ ಎನ್ನುವುದು ಈಗಿನ ಟ್ರೆಂಡ್. ಹೀಗಾಗಿ ಇಂತಹ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳಲಾಗುತ್ತದೆ. ನಾನು ದೀರ್ಘಕಾಲ ಈ ಸಂಸ್ಥೆಯಲ್ಲಿ ಉದ್ಯೋಗ ಮಾಡಲು ಇಚ್ಚಿಸುತ್ತೇನೆ ಎಂದು ಹೇಳಿ. ನಾನು ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಅನಿಸುವ ತನಕ ಕೆಲಸ ಮಾಡುತ್ತೇನೆ ಎಂದು ಹೇಳಿರಿ. ಇದರ ಬದಲು ತಾತ್ಕಾಲಿಕವಾಗಿ ಇರುತ್ತೇನೆ ಎಂದರೆ ನಿಮ್ಮನ್ನು ನೇಮಕ ಮಾಡುವ ಗೋಜಿಗೆ ಅವರು ಹೋಗಲಾರರು.
* ಜಾಬ್ ಕಟ್ ಅನುಭವ: ನೀವು ಯಾರನ್ನಾದರು ಕೆಲಸದಿಂದ ತೆಗೆದು ಹಾಕಿದ್ದೀರಾ?
ಎಚ್‌ಆರ್‌ಗಳು ಇಂತಹ ಪ್ರಶ್ನೆಯನ್ನು ನಿಮ್ಮಲ್ಲಿ ಕೇಳುತ್ತಾರೆ. ನೀವು ಹಳೆಯ ಕಂಪನಿಯಲ್ಲಿ ಯಾರನ್ನಾದರೂ ಫೈರ್ ಮಾಡಿದ್ದೀರಾ ಎಂಬ ಪ್ರಶ್ನೆ ಅತ್ಯಂತ ಸೀರಿಯಸ್ ಆಗಿದ್ದು, ಜಾಗರೂಕತೆಯಿಂದ ಉತ್ತರಿಸಿ. ಹೌದು ಎಂದಲ್ಲಿ ಸ್ಪಷ್ಟ ಕಾರಣಗಳನ್ನು ನೀಡಿರಿ.
* ಉದ್ಯೋಗದ ಕುರಿತು ನಿಮ್ಮ ಫಿಲಾಸಫಿ ಏನು?
ಫಿಲಾಸಪಿ ಎಂದಾಕ್ಷಣ ತತ್ವಜ್ಞಾನಿಯಂತೆ ಉತ್ತರಿಸಬೇಕಿಲ್ಲ. ಈ ಪ್ರಶ್ನೆಗೆ ದೊಡ್ಡ ಸಂಶೋಧನಾ ಬರಹ ಮಂಡಿಸಿದಂತೆ ಉತ್ತರಿಸಬೇಡಿ. ಸರಳವಾಗಿ ಮತ್ತು ಸಕಾರಾತ್ಮಕವಾಗಿ ಉತ್ತರ ನೀಡಿದರೆ ಸಂದರ್ಶಕರಿಗೆ ಇಂಪ್ರೆಸ್ ಆಗುವುದು ಖಂಡಿತ.
* ನಿಮ್ಮನ್ನು ಯಾಕೆ ಈ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಬೇಕು?
ಕಂಪನಿಯ ಅವಶ್ಯಕತೆಗೆ ನಿಮ್ಮಲ್ಲಿರುವ ಸ್ಕಿಲ್ ಸೆಟ್ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿರಿ. ಆದರೆ, ಈ ಪ್ರಶ್ನೆಗೆ ಉತ್ತರಿಸುವಾಗ ಇನ್ನೊಬ್ಬ ಅಭ್ಯರ್ಥಿಗೆ ನಿಮ್ಮನ್ನು ಹೋಲಿಸಲು ಹೋಗದಿರಿ. ಅವನಿಗಿಂತ ನಾನು ಬೆಸ್ಟ್ ಎನ್ನಬೇಡಿ.
* ನೀವು ಹಿಂದಿನ ಕಂಪನಿಗೆ ಉಪಯೋಗವಾಗುವಂತೆ ನೀಡಿದ ಬೆಸ್ಟ್ ಟಿಪ್ಸ್ ಯಾವುದು?
ಐಡಿಯಾ ಮಾಡುವ ಉದ್ಯೋಗಿಗಳೆಂದರೆ ಎಲ್ಲಾ ಕಂಪನಿಗಳಿಗೂ ಇಷ್ಟ. ನೀವು ಈ ಹಿಂದೆ ಕಂಪನಿಯಲ್ಲಿ ನೀಡಿರುವ ಸಲಹೆಯೊಂದನ್ನು ಕಂಪನಿ ಒಪ್ಪಿಕೊಂಡಿರುವುದು, ಅದು ಯಶಸ್ವಿಗೊಂಡಿರುವುದರ ಕುರಿತು ತಿಳಿಸಿ. ಇಂತಹ ಪ್ರಶ್ನೆಗಳಿಗೆ ಉದಾಹರಣೆ ಸಹಿತ ವಿವರಿಸಿರಿ. ಸುಳ್ಳು ಹೇಳಬೇಡಿ. ನೆನಪಿಸಿಕೊಂಡು ಹೇಳಿರಿ.
* ನಿಮ್ಮಲ್ಲಿರುವ ಸ್ಟ್ರೆಂಥ್ ಏನು? ಅವುಗಳಲ್ಲಿ ಅತ್ಯುತ್ತಮವಾಗಿರುವುದು ಯಾವುದು?
ನಿಮ್ಮಲ್ಲಿರುವ ಹಲವು ಒಳ್ಳೆಯ ಸಾಮರ್ಥ್ಯಗಳನ್ನು ತಿಳಿಸಿರಿ. ಒತ್ತಡದಲ್ಲಿಯೂ ಕಾರ್ಯನಿರ್ವಹಣೆ ಮಾಡುವ ಸಾಮರ್ಥ್ಯ, ಪ್ರಾಜೆಕ್ಟ್ ಬಗ್ಗೆ ವಿಶೇಷ ಗಮನ ನೀಡುವ ಸಾಮರ್ಥ್ಯ ನಿಮ್ಮಲ್ಲಿರುವ ನಾಯಕತ್ವ ಕೌಶಲ, ನಿಮ್ಮ ಸಕಾರಾತ್ಮಕ ಮನೋಭಾವ ಇತ್ಯಾದಿಗಳ ಬಗ್ಗೆ ತಿಳಿಸಿರಿ. ನಿಮ್ಮ ಸ್ಟ್ರೆಂಥ್ ಬಗ್ಗೆ ಅತಿರೇಕವಾಗಿ ಹೇಳಬೇಡಿ.
* ನಿಮ್ಮ ಡ್ರೀಮ್ ಉದ್ಯೋಗ ಹೇಗಿರಬೇಕು?
ಈಗ ಸಂದರ್ಶನ ಎದುರಿಸುತ್ತಿರುವ ಉದ್ಯೋಗವೇ ನಿಮ್ಮ ಡ್ರೀಮ್ ಜಾಬ್ ಎನ್ನಬೇಡಿ. ಉನ್ನತ ಹುದ್ದೆಯೊಂದರ ಬಗ್ಗೆಯೂ ಹೇಳಬೇಡಿ. ನಿಮ್ಮ ಕನಸಿನ ಉದ್ಯೋಗವೆಂದರೆ ನಾನು ಎಲ್ಲಿ ಜಾಬ್ ಮಾಡಲು ಇಷ್ಟಪಡುವೆನೋ, ಅಲ್ಲಿನ ಜನರಿಗೆ ಎಷ್ಟು ಆಪ್ತನಾಗುತ್ತೇನೋ, ಎಲ್ಲಿ ನನಗೆ ಅತ್ಯುತ್ತಮ ಪ್ರೋತ್ಸಾಹ ದೊರಕುತ್ತದೆಯೋ, ಎಲ್ಲಿ ನನ್ನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಗುತ್ತದೆಯೋ… ಇತ್ಯಾದಿ ಒಗ್ಗರಣೆಗಳೊಂದಿಗೆ ನಿಮ್ಮ ಡ್ರೀಮ್ ಜಾಬ್ ಬಗ್ಗೆ ತಿಳಿಸಿರಿ.
ನಿಮ್ಮ ಮುಂದಿನ ಉದ್ಯೋಗ ಸಂದರ್ಶನಕ್ಕೆ ಕನ್ನಡ ಕ್ಯಾಡ್‌ನೆಸ್ಟ್ ಕಡೆಯಿಂದ ಗುಡ್‌ಲಕ್. ಶುಭವಾಗಲಿ.
ಕ್ಯಾಡ್‌ನೆಸ್ಟ್ ನಲ್ಲಿ ಲಭ್ಯವಿರುವ ನೂರಾರು ಕೋರ್ಸ್‌ಗಳ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಕ್ಯಾಡ್‌ನೆಸ್ಟ್ ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವೆಬ್‌ಸೈಟ್‌ನಲ್ಲಿ ನೀಡಲಾದ ವಾಟ್ಸಪ್ ಬಟನ್ ಕ್ಲಿಕ್ ಮಾಡುವ ಮೂಲಕ ಕನ್ನಡ ಕ್ಯಾಡ್‌ನೆಸ್ಟ್ ಅನ್ನು ನೀವು ವಾಟ್ಸಪ್ ಮೂಲಕವೂ ಸಂಪರ್ಕಿಸಬಹುದು.
JOB Oriented & Certification Training Courses
Popular & Trending courses
Best Tally ERP 9 Training in bangalore & Best Tally ERP 9 Training Institute in Rajajinagar, Basavanagudi , Sheshadripuram & Malleshwaram
Advanced Digital Marketing Course
CADD NEST
The best computer training centre in Bangalore, Karnataka
best computer training institute
Join CADD NEST CADD courses
IT courses,Animation courses,Digital Marketing courses,Spoken English,Handwriting courses,
CADD NEST computer training centre in Rajajinagar, Basavanagudi , Sheshadripuram & Malleshwaram offers wide range of skill development courses
CADD NEST CADD Courses