Kannada CADD Nest Private Limited

Tally ERP 9 ಕಲಿಯಿರಿ: ಜಿಎಸ್ಟಿ ನಮೂನೆಗಳ ಬಗ್ಗೆ ತಿಳಿದುಕೊಳ್ಳಿ

Tally ERP 9 ಕಲಿಯಿರಿ: ಜಿಎಸ್ಟಿ ನಮೂನೆಗಳ ಬಗ್ಗೆ ತಿಳಿದುಕೊಳ್ಳಿ

ಬೆಂಗಳೂರಿನ ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿರುವ ಕ್ಯಾಡ್‌ನೆಸ್ಟ್‌‌ ಅಂದರೆ ಭಾರತೀಯ ಅಕಾಡೆಮಿ ಆಫ್‌ ಲಿಂಗ್ವಿಸ್ಟಿಕ್ಸ್‌ ಆಂಡ್ ಕಮ್ಯುನಿಕೇಷನ್‌ನ ಅತ್ಯಂತ ಜನಪ್ರಿಯ ಕೋರ್ಸ್‌ಗಳಲ್ಲಿ tally erp 9 course ಒಂದಾಗಿದೆ. ಜಿಎಸ್‌ಟಿ ಪಾವತಿಯನ್ನು ಕಂಪನಿಗಳು, ವ್ಯವಹಾರಗಳು ಟ್ಯಾಲಿ ಇಆರ್‌ಪಿ ೯ ತಿಳಿದವರಿಂದ ಮಾಡಿಸುತ್ತಿರುವುದು ಈ ಕೋರ್ಸ್‌ನ ಬೇಡಿಕೆಗೆ ಇರುವ ಕಾರಣ. ಜೊತೆಗೆ ಪ್ರತಿತಿಂಗಳು ಜಿಎಸ್‌ಟಿ ನಮೂನೆಗಳನ್ನು ಸಲ್ಲಿಸಬೇಕಾದ ಕೆಲಸವನ್ನು ಸರಳವಾಗಿ ಮಾಡುವ ಸಾಫ್ಟ್ವೇರ್‌ ಬಗ್ಗೆ ಕಲಿತಿದ್ದರೆ ವಿವಿಧ ಟ್ಯಾಕ್ಸೆಷನ್, ಅಕೌಂಟಿಂಗ್‌ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ. ಹೀಗಾಗಿ ಟ್ಯಾಲಿ ಇಆರ್‌ಪಿ ೯ ಎನ್ನುವುದು ನಮ್ಮಲ್ಲಿಯ ಬಹುಬೇಡಿಕೆಯ ಕೋರ್ಸ್‌. ಈ ಕೋರ್ಸ್‌ ಬಗ್ಗೆ ನಮ್ಮಲ್ಲಿ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ ಮತ್ತು ನೀಡಲಾದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ.

ಈ ಬ್ಲಾಗ್‌ನಲ್ಲಿ ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ಮತ್ತು ಟ್ಯಾಲಿ ಇಆರ್‌ಪಿ೯ ಕಲಿಯಲು ಆಸಕ್ತಿ ಇರುವವರಿಗಾಗಿ ಜಿಎಸ್‌ಟಿಯಡಿ ಬರುವ ವಿವಿಧ ನಮೂನೆಗಳನ್ನು ಮತ್ತು ಅವುಗಳ ಸಂಕ್ಷಿಪ್ತ ವಿವರಣೆಯನ್ನು ನೀಡಲಾಗಿದೆ. ಜಿಎಸ್‌ಟಿ ಕುರಿತಾದ ಸಾಮಾನ್ಯ ಜ್ಞಾನ ಹೆಚ್ಚಿಸಲೂ ಇದು ನಿಮಗೆ ನೆರವಾಗುತ್ತದೆ. ಈ ಸಂಚಿಕೆಯಲ್ಲಿ ನಿಯಮಿತ ಡೀಲರ್‌ಗಳು ಸಲ್ಲಿಸಬೇಕಾದ ನಮೂನೆಗಳು ಮತ್ತು ಸಲ್ಲಿಸಬೇಕಾದ ಸಮಯ, ಸಲ್ಲಿಸಬೇಕಾದ ಗಡುವು ಮತ್ತು ಸಲ್ಲಿಸಬೇಕಾದ ವಿವರಗಳ ಮಾಹಿತಿ ನೀಡಲಾಗಿದೆ.

ನಮೂನೆ GSTR-1: ಇದನ್ನು ಮಾಸಿಕವಾಗಿ ಪಾವತಿಸಬೇಕು. ಮುಂದಿನ ತಿಂಗಳ ೧೦ನೇ ತಾರೀಕಿನ ಮೊದಲು ಪಾವತಿಸಬೇಕು. ತೆರಿಗೆಗೆ ಒಳಗಾಗುವ ಔಟ್‍ವಾರ್ಡ್ ಸರಕುಗಳು ಮತ್ತು/ಅಥವಾ ಸೇವೆಗಳ ವಿವರಗಳನ್ನು ಇದರಲ್ಲಿ ಒದಗಿಸಬೇಕು.

ನಮೂನೆ GSTR-2A: ಇದನ್ನು ಮಾಸಿಕವಾಗಿ ಪಾವತಿಸಬೇಕು. ಮುಂದಿನ ತಿಂಗಳ ೧೧ನೇ ತಾರೀಕಿನ ಮೊದಲು ಪಾವತಿಸಬೇಕು. ಪೂರೈಕೆದರರು ಸಲ್ಲಿಸಿದ ನಮೂನೆ GSTR -1 ಆಧಾರದಲ್ಲಿ ಸ್ವೀಕರಿಸುವವರಿಗೆ ಒದಗಿಸಲಾಗುವ ಇನ್ವಾರ್ಡ್ ಪೂರೈಕೆಗಳ ಸ್ವಯಂಚಾಲಿತವಾಗಿ ಸೃಜಿಸಿದ ವಿವರಗಳನ್ನು ಸಲ್ಲಿಸಬೇಕು.

ನಮೂನೆ GSTR-2: ಇದನ್ನು ಮಾಸಿಕವಾಗಿ ಪಾವತಿಸಬೇಕು. ಮುಂದಿನ ತಿಂಗಳ ೧೧ನೇ ತಾರೀಕಿನ ಮೊದಲು ಪಾವತಿಸಬೇಕು. ಮುಂದಿನ ತಿಂಗಳ ೧೫ನೇ ತಾರೀಕಿನ ಮೊದಲು ಪಾವತಿಸಬೇಕು. ಇನ್ಪುಟ್ ತೆರಿಗೆ ಕ್ರೆಡಿಟ್‍ನ ಕ್ಲೈಮ್‍ಗಾಗಿ ತೆರಿಗೆಗೆ ಒಳಪಡುವ ಸರಕು ಮತ್ತು/ಅಥವಾ ಸೇವೆಗಳನ್ನು ಇನ್ವಾರ್ಡ್ ಪೂರೈಕೆಗಳ ವಿವರಗಳುನಲ್ಲಿ ಸಲ್ಲಿಸಬೇಕು. ನಮೂನೆ GSTR-2Aಯಲ್ಲಿ ಸೇರಿಸುವಿಕೆ(ಕ್ಲೈಮ್) ಅಥವ ಬದಲಾವಣೆಗಾಗಿ ನಮೂನೆ GSTR -2 ಸಲ್ಲಿಸಬೇಕು.

ನಮೂನೆ GSTR-1A: ಇದನ್ನು ಮಾಸಿಕವಾಗಿ ಪಾವತಿಸಬೇಕು. ಮುಂದಿನ ತಿಂಗಳ ೧೭ನೇ ತಾರೀಕಿನ ಮೊದಲು ಪಾವತಿಸಬೇಕು. ಸ್ವೀಕರಿಸುವವರು ನಮೂನೆಯಲ್ಲಿ ಸೇರಿಸಲಾದ, ಸರಿಪಡಿಸಿಲಾದ ಅಥವಾ ಅಳಿಸಲಾದ ಔಟ್‍ವಾರ್ಡ್ ಸಪ್ಲೈಗಳ ವಿವರಗಳು ಪೂರೈಕೆದಾರಿಗೆ ಲಭ್ಯವಾಗುವಂತೆ ಮಾಡಬೇಕು.

ನಮೂನೆ GSTR-3: ಇದನ್ನು ಮಾಸಿಕವಾಗಿ ಪಾವತಿಸಬೇಕು. ಮುಂದಿನ ತಿಂಗಳ ೨೦ನೇ ತಾರೀಕಿನ ಮೊದಲು ಪಾವತಿಸಬೇಕು. ತೆರಿಗೆಯ ಮೊತ್ತದ ಪ್ರಮಾಣದ ಪಾವತಿಯ ಜೊತೆಗೆ ಔಟ್ ವಾರ್ಡ್ ಪೂರೈಕೆಗಳು ಮತ್ತು ಇನ್ವಾರ್ಡ್ ಪೂರೈಕೆಗಳ ವಿವರಗಳ ಅಂತಿಮಗೊಳಿಸುವಿಕೆಯ ಆಧಾರದ ಮೇಲೆ ಮಾಸಿಕವಾಗಿ ಸಲ್ಲಿಸಬೇಕು.

ನಮೂನೆ GST MIS-1: ಮಾಸಿಕವಾಗಿ ಸಲ್ಲಿಸಬೇಕು. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್‍ನ ಸ್ವೀಕಾರ, ವ್ಯತ್ಯಾಸ ಅಥವಾ ಡುಪ್ಲಿಕೇಷನ್‍ಗಳ ಬಗ್ಗೆ ವಿವರ ಸಲ್ಲಿಸಬೇಕು.

ನಮೂನೆ GSTR-3A: ನೋಂದಾಯಿತ ತೆರಿಗೆದಾರ ವ್ಯಕ್ತಿ ಪರಿಚ್ಛೇದ 27 ಮತ್ತು ಪರಿಚ್ಛೇದ 31ರ ಅಡಿಯಲ್ಲಿ ತೆರಿಗೆ ಸಲ್ಲಿಸಲು ವಿಫಲವಾದರೆ ನೋಟೀಸು ಈ ಫಾರ್ಮ್‌ನಲ್ಲಿ ಬರುತ್ತದೆ.

ನಮೂನೆ GSTR-9: ಇದು ವರ್ಷಕ್ಕೊಮ್ಮೆ ಸಲ್ಲಿಸಬೇಕಾದ ನಮೂನೆ. ಮುಂದಿನ ಆರ್ಥಿಕ ವರ್ಷದ ಡಿಸೆಂಬರ್ 31ನೇ ತಾರೀಕಿನ ಮೊದಲು ಸಲ್ಲಿಸಿದರೆ ಆಯ್ತು. ವಾರ್ಷಿಕ ಸಲ್ಲಿಕೆ- ಪಡೆಯಲಾದ ಐಟಿಸಿ ವಿವರಗಳು ಮತ್ತು ಪಾವತಿಸಲಾದ ಸ್ಥಳೀಯ, ಅಂತರರಾಜ್ಯ ಮತ್ತು ಆಮದು/ರಫ್ತುಗಳ ಜಿ.ಎಸ್.ಟಿ.ಯ ವಿವರಗಳನ್ನು ಸಲ್ಲಿಸಬೇಕು.

ಜಿಎಸ್‌ಟಿ ಫಾರ್ಮ್‌ ಸಲ್ಲಿಸಲು ಎಷ್ಟೆಲ್ಲ ನಮೂನೆಗಳಿವೆ ಎಂಬ ಮಾಹಿತಿಯನ್ನು ನೋಡಿದಾಗ ಅಯ್ಯೋ ಜಿಎಸ್‌ಟಿ ಸಲ್ಲಿಕೆ ಎಷ್ಟು ಕಷ್ಟವೆಂದು ಅರಿವಾಗಿರಬಹುದು. ಈ ಕಷ್ಟವನ್ನು ಸುಲಭಗೊಳಿಸಲು ಟ್ಯಾಲಿ ಟಿಆರ್‌ಪಿ೯ ಸಾಫ್ಟ್‌ವೇರ್‌ ಇದೆ. ಈ ಸಾಫ್ಟ್‌ವೇರ್‌ ಬಗ್ಗೆ ನೀವು ಒಂದು ಕೋರ್ಸ್‌ ಮಾಡಿ ಚೆನ್ನಾಗಿ ಕಲಿತರೆ ಎಲ್ಲಾ ಜಿಎಸ್‌ಟಿ ಪಾವತಿದಾರರಿಗೂ ನೀವು ಬಹುಬೇಡಿಕೆಯ ವ್ಯಕ್ತಿಯಾಗುವಿರಿ.

ಇನ್ನೇಕೆ ತಡ ಕ್ಯಾಡ್‌ನೆಸ್ಟ್‌‌ನ ಟ್ಯಾಲಿ ಇಆರ್‌ಪಿ೯ ಕೋರ್ಸ್‌ಗೆ ಇಂದೇ ಸೇರಿರಿ. ಶುಭದಿನ.

Related Posts

error: Content is protected !!
Scroll to Top