ಕನ್ನಡ ಕ್ಯಾಡ್ನೆಸ್ಟ್ ಓದುಗರಿಗೆ ನಮಸ್ಕಾರ. ಈಗಾಗಲೇ ವಿವಿಧ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಕನ್ನಡಕ್ಯಾಡ್ನೆಸ್ಟ್.ಕಾಂನ ಪ್ರಯೋಜನ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ನೀವು ಕಳುಹಿಸುವ ವಾಟ್ಸ್ಆಪ್ ಸಂದೇಶಗಳು, ಇಮೇಲ್ಗಳೇ ಸಾಕ್ಷಿ. ಇದರಿಂದ ಇನ್ನಷ್ಟು ಖುಷಿಗೊಂಡ ನಾವು ಇಂದು ಒಂದು ಒಳ್ಳೆಯ ವಿಷಯದೊಂದಿಗೆ ಬಂದಿದ್ದೇವೆ.
ನಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಏನೋ ಓದಿರುತ್ತಾರೆ. ಕಷ್ಟಪಟ್ಟು ಉದ್ಯೋಗ ಹುಡುಕುತ್ತಾರೆ. ಎಲ್ಲೆಲ್ಲೂ ರಿಜೆಕ್ಟ್ ಆಗುತ್ತಾರೆ. ಎಷ್ಟು ಕಷ್ಟಪಟ್ಟರೂ ಉದ್ಯೋಗ ದೊರಕುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಾರೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಆಲೋಚಿಸಿ ಕನ್ನಡ ಕ್ಯಾಡ್ನೆಸ್ಟ್ ನಿಮಗೆ ಒಂದಿಷ್ಟು ಅಮೂಲ್ಯ ಟಿಪ್ಸ್ಗಳನ್ನು ಈ ಮೂಲಕ ನೀಡುತ್ತಿದೆ.
ಅಯ್ಯೋ, ನನಗಿನ್ನೂ ಜಾಬ್ ಸಿಕ್ಕಿಲ್ಲ!
ನಿಮ್ಮ ಜೊತೆಗೆ ಓದಿರುವ, ಜಸ್ಟ್ ಪಾಸ್ ಆಗುತ್ತಿದ್ದ ಸ್ನೇಹಿತನಿಗೆ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ದೊರಕಿದೆ. ನೀವು ಪದವಿ ಮುಗಿಸಿ ಒಂದು ವರ್ಷ ಕಳೆದರೂ ಉದ್ಯೋಗ ಪಡೆದಿಲ್ಲ, ಆದರೆ, ನಿಮ್ಮ ಜೂನಿಯರ್ಗಳಿಗೆ ಉದ್ಯೋಗ ಸಿಕ್ಕಿದೆ. ನೀವು ಹಲವು ಕಂಪನಿಗಳಿಗೆ ರೆಸ್ಯೂಂ ಕಳುಹಿಸಿದ್ದೀರಿ. ಲೆಕ್ಕವಿಲ್ಲದಷ್ಟು ಇಂಟರ್ವ್ಯೂಗಳನ್ನು ಅಟೆಂಡ್ ಆಗಿದ್ದೀರಿ. ಎಲ್ಲೆಡೆಯೂ `ಬೆಟರ್ ಲಕ್ ನೆಕ್ಸ್ಟ್ ಟೈಂ’ ಎಂಬ ಮಾತೇ ಕೇಳುತ್ತಾದೆ. ಯಾರೂ ಜಾಬ್ ನೀಡುತ್ತಿಲ್ಲ.
ನಿಮ್ಮ ರೆಸ್ಯೂಂನಲ್ಲಿ ತಪ್ಪಿದೆ!
ಬೇರೆಬೇರೆ ಕ್ಷೇತ್ರಕ್ಕೆ ಬೇರೆ ಬೇರೆ ಬಗೆಯ ರೆಸ್ಯೂಂ ಮಾದರಿಗಳು ಇರುತ್ತವೆ. ನೀವು ರಚಿಸಿದ ರೆಸ್ಯೂಂ ಮಾದರಿಯು ನೀವು ಅರ್ಜಿ ಸಲ್ಲಿಸಿದ ಹುದ್ದೆಗೆ ಹೊಂದಾಣಿಕೆಯಾಗದೆ ಇರಬಹುದು. ಅದರಲ್ಲಿ, ಉದ್ಯೋಗದಾತರು ಬಯಸಿದ ಕೌಶಲ, ಶೈಕ್ಷಣಿಕ ಅರ್ಹತೆ, ಅನುಭವ ಇತ್ಯಾದಿ ಮಾಹಿತಿಗಳ ಜೋಡಣೆ ಸಮರ್ಪಕವಾಗಿರದೆ ಇರಬಹುದು. ನೀವು ಕೆಲಸ ಮಾಡಲು ಇಚ್ಚಿಸುವ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ರೆಸ್ಯೂಂ ಅಥವಾ ಸಿವಿಯನ್ನು ಸಿದ್ಧಪಡಿಸಿರಿ. ನಿರ್ದಿಷ್ಟವಾದ ರೆಸ್ಯೂಂ ಅಥವಾ ಸಿವಿ ಇಂದಿನ ಅವಶ್ಯಕತೆ ಎನ್ನುವುದನ್ನು ಮರೆಯಬೇಡಿ.
ರೆಸ್ಯೂಂ ನಾಟ್ ಇಂಟ್ರೆಸ್ಟಿಂಗ್
ಕಂಪನಿಗಳಿಗೆ ದಿನಕ್ಕೆ ಹಲವು ನೂರು ರೆಸ್ಯೂಂಗಳು ಬರುತ್ತವೆ. ಅವರ ಕಣ್ಣಿಗೆ ನಿಮ್ಮ ರೆಸ್ಯೂಂ ವಿಶೇಷವಾಗಿರುವಂತೆ ಕಾಣಿಸದೆ ಇರಬಹುದು. ಆದಷ್ಟು ಅತ್ಯುತ್ತಮವಾಗಿ ಮತ್ತು ವಿನೂತನವಾಗಿ ರೆಸ್ಯೂಂ ಬರೆದು ಕಳುಹಿಸಿರಿ. ಈಗಿನ ಟೆಕ್ ಜಗತ್ತಿನಲ್ಲಿ ತುಂಬಾ ಇಂಟ್ರೆಸ್ಟಿಂಗ್ ಆಗಿ ರೆಸ್ಯೂಂ ರಚಿಸಲು ಸಾಕಷ್ಟು ಮಾಹಿತಿಗಳು, ತಂತ್ರಜ್ಞಾನಗಳು ನೆರವಾಗುತ್ತವೆ. ಹೀಗಾಗಿ, ಕ್ರಿಯೇಟಿವ್ ಆಗಿ ಯೋಚಿಸಿ ರೆಸ್ಯೂಂ ರಚಿಸಿ.
ತಯಾರಿ ಇಲ್ಲದೆ ಸಂದರ್ಶನಕ್ಕೆ ಬರುವುದು
ನೀವು ತುಂಬಾ ಪ್ರತಿಭಾನ್ವಿತರು. ಆದರೆ, ಸಂದರ್ಶನದ ವಿಷಯಕ್ಕೆ ಬಂದಾಗ ಏನೋ ಅಳುಕು, ನರ್ವಸ್ ಆಗುವಿರಿ. ಇದಕ್ಕೆ ಕಾರಣವಾಗಿರುವುದು ನೀವು ಸಿದ್ಧತೆ ನಡೆಸದೆ ಸಂದರ್ಶನಕ್ಕೆ ಬರುವುದಾಗಿದೆ. ಬಹುತೇಕರು ಯಾವುದೇ ಸಿದ್ಧತೆ ನಡೆಸದೆ ಬಂದು ಸಂದರ್ಶಕರ ಮುಂದೆ ತಬ್ಬಿಬ್ಬಾಗುತ್ತಾರೆ. ಉದ್ಯೋಗ ಕ್ಷೇತ್ರಕ್ಕೆ ಸಂಬಂಧಪಟ್ಟ ಇತ್ತೀಚಿನ ಮಾಹಿತಿಗಳು ತಿಳಿಯದೆ ಇರುವುದು, ಕಂಪನಿಯ ವೆಬ್ಸೈಟ್ನಲ್ಲಿ ಕಂಪನಿಯ ಕುರಿತಾಗಿ ಇರುವ ಮಾಹಿತಿಗಳನ್ನು ಅಧ್ಯಯನ ಮಾಡದೆ ಇರುವುದು, ಅರ್ಜಿ ಸಲ್ಲಿಸಿದ ಉದ್ಯೋಗ ಏನು ಕೌಶಲ ಬಯಸುತ್ತದೆ ಎಂದು ತಿಳಿದುಕೊಳ್ಳದೆ ಇರುವುದು… ಹೀಗೆ ಹಲವು ವಿಷಯಗಳನ್ನು ಸಂದರ್ಶನಕ್ಕೆ ಬರುವ ಮೊದಲೇ ತಿಳಿದುಕೊಳ್ಳದೆ ಬಂದರೆ ಸಂದರ್ಶನದಲ್ಲಿ ವಿಫಲವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕನ್ನಡ ಕ್ಯಾಡ್ನೆಸ್ಟ್ನ ವಿದ್ಯಾರ್ಥಿ ಸ್ನೇಹಿತರೇ ಸಿದ್ಧತೆ ಮಾಡದೆ ಸಂದರ್ಶನ ಎದುರಿಸಬೇಡಿ.
ಡ್ರೆಸಿಂಗ್ ಬಗ್ಗೆ ಗಮನ ನೀಡದೆ ಇರುವುದು
ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಯಾವ ಡ್ರೆಸ್ ಹಾಕುವಿರಿ? ಯೆಸ್, ಸಂದರ್ಶಕರ ಗಮನ ಸೆಳೆಯುವಲ್ಲಿ ನಿಮ್ಮ ಡ್ರೆಸಿಂಗ್ ಸೆನ್ಸ್ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಆಯಾ ಕಂಪನಿಯ ಸಂಸ್ಕøತಿಗಳನ್ನು ಗಮನದಲ್ಲಿಟ್ಟುಕೊಂಡು ನೀಟಾಗಿ ಡ್ರೆಸ್ ಮಾಡಿಕೊಂಡು ಸಂದರ್ಶನಕ್ಕೆ ಹೋಗಿ. ಆದಷ್ಟು ನಿಮ್ಮ ಉಡುಗೆ ತೊಡುಗೆ ವೃತ್ತಿಪರವಾಗಿರಲಿ.
ನಿಮ್ಮ ವರ್ತನೆ ಪ್ರೊಫೆಷನಲ್ ಆಗಿದೆಯೇ?
ಸಂದರ್ಶನದ ಸಮಯದಲ್ಲಿ ನಿಮ್ಮ ವರ್ತನೆಯು ವೃತ್ತಿಪರವಾಗಿರಬೇಕು. ನಿಮ್ಮ ವರ್ತನೆಯು ಆ ಕಂಪನಿಯ ಸಂಸ್ಕøತಿಗೆ ಸೂಕ್ತವಾಗಿಲ್ಲವೆಂದು ಸಂದರ್ಶಕರಿಗೆ ಅನಿಸಿದರೆ ನೀವು ಅವಕಾಶವನ್ನು ಕಳೆದುಕೊಳ್ಳಬೇಕಾಗಬಹುದು. ಇದಕ್ಕಾಗಿ ನೀವು ಆಂಗಿಕ ಅಭಿನಯ ಮತ್ತು ಸಂದರ್ಶನ ಕೌಶಲಗಳನ್ನು ಕಲಿತುಕೊಳ್ಳಿ.
ಉತ್ಸಾಹ ಇಲ್ಲದಿದ್ದರೆ ನೋ ಜಾಬ್!
ಬಹುತೇಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಸಪ್ಪೆ ಮುಖ ಮಾಡಿಕೊಂಡು ಇರುತ್ತಾರೆ. ನಿಮ್ಮಲ್ಲಿ ಕಂಪನಿಯ ಕುರಿತು, ಸಂದರ್ಶನದ ಕುರಿತು ಉತ್ಸಾಹ ಇರಬೇಕು. ಸಂದರ್ಶನದಲ್ಲಿ ಕೇಳಬಹುದಾದ ಒಂದಿಷ್ಟು ಪ್ರಶ್ನೆಗಳನ್ನು ಅಂದಾಜು ಮಾಡಿಕೊಂಡು ಅದಕ್ಕೆ ಹೇಗೆ ಉತ್ತರಿಸುವುದೆಂದು ಮನೆಯಲ್ಲಿಯೇ ಸಿದ್ಧತೆ ನಡೆಸಿಕೊಳ್ಳಿ.
ಸುಳ್ಳು ಹೇಳಿದರೆ ಗೊತ್ತಾಗುತ್ತದೆ…
ರೆಸ್ಯೂಂನಲ್ಲಿ ನೀವು ಯಾವುದಾದರೂ ವ್ಯಕ್ತಿಯ ಹೆಸರನ್ನು ರೆಫರೆನ್ಸ್ ಆಗಿ ನೀಡಿರಬಹುದು. ಆದರೆ, ಆ ರೆಫರೆನ್ಸ್ ಸಂಖ್ಯೆ ಅಸ್ತಿತ್ವದಲ್ಲಿ ಇರದೆ ಇರುವುದು, ಅಥವಾ ರೆಫರೆನ್ಸ್ನಲ್ಲಿ ತಿಳಿಸಿದ ವ್ಯಕ್ತಿಗೆ ನಿಮ್ಮ ಬಗ್ಗೆ ತಿಳಿಯದೆ ಇರುವುದು ಇತ್ಯಾದಿ ಅಂಶಗಳು ಉದ್ಯೋಗದಾತರಿಗೆ ನಿಮ್ಮ ಬಗ್ಗೆ ಇರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ, ರೆಫರೆನ್ಸ್ ವಿಭಾಗದ ಕಡೆಗೂ ಗಮನ ನೀಡಿರಿ.
ಫಾಲೊಅಪ್ ಮಾಡದೆ ಇರುವುದು
ಸಂದರ್ಶನ ಮುಗಿಸಿದ ನಂತರ ಕಂಪನಿಯ ಕಡೆಯಿಂದ ನಿಮಗೆ ಇಮೇಲ್ ಬರಬಹುದು. ಅದಕ್ಕೆ ಹೆಚ್ಚು ತಡಮಾಡದೆ ಉತ್ತರಿಸಿ. ಎಲ್ಲಾದರೂ ಇಮೇಲ್ ಬರದೆ ಇದ್ದರೂ, ಸಂದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿ ಕಂಪನಿಗೊಂದು ಇಮೇಲ್ ಕಳುಹಿಸಿ. ಭವಿಷ್ಯದಲ್ಲಿ ನಿಮಗೆ ಅವಕಾಶ ನೀಡಲು ಈ ಸಂವಹನ ನೆರವಾಗಬಹುದು.
ಸರಿಯಾದ ಸ್ಕಿಲ್ಗಳು ಇಲ್ಲದೆ ಇರುವುದು
ಇದು ಅತ್ಯಂತ ಪ್ರಮುಖ ವಿಷಯ. ನೀವು ಪಡೆದ ಡಿಗ್ರಿಯಿಂದ ಮಾತ್ರ ಉದ್ಯೋಗ ದೊರಕದು. ಆಯಾ ಕ್ಷೇತ್ರಕ್ಕೆ ಬೇಕಾದ ಕೌಶಲಗಳನ್ನು ಕಲಿಯಿರಿ. ಸ್ಕಿಲ್ ಕಲಿಯಲು ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ ಮತ್ತು ಮಲ್ಲೇಶ್ವರಂನಲ್ಲಿರುವ ಕ್ಯಾಡ್ನೆಸ್ಟ್ ಸಂಸ್ಥೆಯು ಮುಖ್ಯವಾಗಿ ಕರ್ನಾಟಕದ ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ದರದಲ್ಲಿ ವಿವಿಧ ಉದ್ಯೋಗಾಧರಿತ ಕೋರ್ಸ್ಗಳನ್ನು ನೀಡುತ್ತದೆ.
ಈಗಲೇ ವಾಟ್ಸಪ್ ಮೂಲಕ ನಿಮಗೆ ಬೇಕಾದ ಕೋರ್ಸ್ನ ಮಾಹಿತಿ ಪಡೆಯಿರಿ.
ನೀವು ಓದಲೇಬೇಕಾದ ಇತರೆ ಲೇಖನಗಳು
- ಹ್ಯಾಪಿ ಸಂಕ್ರಾಂತಿ: ಹೊಸ ಕಲಿಕೆಗೆ ಉತ್ತರಾಯಣ ಸೂಕ್ತಮೊದಲಿಗೆ ಕನ್ನಡ ಕ್ಯಾಡ್ನೆಸ್ಟ್ ಓದುಗರಿಗೆ ಎಳ್ಳುಬೆಲ್ಲದ ಸುಂದರ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು. ಮಕರ ಸಂಕ್ರಾಂತಿಯೆಂದರೆ ಉತ್ತರಾಯಣ ಕಾಲದ ಆರಂಭ. ಮನುಷ್ಯರ ಒಂದು ವರ್ಷವು ದೇವರ ಒಂದು ದಿನಕ್ಕೆ ಸಮ. ಉತ್ತರಾಯಣ ಕಾಲವೆಂದರೆ ದೇವರ ಹಗಲು ಹೊತ್ತು. ಈ ಆರುತಿಂಗಳು ವಿವಿಧ ಶುಭಕಾರ್ಯಗಳಿಗೆ ಮೀಸಲು. ಹೊಸ ವ್ಯವಹಾರ, ಕಂಪನಿ ಅಥವಾ ಕಲಿಕೆ ಆರಂಭಿಸಲು
- ಹತ್ತು ಗಂಟೆಗಳಲ್ಲಿ ಟ್ಯಾಲಿ ಕಲಿಯಿರಿ, ಟ್ಯಾಲಿ ಪ್ರೈಮ್ ವಿಶೇಷ ಕೋರ್ಸ್
- ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಪರ್ಧೆಗಳು, ತಪ್ಪದೇ ಭಾಗವಹಿಸಿಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಯಾಡ್ನೆಸ್ಟ್ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ ಮತ್ತು ರಾಜರಾಜೇಶ್ವರಿ ಶಾಖೆಗಳು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಯಾವುದೇ ಪ್ರತಿಭೆಯನ್ನು, ಅಂದರೆ ಹಾಡು, ನೃತ್ಯ, ರೀಲ್ಸ್, ನಾಟಕ/ಸ್ಕಿಟ್, ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಮತ್ತು ಇತರೆ ಹತ್ತು ಹಲವು ಬಗೆಯ ಪ್ರತಿಭೆಗಳನ್ನು
- ಸ್ಯಾಪ್ ಸಾಗರದಲ್ಲಿರುವ ಸ್ಯಾಪ್ ಎಚ್ಆರ್ (SAP HR) ಮಾಡ್ಯುಲ್ ಬಗ್ಗೆ ನಿಮಗೆಷ್ಟು ಗೊತ್ತು?ಸ್ಯಾಪ್ ಎನ್ನುವುದು ಬೃಹತ್ ಸಾಗರವಾಗಿದ್ದು, ಪರಿಣತಿ ಪಡೆದವರಿಗೆ ಕೈತುಂಬಾ ವೇತನ ನೀಡುವ ಅದ್ಭುತ ಕರಿಯರ್ ಆಯ್ಕೆಯಾಗಿದೆ. ಸ್ಯಾಪ್ನಲ್ಲಿ ಸಾಕಷ್ಟು ಮಾಡೆಲ್ಗಳಿದ್ದು (ಸಂಪೂರ್ಣ ಮಾಡ್ಯುಲ್ಗಳ ವಿವರ ಇಲ್ಲಿದೆ) ಪ್ರತಿಯೊಂದು ಮಾಡ್ಯುಲ್ಗಳೂ ಅಪಾರ ಅವಕಾಶಗಳ್ನನು ಹೊಂದಿದೆ. ಇಂದಿನ ಬ್ಲಾಗ್ ಪೋಸ್ಟ್ನಲ್ಲಿ ಸ್ಯಾಪ್ ಎಚ್ಆರ್ ಮಾಡ್ಯುಲ್ ಬಗ್ಗೆ ತಿಳಿದುಕೊಳ್ಳೋಣ. ಏನಿದು ಸ್ಯಾಪ್ ಎಚ್ಆರ್? ಸ್ಯಾಪ್ ಹ್ಯೂಮನ್ ರಿಸೋಸರ್ಸ್
- ಸ್ಯಾಪ್ ಕಲಿಯಿರಿ, ಸೂಪರ್ ಕರಿಯರ್ ನಿಮ್ಮದಾಗಿಸಿ- ಇಲ್ಲಿದೆ ಸ್ಯಾಪ್ ಗೈಡ್ಕನ್ನಡ ಕ್ಯಾಡ್ನೆಸ್ಟ್ ಓದುಗರಿಗೆ ನಮಸ್ಕಾರ. ಕಳೆದ ಒಂದು ವರ್ಷದಿಂದ ಕೋವಿಡ್-೧೯ ಸಾಂಕ್ರಾಮಿಕ ತಂದೊಡ್ಡಿದ ಸಂಕಷ್ಟದಿಂದ ಶಾಲೆ, ಕಾಲೇಜುಗಳಲ್ಲಿ ಸರಿಯಾದ ತರಗತಿಗಳು ನಡೆದಿಲ್ಲ. ಕೆಲವು ಶಾಲಾ ಕಾಲೇಜುಗಳಲ್ಲಿ ಮುಂದಿನ ತರಗತಿಗಳಿಗೆ ಪಾಠವಿಲ್ಲದೆ ದೂಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಕಲಿತದ್ದೇನು? ಎಂದರೆ ಶೂನ್ಯ. ಹೆಚ್ಚಿನ ಕೌಶಲ್ಯ ಕಲಿಯದೆ ಒಂದು ವರ್ಷ ವ್ಯರ್ಥವಾಗಿದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ತಾವೇ
- ಸ್ಯಾಪ್ ಕಲಿಯಬಯಸುವಿರಾ? ಕ್ಯಾಡ್ನೆಸ್ಟ್ ಉಚಿತ ಸೆಮಿನಾರ್ಗೆ ಇಂದೇ ಹೆಸರು ನೋಂದಾಯಿಸಿಉದ್ಯೋಗ ಗ್ಯಾರಂಟಿ ಮತ್ತು ಒಳ್ಳೆಯ ವೇತನ ಗ್ಯಾರಂಟಿ ನೀಡುವ ಜನಪ್ರಿಯ ಉದ್ಯೋಗ ಕೌಶಲ್ಯವೆಂದರೆ ಸ್ಯಾಪ್. ಆರಂಭದಲ್ಲಿ ಕೆಲವು ಸಾವಿರ ರೂ.ನಿಂದ ವೇತನ ಆರಂಭವಾಗಿ ಬಳಿಕ ತಿಂಗಳಿಗೆ ಲಕ್ಷಲಕ್ಷ ವೇತನ ತಂದುಕೊಡುವ ಅಪರೂಪದ ಕೌಶಲ್ಯವಿದು. ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಖಾತ್ರಿ ನೀಡುವ ಸ್ಯಾಪ್ ಆಗಮಿಸಿ ಹಲವು ವರ್ಷಗಳೇ ಕಳೆದಿವೆ. ಈ ಹಳೆಯ ಸ್ಕಿಲ್ ಈಗಲೂ
- ಸಿವಿಲ್ ಮತ್ತು ಮೆಕ್ಯಾನಿಕಲ್ ಕ್ಯಾಡ್ ನಡುವಿನ ವ್ಯತ್ಯಾಸವೇನು?ಕಂಪ್ಯೂಟರ್ ಏಯ್ಡೆಡ್ ಡಿಸೈನ್ ಅಥವಾ ಕ್ಯಾಡ್ ಎಂಬ ತಂತ್ರಜ್ಞಾನವು ಜಗತ್ತಿನ ಬಹುಬೇಡಿಕೆಯ ಉದ್ಯೋಗ ಕೌಶಲ್ಯ. ಕ್ಯಾಡ್ ಎನ್ನುವುದು ೨ಡಿ ಮತ್ತು ೩ಡಿ ಡ್ರಾಯಿಂಗ್ಗೆ ಸಂಬಂಧಪಟ್ಟ ಟೂಲ್ ಮತ್ತು ಸಾಫ್ಟ್ ವೇರ್. ಆರ್ಕಿಟೆಕ್ಚರ್, ಎಂಜಿನಿಯರ್ಗಳು, ಡ್ರಾಫ್ಟರ್ಗಳು ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಮಯದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ
- ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ!ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್ನೆಸ್ಟ್ ಕ್ಯಾಡ್ ವಿಭಾಗವು ಸಿವಿಲ್ ಕ್ಯಾಡ್ ವಿಷಯದಲ್ಲಿ ವೆಬಿನಾರ್ ಆಯೋಜಿಸುತ್ತಿದ್ದು, ಆಸಕ್ತ ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈ ವಿಶೇಷ ಸೆಮಿನಾರ್ ಡಿಸೆಂಬರ್ 19ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಸಿವಿಲ್ ಕ್ಯಾಡ್ ಕುರಿತಾದ ನಿಮ್ಮ ಜ್ಞಾನ
- ಸಕ್ಸಸ್ ಟಿಪ್ಸ್: ತ್ರಿವಿಕ್ರಮ ಸಾಧನೆ ಮಾಡುವುದು ಹೇಗೆ?ಮೊದಲಿಗೆ ಕನ್ನಡ ಕ್ಯಾಡ್ನೆಸ್ಟ್ ಓದುಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಜೀವನದಲ್ಲಿ ತ್ರಿವಿಕ್ರಮ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸಲುವಾಗಿ ಇವತ್ತು ಅಮೂಲ್ಯ ಸಲಹೆಯೊಂದಿಗೆ ಬಂದಿದ್ದೇವೆ. ಮೊದಲಿಗೆ ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆಯನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಳ್ಳೋಣ. ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆ ಈ ದೀಪಾವಳಿ ಹಬ್ಬದ ಪೌರಾಣಿಕ ಹಿನ್ನೆಲೆ ತಿಳಿದಿರುವವರಿಗೆ ತ್ರಿವಿಕ್ರಮ,
- ಶುಭ ಸುದ್ದಿ: HBR ಲೇಔಟ್ ನಲ್ಲಿ ಕ್ಯಾಡ್ ನೆಸ್ಟ್ ನ ಎಂಟನೇ ಶಾಖೆ ಆರಂಭಸಾವಿರಾರು ವಿದ್ಯಾರ್ಥಿಗಳ ಮನಗೆದ್ದ ಕ್ಯಾಡ್ ನೆಸ್ಟ್ ಈಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ.ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ಅಲ್ಲಿ ಕ್ಯಾಡ್ನೆಸ್ಟ್ ನ ಹೊಸ ಶಾಖೆ ಆರಂಭವಾಗುತ್ತಿದ್ದು ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಏಳು ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್ ನೆಸ್ಟ್ ಸಂಸ್ಥೆಯು ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಮತ್ತು ಕೌಶಲ್ಯಭಿವೃದ್ಧಿಯಲ್ಲಿ
- ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು?ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? ಸೋಮವಾರ ಆಗಸ್ಟ್ ೨೩ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಮೂಡಲಿದೆ. 9-12ವರೆಗಿನ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ಕೊರೊನಾ ಸೋಂಕಿನ ಪಾಸಿಟಿವಿಟಿ ಶೇಕಡ ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯, ೧೦ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ.
- ವೆಬ್ ಮತ್ತು ಗ್ರಾಫಿಕ್ ವಿನ್ಯಾಸ ಕೋರ್ಸ್ಗೆ ಈಗ 50% ವಿನಾಯಿತಿಜಗತ್ತಿನ ಬಹುತೇಕ ಜನರಿಂದು ಇಂಟರ್ನೆಟ್ ಬಳಸುತ್ತಿದ್ದಾರೆ. ಖರೀದಿ, ಮಾಹಿತಿಗಾಗಿ ಪ್ರತಿಯೊಬ್ಬರೂ ವೆಬ್ಸೈಟ್ಗಳನ್ನು ತಡಕಾಡುತ್ತಿದ್ದಾರೆ. ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್ನೆಟ್ ಸುದ್ದಿ ವೆಬ್ಸೈಟ್ ಸೇರಿದಂತೆ ವೆಬ್ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್ಸೈಟ್ ಡಿಸೈನರ್ಗಳಿಗೆ ಬೇಡಿಕೆಯಿದೆ. ನೀವು ಯಾವುದೇ ಉದ್ಯೋಗ ಪೋರ್ಟಲ್ಗಳನ್ನು ಹೋಗಿ
- ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಸ್ಕಿಲ್ ಯಾವುದು ಗೊತ್ತೆ?ದೇಶದ ಭವ್ಯ ಭವಿಷ್ಯ ಬರೆಯುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಒಳಿತಿನ ದೃಷ್ಟಿಯಿಂದ ವಿವಿಧ ಕೌಶಲ್ಯಗಳನ್ನು ಕಲಿಯುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಲು ಹೊಸತನ್ನು ಕಲಿಯಲು ಆದ್ಯತೆ ನೀಡುತ್ತಿದ್ದಾರೆ. ಇಂಟರ್ನ್ಶಿಪ್ ಮಾಡುವವರಿಗೆ ವೇದಿಕೆ ಕಲ್ಪಿಸಿಕೊಡುವ ಇಂಟರ್ನ್ಶಾಲಾ ಎಂಬ ದೇಶದ ಪ್ರಮುಖ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ ಶಾಲಾ ಟ್ರೇನಿಂಗ್ ಒಂದು ಅಧ್ಯಯನ
- ವಿದ್ಯಾರ್ಥಿಗಳೇ ನಿಮಗೆ ಈ ಹಲವು ಫೆಲೋಶಿಪ್ಗಳ ಬಗ್ಗೆ ಗೊತ್ತೆ?ಕನ್ನಡ ಕ್ಯಾಡ್ನೆಸ್ಟ್ ವಿದ್ಯಾರ್ಥಿಗಳಿಗೆ ಮತ್ತು ಬ್ಲಾಗ್ ಓದುಗರಿಗೆ ಈ ಬಾರಿ ಮೂರು ವಿಶೇಷ ಫೆಲೋಶಿಪ್ಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್ನೆಸ್ಟ್ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಅಡ್ಮಿಷನ್ ಆಗಲು ಈ ಕೂಡಲೇ ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕ ವಿವರ ಇಲ್ಲಿದೆ. Teach for India Fellowship ದೇಶದ
- ವಿದ್ಯಾರ್ಥಿಗಳು ಹೊಸ ಸ್ಕಿಲ್ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳುಐಟಿ ಅಥವಾ ಐಟಿಯೇತರ ಉದ್ಯೋಗ ಮಾಡುವವರು ವಿವಿಧ ಸಾಫ್ಟ್ವೇರ್ ಸ್ಕಿಲ್ಗಳು, ಕಂಪ್ಯೂಟರ್ ಸ್ಕಿಲ್ಗಳನ್ನು ಕಲಿಯುತ್ತಿರಬೇಕಾಗುತ್ತದೆ. ಜೊತೆಗೆ, ಇತ್ತೀಚಿನ ತಂತ್ರಾಂಶಗಳಿಗೆ ಅಪ್ಡೇಟ್ ಆಗುತ್ತಿರಬೇಕಾಗುತ್ತದೆ. ಇಂತಹ ಹೊಸ ಸ್ಕಿಲ್ಗಳನ್ನು ವಿದ್ಯಾರ್ಥಿಗಳು ಯಾಕೆ ಕಲಿಯಬೇಕು ಎನ್ನುವ ಮಾಹಿತಿಯನ್ನು ಕ್ಯಾಡ್ನೆಸ್ಟ್ ಇಲ್ಲಿ ನೀಡಿದೆ. ಐಟಿ ಲೋಕದ ಹೊಸ ಕೌಶಲ ಪಡೆದಿದ್ದರೆ ಕಂಪನಿಗಳು ನಿಮ್ಮನ್ನು ಬೇಗನೇ ನೇಮಕ ಮಾಡಿಕೊಳ್ಳುವುದು ಮಾತ್ರವಲ್ಲದೆ