ಕೋವಿಡ್-19 ಸಂಕಷ್ಟದ ಸಮಯದಲ್ಲಿ ಹಲವು ಉಪಕ್ರಮಗಳ ಮೂಲಕ ರಾಜ್ಯದ ವಿದ್ಯಾರ್ಥಿಗಳ ಕೌಶಲವೃದ್ಧಿಗೆ ಸಹಕರಿಸಿದ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಆಂಡ್ ಕಮ್ಯುನಿಕೇಷನ್(ಕ್ಯಾಡ್‌ನೆಸ್ಟ್)ನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ ಘಟಕಗಳು ಜಂಟಿಯಾಗಿ ಉಚಿತ 4 ವೆಬಿನಾರ್ ಅನ್ನು ಆಗಸ್ಟ್ ೮ರಂದು ಹಮ್ಮಿಕೊಂಡಿದೆ.
ಏನಿದು ವೆಬಿನಾರ್?
ಮೊದಲಿಗೆ ವೆಬಿನಾರ್ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳೋಣ. ಕೋವಿಡ್-೧೯ ಸಂಕಷ್ಟದ ಸಮಯದಲ್ಲಿ ಇದು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ವೆಬಿನಾರ್ ಎನ್ನುವುದು ಆನ್‌ಲೈನ್ ಕಾರ್ಯಕ್ರಮವಾಗಿದ್ದು, ಯಾವುದಾದರೂ ಸಂಸ್ಥೆಯು ಆಯ್ದ ಗುಂಪಿನ ಜೊತೆ ಕಂಪ್ಯೂಟರ್ ಮೂಲಕ ಆನ್‌ಲೈನ್‌ನಲ್ಲಿ ನಡೆಸುವ ಸಂವಾದ, ಗೋಷ್ಠಿ, ಸೆಮಿನಾರ್ ಇತ್ಯಾದಿಗಳಾಗಿವೆ. ವೆಬಿನಾರ್‌ನಲ್ಲಿ ಮಾತನಾಡುವ ವ್ಯಕ್ತಿಯು ಪ್ರಸಂಟೇಷನ್, ವಿಡಿಯೋ, ವೆಬ್‌ಪುಟಗಳು ಅಥವಾ ಇತರೆ ಮಲ್ಟಿಮೀಡಿಯಾ ಕಂಟೆಂಟ್‌ಗಳ ಮೂಲಕ ಭಾಗವಹಿಸಿದವರ ಜೊತೆ ಸಂವಹನ ನಡೆಸುತ್ತಾರೆ. ಭಾಗವಹಿಸಿದವರ ಜೊತೆ ಸಂವಹನ ನಡೆಸಬಹುದು.
ಕ್ಯಾಡ್‌ನೆಸ್ಟ್ ವೆಬಿನಾರ್ ವಿಶೇಷತೆಗಳೇನು?
ಇದು ವಿದ್ಯಾರ್ಥಿಗಳಿಗಾಗಿ ಕ್ಯಾಡ್‌ನೆಸ್ಟ್ ಹಮ್ಮಿಕೊಂಡಿರುವ ಉಪಕ್ರಮ. ಇಲ್ಲಿ ವಿದ್ಯಾರ್ಥಿಯೆಂದರೆ ಸಣ್ಣ ಹುಡುಗರೇ ಆಗಬೇಕೆಂದಿಲ್ಲ. ಕಲಿಕೆಯಲ್ಲಿ ಆಸಕ್ತಿಯುಳ್ಳ ಯಾರೇ ಬೇಕಾದರೂ ಭಾಗವಹಿಸಬಹುದು.
- ಕ್ಯಾಡ್‌ನೆಸ್ಟ್ ವೆಬಿನಾರ್‌ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.
- ಯಾವುದೇ ಹಣ ಅಥವಾ ಶುಲ್ಕವಿಲ್ಲ. ಸಂಪೂರ್ಣವಾಗಿ ಉಚಿತವಾಗಿದೆ.
- ಇತ್ತೀಚಿನ ಬೇಡಿಕೆಯ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬಹುದು.
- ಜ್ಞಾನಾರ್ಜನೆಗೆ ಪೂರಕ
ಕ್ಯಾಡ್‌ನೆಸ್ಟ್ ವೆಬಿನಾರ್ ಯಾವಾಗ ನಡೆಯುತ್ತದೆ?
ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳಿರುವಾಗ ಅಂದರೆ ಆಗಸ್ಟ್ 8ರಂದು ಕ್ಯಾಡ್‌ನೆಸ್ಟ್ ವೆಬಿನಾರ್ ನಡೆಯಲಿದೆ. ಆಗಸ್ಟ್ ೮ರಂದು ಒಟ್ಟು ನಾಲ್ಕು ಉಚಿತ ವೆಬಿನಾರ್‌ಗಳು ನಡೆಯಲಿವೆ. ಅಂದರೆ, ಬೆಳಗ್ಗೆ ೧೦ ಗಂಟೆಗೆ, ಬೆಳಗ್ಗೆ ೧೧ ಗಂಟೆಗೆ, ಅಪರಾಹ್ನ ೧೨ ಗಂಟೆಗೆ ಮತ್ತು ಅಪರಾಹ್ನ ೧ ಗಂಟೆಗೆ ಈ ಉಚಿತ ವೆಬಿನಾರ್‌ಗಳು ನಡೆಯಲಿವೆ.
ಫಂಡಮೆಂಟಲ್ ಆಫ್ ಗ್ರಾಫಿಕ್ ಡಿಸೈನ್
ದಿನಾಂಕ: ಆಗಸ್ಟ್ 08, ಸಮಯ: ಬೆಳಗ್ಗೆ 10 ಗಂಟೆ
ಆಗಸ್ಟ್ ೮ರಂದು ಬೆಳಗ್ಗೆ ೧೦ ಗಂಟೆಗೆ ಫಂಡಮೆಂಟಲ್ ಆಫ್ ಗ್ರಾಫಿಕ್ ಡಿಸೈನ್ ಎಂಬ ಸುಂದರವಾದ ವಿಷಯದೊಂದಿಗೆ ವೆಬಿನಾರ್ ಆರಂಭವಾಗಲಿದೆ. ಭಾಗವಹಿಸುವವರು ಇಲ್ಯುಸ್ಟ್ರೇಟರ್, ಫೋಟೊಶಾಪ್ ಮತ್ತು ಫೈರ್‌ವರ್ಕ್ಸ್ ಎಂಬ ಮೂರು ಅದ್ಭುತ ಕೌಶಲಗಳ ಕುರಿತು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ. ಇಲ್ಯುಸ್ಟ್ರೇಟರ್, ಫೋಟೊಶಾಪ್, ಫೈರ್‌ವರ್ಕ್ಸ್ ಇತ್ಯಾದಿ ಸಾಫ್ಟ್‌ವೇರ್‌ಗಳ ಪರಿಚಯವನ್ನು ಈ ವೆಬಿನಾರ್‌ನಲ್ಲಿ ಮಾಡಿಕೊಳ್ಳಬಹುದಾಗಿದೆ.
ಫೊಟೊ ಮತ್ತು ವಿಡಿಯೋ ಎಡಿಟಿಂಗ್ ಬೇಸಿಕ್ಸ್
ದಿನಾಂಕ: ಆಗಸ್ಟ್ 08, ಸಮಯ: ಅಪರಾಹ್ನ 11 ಗಂಟೆ
ಆಗಸ್ಟ್ ೮ರಂದು ಬೆಳಗ್ಗೆ ೧೧ ಗಂಟೆಗೆ ಆರಂಭವಾಗುವ ವೆಬಿನಾರ್ ಇನ್ನಷ್ಟು ಸೂಪರ್ ವಿಷಯಗಳನ್ನು ಒಳಗೊಂಡಿದೆ. ಈ ವೆಬಿನಾರ್ ಹೆಸರೇ ಫೋಟೊ ಸಿನಿ-ಮ್ಯಾಟಿಕ್ಸ್. ಇದರಲ್ಲಿ ಫೋಟೊಗ್ರಫಿ ಮತ್ತು ಅನಿಮೇಷನ್ ಫಿಲ್ಮ್ ಮೇಕಿಂಗ್ ಬೇಸಿಕ್ಸ್ ಕುರಿತು ಅಭ್ಯರ್ಥಿಗಳು ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳಬಹುದು. ಈಗಂತೂ ಎಲ್ಲರೂ ಯೂಟ್ಯೂಬ್ ಚಾನೆಲ್, ಸೋಷಿಯಲ್ ಮೀಡಿಯಾ ಶಾರ್ಟ್ ವಿಡಿಯೋ ಮಾಡಲು ಆಸಕ್ತಿ ವಹಿಸುತ್ತಾರೆ. ಭವಿಷ್ಯದಲ್ಲಿ ವಿಡಿಯೋ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇಂತಹ ಸಮಯದಲ್ಲಿ ನೀವು ವಿಡಿಯೋ ಎಡಿಟಿಂಗ್ ಕಲಿಯುವುದು ಅತ್ಯಂತ ಅವಶ್ಯಕವಾಗಿದೆ. ಈ ವೆಬಿನಾರ್‌ನಲ್ಲಿ ಇಲ್ಯುಸ್ಟ್ರೇಟರ್, ಫೋಟೊಶಾಪ್, ಅಡಿಟಿಷನ್, ಪ್ರೀಮಿಯರ್ ಪ್ರೊ ಇತ್ಯಾದಿ ಸಾಫ್ಟ್‌ವೇರ್‌ಗಳನ್ನು ಕಲಿಯಬಹುದು.
ಪ್ರಿಂಟ್‌ಪ್ರೆಸ್ ಮತ್ತು ಮಲ್ಟಿಮೀಡಿಯಾ
ದಿನಾಂಕ: ಆಗಸ್ಟ್ 08, ಸಮಯ: ಅಪರಾಹ್ನ 12 ಗಂಟೆ
ಆಗಸ್ಟ್ ೮ರಂದು ೧೨ ಗಂಟೆಗೆ ಆರಂಭಗೊಳ್ಳುವ ಕ್ಯಾಡ್‌ನೆಸ್ಟ್ ವೆಬಿನಾರ್‌ನಲ್ಲಿ ಇನ್ನಷ್ಟು ಅವಶ್ಯ ಕೌಶಲಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಕೋರಲ್‌ಡ್ರಾ, ಫೋಟೊಶಾಪ್, ಇಂಡಿಸೈನ್ ಇತ್ಯಾದಿಗಳು ಮುದ್ರಣ ಮತ್ತು ಮಲ್ಟಿಮೀಡಿಯಾ ಕ್ಷೇತ್ರಗಳಲ್ಲಿ ಬಹುಬೇಡಿಕೆಯಲ್ಲಿರುವ ಕೌಶಲಗಳಾಗಿವೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಗೋಷ್ಠಿಯಲ್ಲಿ ನೀವು ಪಡೆಯಲಿದ್ದೀರಿ.
ಫೊಟೊಗ್ರಫಿ ಮತ್ತು ಅನಿಮೇಷನ್ ಫಿಲ್ಮ್ ಮೇಕಿಂಗ್
ದಿನಾಂಕ: ಆಗಸ್ಟ್ 08, ಸಮಯ: ಅಪರಾಹ್ನ 1 ಗಂಟೆ
ಆಗಸ್ಟ್ ೮ರಂದು ಅಪರಾಹ್ನ ೧ ಗಂಟೆಗೆ ಫೊಟೊಗ್ರಫಿ ಮತ್ತು ಅನಿಮೇಷನ್ ಫಿಲ್ಮ್ ಮೇಕಿಂಗ್ ಬಗ್ಗೆ ಆಸಕ್ತಿದಾಯಕ ವೆಬಿನಾರ್ ಅನ್ನು ಕ್ಯಾಡ್‌ನೆಸ್ಟ್ ನಡೆಸಿಕೊಡಲಿದೆ. ಫೊಟೊಶಾಪ್, ಲೈಟ್‌ರೂಮ್, ಅಡಿಷನ್, ಪ್ರೀಮಿಯರ್ ಪ್ರೋ ಪರಿಚಯ ಮತ್ತು ಹೆಚ್ಚುವರಿ ಮಾಹಿತಿಯನ್ನು ನೀವು ಈ ವೆಬಿನಾರ್‌ನಲ್ಲಿ ಪಡೆಯಲಿದ್ದೀರಿ. ಈ ಎಲ್ಲಾ ವೆಬಿನಾರ್‌ನಲ್ಲಿ ಪಾಲ್ಗೊಂಡು ನಿಮ್ಮ ಆ ದಿನ ಸಾರ್ಥಕಗೊಂಡ ಖುಷಿಯಲ್ಲಿ ಬಳಿಕ ಊಟ ಮಾಡಬಹುದು (ನಿಮ್ಮ ಮನೆಯಲ್ಲಿಯೇ!).
ಆಸಕ್ತರು ತಮಗೆ ಆಸಕ್ತಿಯಿರುವ ವಿಷಯದ ವೆಬಿನಾರ್‌ನಲ್ಲಿ ಭಾಗವಹಿಸಬಹುದು. ಎಲ್ಲಾ ವೆಬಿನಾರ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಇನ್ನೇಕೆ ತಡ. ಇಂತಹ ಒಳ್ಳೆಯ ಅವಕಾಶ ಮತ್ತೆ ನಿಮಗೆ ದೊರಕದು. ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.