Kannada CADD Nest Private Limited

ನೀವು ಬಳಸಲೇಬೇಕಾದ ಗೂಗಲ್‌ನ ವಿಶೇಷ ಟೂಲ್‌ಗಳು

ನೀವು ಬಳಸಲೇಬೇಕಾದ ಗೂಗಲ್‌ನ ವಿಶೇಷ ಟೂಲ್‌ಗಳು

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕನ್ನಡ ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳಿಗೆ ಮತ್ತು ಇತರೆ ಓದುಗರಿಗೆ ಪ್ರತಿನಿತ್ಯ ಬಳಸಲು ಉಪಯುಕ್ತವಾದ ವಿವಿಧ ಗೂಗಲ್‌ ಟೂಲ್‌ಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಇದು ನಿಮ್ಮ ವಿದ್ಯಾರ್ಥಿ ಜೀವನವನ್ನು ಅಥವಾ ವೃತ್ತಿಪರ ಜೀವನವನ್ನು ಇನ್ನಷ್ಟು ಸರಾಗಗೊಳಿಸಲಿದೆ.

ತಂತ್ರಜ್ಞಾನ ಜಗತ್ತಿನಲ್ಲಿ ಸಾಧನವೊಂದನ್ನು ಸಮಗ್ರವಾಗಿ ಬಳಕೆ ಮಾಡಿಕೊಂಡರೆ ಪ್ರಯೋಜನ ಹೆಚ್ಚು ದೊರಕುತ್ತದೆ. ಉದಾಹರಣೆಗೆ ನೀವು ವಾಟ್ಸಾಪ್‌ನಲ್ಲಿ ಕೇವಲ ಚಾಟಿಂಗ್, ವಿಡಿಯೋ, ಫೋಟೊ ಕಳುಹಿಸುವುದು, ಸ್ಟೇಟಸ್‌ ಹಾಕುವುದು, ಇತರರ ಸ್ಟೇಟಸ್‌ ನೋಡುವುದು ಇತ್ಯಾದಿಗಳನ್ನು ಮಾತ್ರ ನೋಡಬಹುದು. ಆದರೆ, ವಾಟ್ಸಾಪ್‌ನಲ್ಲಿ ಇನ್ನೂ ಸಾಕಷ್ಟು ಒಳ್ಳೆಯ ಫೀಚರ್‌ಗಳಿವೆ. ಈಗ ಬಹುತೇಕ ಕಂಪನಿಗಳು ವಾಟ್ಸಾಪ್‌ ಮೂಲಕವೇ ವರ್ಕ್‌ ಫ್ರಂ ಹೋಂನಲ್ಲಿರುವವರ ಜೊತೆ ವಿವಿಧ ಟಾಸ್ಕ್ ಗಳನ್ನು ಮಾಡುತ್ತಿದೆ.

ಇದೇ ರೀತಿ ನೀವು ಸ್ಮಾರ್ಟ್‍ಫೋನ್ ನಲ್ಲಿ ಕೇವಲ ಕಾಲ್ ಮತ್ತು ಮೆಸೆಜ್ ಮಾತ್ರ ಮಾಡುತ್ತೀರಿ ಎಂದಿರಲಿ. ಈ ಕೆಲಸವನ್ನು ಸಾಮಾನ್ಯ ಫೋನ್‍ನಲ್ಲಿಯೂ ಮಾಡಬಹುದಾಗಿದೆ. ಇದರ ಬದಲು ಅದರಲ್ಲಿರುವ ಆ್ಯಪ್‍ಗಳನ್ನು ಬಳಸುವುದು, ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಇತ್ಯಾದಿಗಳನ್ನು ಬಳಸಿದರೆ ಹಲವು ಲಾಭವಿದೆ.

ಉದ್ಯೋಗಕ್ಕೆ ಸಂಬಂಧಪಟ್ಟಂತೆ ಗೂಗಲ್ ಅನ್ನು ಬಳಸುವಿರಿ ಎಂದಿರಲಿ. ಆದರೆ, ಗೂಗಲ್‌ ಅನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗುತ್ತದೆ. ಉದ್ಯೋಗಿಗಳಿಗೆ ಪೂರಕವಾದ ಹಲವು ಟೂಲ್‍ಗಳನ್ನು ಗೂಗಲ್ ನೀಡಿರುವುದರ ಪ್ರಯೋಜನ ಪಡೆದುಕೊಳ್ಳಿ.

ಗೂಗಲ್‌ ಮೀಟ್ ಬಳಸುವಿರಾ?

ಈಗ ಝೂಮ್‌ ಇತ್ಯಾದಿಗಳ ಮೂಲಕ ಮೀಟಿಂಗ್, ಕ್ಲಾಸ್‌ಗಳನ್ನು ನಡೆಸಲಾಗುತ್ತದೆ. ಇದೇ ರೀತಿಯ ಫೀಚರ್‌ಗಳನ್ನು ಗೂಗಲ್‌ ಮೀಟ್ ಹೊಂದಿದೆ. ಯಾರಲ್ಲಿ ಗೂಗಲ್‌ ಖಾತೆ ಇರುವುದೋ ಅವರೆಲ್ಲರೂ ಗೂಗಲ್‌ ಮೀಟ್‌ನಲ್ಲಿ ಅಕೌಂಟ್‌ ರಚಿಸಬಹುದು. ಸುಮಾರು ನೂರು ಜನರೊಂದಿಗೆ ಒಂದೇ ಬಾರಿ ವಿಡಿಯೋ ಮೀಟಿಂಗ್‌ ಮಾಡಲು ಇದರಿಂದ ಸಾಧ್ಯ. ಇದೇ ರೀತಿ 150, 250 ಜನರನ್ನು ಒಂದೇ ಬಾರಿ ಮೀಟಿಂಗ್‌ಗೆ ಆಹ್ವಾನಿಸಬಹುದು. ಇಷ್ಟು ಜನರನ್ನು ಆಹ್ವಾನಿಸುವುದು ಸದ್ಯಕ್ಕೆ ಉಚಿತ. ಕೊರೊನಾ ಸಮಯವಾಗಿರುವುದರಿಂದ ಸೆಪ್ಟೆಂಬರ್‌ವರೆಗೆ ಇವೆರಡನ್ನು ಉಚಿತವಾಗಿ ನೀಡಲಾಗಿದೆ. ಕೇವಲ ೧೦೦ ಜನರಿದ್ದರೆ ಫ್ರೀ ಟೂಲ್‌ ಸಾಕು.

ಗೂಗಲ್ ಕ್ಯಾಲೆಂಡರ್‌ ಬಳಸುತ್ತಿದ್ದೀರಾ?

ಗೂಗಲ್‌ ಕ್ಯಾಲೆಂಡರ್ ಅನುಭವ ಹೆಚ್ಚಿನವರಿಗೆ ದೊರಕಿರಬಹುದು. ನೀವು ಕರೆಂಟ್‌ ಬಿಲ್‌ ಕಟ್ಟದೆ ಇದ್ದರೆ, ಬಸ್‌ ಟಿಕೇಟ್ ಮಾಡಿದ್ದರೆ ಪ್ರಯಾಣದ ದಿನಾಂಕವನ್ನು ಗೂಗಲ್‌ ಕ್ಯಾಲೆಂಡರ್‌ ನೆನಪಿಸುವುದನ್ನು ನೀವು ನೋಡಿರಬಹುದು.

ನಿಮ್ಮಲ್ಲಿ ಗೂಗಲ್ ಖಾತೆಯಿದ್ದರೆ ಗೂಗಲ್ ಕ್ಯಾಲೆಂಡರ್ ರಚಿಸಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ವಿವಿಧ ಪರೀಕ್ಷೆಗಳ ಬಗ್ಗೆ, ಸ್ಪೆಷಲ್ ಕ್ಲಾಸ್‌ಗಳ ಬಗ್ಗೆ, ಮಾಡಬೇಕಿರುವ ಕೆಲಸಗಳ ಬಗ್ಗೆ ನೆನಪಿಸಿಕೊಳ್ಳಲು ರಿಮೈಂಡರ್ ಅನ್ನು ಗೂಗಲ್ ಕ್ಯಾಲೆಂಡರ್‌ ಮೂಲಕ ರಚಿಸಬಹುದು.

ನೀವು ಉದ್ಯೋಗಿಯಾಗಿದ್ದರೆ ಯಾವುದಾದರೂ ಇವೆಂಟ್‍ಗಳನ್ನು ಅಲ್ಲಿ ದಾಖಲಿಸಬಹುದು. ಆ ಇವೆಂಟ್‍ನಲ್ಲಿ ಪಾಲ್ಗೊಳ್ಳುವ ಇತರರ ಜೊತೆ ಮಾಹಿತಿಯನ್ನು ಹಂಚಿಕೊಳ್ಳಬಹುದು. ಗೂಗಲ್ ಕ್ಯಾಲೆಂಡರ್ ಅನ್ನು ಖಾಸಗಿಯಾಗಿ ಇಟ್ಟುಕೊಳ್ಳಬಹುದು ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು.

ಒಬ್ಬರು ಹಲವು ಕ್ಯಾಲೆಂಡರ್ ರಚಿಸಲು ಅವಕಾಶ ನೀಡಲಾಗಿದೆ. ಆಫೀಸ್ ಕೆಲಸಕ್ಕೆ ಸಂಬಂಧಪಟ್ಟ ಮಾಹಿತಿಗಳು, ಶೆಡ್ಯೂಲ್‍ಗಳು, ಮೀಟಿಂಗ್‍ಗಳು ಇತ್ಯಾದಿಗಳನ್ನು ದಾಖಲಿಸಿ ಸಮಯಕ್ಕೆ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.

ಗೂಗಲ್‌ ಡಾಕ್ಸ್‌ನ ಪ್ರಯೋಜನ ಪಡೆಯಿರಿ

ಆಫೀಸ್ ಕೆಲಸಗಳಿಗೆ ಗೂಗಲ್ ಡಾಕ್ಸ್ ಉಪಯುಕ್ತ. ಗೂಗಲ್ ಡಾಕ್ಸ್ ಸ್ಯುಯಿಟ್‍ನಲ್ಲಿ ಒಂದು ವರ್ಡ್ ಪ್ರೆಸರ್, ಒಂದು ಸ್ಪ್ರೆಡ್‍ಶೀಟ್ ಎಡಿಟರ್ ಮತ್ತು ಒಂದು ಪ್ರಸಂಟೇಷನ್ ಅಪ್ಲಿಕೇಷನ್ ಇದೆ. ನೀವು ನಿಮ್ಮಲ್ಲಿರುವ ದಾಖಲೆಗಳನ್ನು ನಿಮ್ಮ ಕಂಪ್ಯೂಟರ್‍ನ ಹಾರ್ಡ್‍ಡ್ರೈವ್‍ನಲ್ಲಿ ಸೇವ್ ಮಾಡಿಡುವುದಕ್ಕಿಂತ ಗೂಗಲ್ ಡಾಕ್ಸ್ ನಲ್ಲಿ ಸೇವ್ ಮಾಡಬಹುದಾಗಿದೆ. ಈ ರೀತಿ ಮಾಡಿದರೆ ನೀವು ಎಲ್ಲಿ ಹೋದರೂ ಜಸ್ಟ್ ಲಾಗಿನ್ ಮಾಡುವುದರ ಮೂಲಕ ಇದನ್ನು ಸುಲಭವಾಗಿ ಬಳಕೆ ಮಾಡಬಹುದು.

ಡಾಕ್ಯುಮೆಂಟ್‍ಗಳನ್ನು ಮತ್ತೊಬ್ಬರು ಬಳಕೆದಾರರೊಂದಿಗೆ ಹಂಚಿಕೊಳ್ಳುವುದು ಮತ್ತು ಅದನ್ನು ಎಡಿಟಿಂಗ್ ಮಾಡುವ ಸೌಕರ್ಯ ಇರುವುದು ಗೂಗಲ್ ಡಾಕ್ಸ್‍ ನ ಮತ್ತೊಂದು ಸಾಮರ್ಥ್ಯವಾಗಿದೆ. ಒಂದೇ ಡಾಕ್ಯುಮೆಂಟ್ ಅನ್ನು ಹಲವು ಜನರು ಒಂದೇ ಬಾರಿ ಎಡಿಟ್ ಮಾಡಬಹುದಾಗಿದೆ. ಈ ರೀತಿ ಹಲವು ಜನರು ಎಡಿಟ್ ಮಾಡುತ್ತಿರುವಾಗ ಯಾವುದಾದರೂ ಸೆಕ್ಷನ್ ಅನ್ನು ಯಾರಾದರೂ ಗೊತ್ತಿಲ್ಲದೆ ಡಿಲೀಟ್ ಮಾಡಿಬಿಡಬಹುದೆಂಬ ಆತಂಕವೂ ಇಲ್ಲಿಲ್ಲ. ಯಾಕೆಂದರೆ, ಹಳೆಯ ವರ್ಷನ್‍ನ ಡಾಕ್ಸ್ ಸಹ ಲಭ್ಯವಿರುತ್ತದೆ. ನಿಮಗೆ ಬೇಸಿಕ್ ಆಯ್ಕೆಗಳು ಮಾತ್ರ ಸಾಕಾಗುತ್ತದೆ ಎಂದಾದಲ್ಲಿ ಗೂಗಲ್ ಡಾಕ್ಸ್ ಬಳಸಿ. ಸಂಪೂರ್ಣ ಆಯ್ಕೆಗಳು ಬೇಕಿದ್ದರೆ ಮೈಕ್ರೊಸಾಫ್ಟ್ ಆಫೀಸ್‍ನಂತಹ ಸೌಕರ್ಯವನ್ನು ಬಳಸಬೇಕಾಗುತ್ತದೆ.

ಕ್ರೋಮ್ ರಿಮೋಟ್ ಡೆಸ್ಕ್ ಟಾಪ್‌ ಬಗ್ಗೆ ಗೊತ್ತೆ?

ಕಂಪ್ಯೂಟರ್‌ನಲ್ಲಿ ಸಾಕಷ್ಟು ಡಾಕ್ಯುಮೆಂಟ್‌ಗಳು ಇರಬಹುದು. ಆದರೆ, ನೀವು ಹೋಗುವ ಎಲ್ಲಾ ಕಡೆಗೂ ಅದನ್ನು ಹೊತ್ತೊಯ್ಯಲು ಸಾಧ್ಯವಿಲ್ಲ ಅಲ್ಲವೇ. ಇಂತಹ ಸಮಯದಲ್ಲಿ ನೀವು ಬಳಸಬೇಕಿರುವುದು ಗೂಗಲ್‌ ರಿಮೋಟ್‌ ಡೆಸ್ಕ್‌ಟಾಪ್‌.

 ನೀವು ಎಲ್ಲಾದರೂ ಹೊರಗೆ ಹೋಗಿರುತ್ತೀರಿ. ನಿಮ್ಮ ಮ್ಯಾನೇಜರ್‌ ಅಥವಾ ಬಾಸ್‌ ಕಾಲ್ ಮಾಡಿ ಆದಾಯದ ಸ್ಪ್ರೆಡ್‍ಶೀಟ್ ತೋರಿಸಿ’ ಎನ್ನುತ್ತಾರೆ. ಆ ಸಮಯದಲ್ಲಿ ನಿಮ್ಮ ಬಳಿಯಲ್ಲಿ ಕಂಪ್ಯೂಟರ್ ಇರುವುದಿಲ್ಲ. ಇಂತಹ ಸಮಯದಲ್ಲಿ ನಿಮ್ಮ ಕಂಪ್ಯೂಟರ್‍ನಲ್ಲಿರುವ ಪ್ರತಿಯೊಂದನ್ನು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಮತ್ತೊಂದು ಲ್ಯಾಪ್‍ಟಾಪ್‍ನಲ್ಲಿ  ಪಡೆಯುವ ಅವಕಾಶವಿದೆ. ಇದಕ್ಕಾಗಿ ಕ್ರೋಮ್ ರಿಮೋಟ್ ಡೆಸ್ಕ್‍ ಟಾಪ್ ಎಂಬ ಆ್ಯಪ್ ಅನ್ನು ನೀವು ಕೆಲಸ ಮಾಡುವ ಕಂಪ್ಯೂಟರ್‍ಗೆ ಅಳವಡಿಸಬೇಕು. ಎಲ್ಲಾದರೂ ಹೊರಗಡೆ ಇದ್ದಾಗ ಆ ಕಂಪ್ಯೂಟರ್‍ನಲ್ಲಿರುವ ದಾಖಲೆ ಬೇಕಿದ್ದರೆ ನಿಮ್ಮ ಫೋನ್ ನಲ್ಲಿ ರಿಮೋಟ್ ಡೆಸ್ಕ್‍ಟಾಪ್ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿ. ಅದಕ್ಕೆ ಲಾಗಿನ್ ಆಗಿ. ಅದರೊಳಗೆ ನಿಮ್ಮ ಫೈಲ್ ಇರುತ್ತದೆ.

ಗೂಗಲ್‌ನಲ್ಲಿ ಫೋಟೊ ಎಡಿಟಿಂಗ್‌ ಮಾಡಲು ತಿಳಿದಿದೆಯೇ?

ಸ್ನಾಪ್‍ಸೀಡ್ ಎಂಬ ಗೂಗಲ್ ಫೋಟೊ ಎಡಿಟರ್ ಆ್ಯಪ್ ಲಭ್ಯವಿರುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.  ಗೂಗಲ್‍ನ ಅಂಗಸಂಸ್ಥೆ ನಿಕ್ ಸಾಫ್ಟ್‍ವೇರ್‍ನ ಸ್ನಾಪ್‍ಸೀಡ್‍ನ ಈ ಆ್ಯಪ್ ಅನ್ನು ಬಳಸಿ ಚಿತ್ರಗಳನ್ನು ಸರಾಗವಾಗಿ ಎಡಿಟ್ ಮಾಡಬಹುದಾಗಿದೆ. ಇದು ಅತ್ಯಧಿಕ ರೇಟಿಂಗ್ ಇರುವ ಉಚಿತ ಆ್ಯಪ್ ಆಗಿದೆ.

ಪೆನ್‌ಡ್ರೈವ್ ಬಿಟ್ಟುಬಿಡಿ, ಗೂಗಲ್ ಡ್ರೈವ್‌ ಬಳಕೆ ಮಾಡಿ

ಈಗ ಪೆನ್‌ ಡ್ರೈವ್‌, ಸಿಡಿ ಇತ್ಯಾದಿಗಳ ಖರೀದಿ ಅಪರೂಪವಾಗಿದೆ. ಯಾಕೆಂದರೆ ಹೆಚ್ಚಿನವರು ಗೂಗಲ್‌ ಡ್ರೈವ್‌ನಂತಹ ಕ್ಲೌಡ್‌ ಫ್ಲಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ನಿಮ್ಮ ಫೋನ್ ಅಥವಾ ಕಂಪ್ಯೂಟರ್‍ನಲ್ಲಿ ಇರುವ ಅಗತ್ಯ ಮಾಹಿತಿಗಳನ್ನು ಜಿಮೇಲ್‍ಗೆ ಅಥವಾ ಗೂಗಲ್ ಡ್ರೈವ್‍ನಲ್ಲಿ ಸ್ಟೋರ್ ಮಾಡಿಡಬಹುದು. ಪ್ರಸಕ್ತ ಕ್ಲೌಡ್ ಕಂಪ್ಯೂಟಿಂಗ್‍ಗೆ ಡ್ರೈವ್ ಸೂಕ್ತವಾಗಿದೆ. ಈ ರೀತಿ ಡ್ರೈವ್‍ನಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಪಡೆಯಬಹುದಾಗಿದೆ.

ಗೂಗಲ್ ಕೀಪ್‌ ಬಗ್ಗೆ ಗೊತ್ತೆ?

ಈ ಹೆಸರು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದು ಸರಳವಾಗಿದ್ದು, ಅತ್ಯಾಕರ್ಷಕ ಫೀಚರ್‍ಗಳನ್ನು ಹೊಂದಿದೆ. ಕೆಲವೊಂದು ನೊಟ್‍ಗಳನ್ನು ಇದರಲ್ಲಿ ಬರೆದಿಡಿ. ಬರೆದಿಟ್ಟಿರುವುದನ್ನು ಯಾವಾಗ ನೆನಪಿಸಬೇಕೆಂದು ಅದರಲ್ಲಿ ನಮೋದಿಸಿ. ನೋಟಿಸ್ ಬೋರ್ಡ್‍ನಲ್ಲಿ ಇಟ್ಟಂತೆ ಪಿನ್ ಮಾಡಿಡಿ. ಯಾವ ಸ್ಥಳ, ಸಮಯ ಇತ್ಯಾದಿ ಮಾಹಿತಿಗಳನ್ನು ಇದು ನೆನಪಿಸುತ್ತದೆ. ಇದರಲ್ಲಿ ವೆಬ್ ಆ್ಯಕ್ಸೆಸ್, ಹ್ಯಾಂಡ್ ರೈಟಿಂಗ್ ಮತ್ತು ವಾಯ್ಸ್ ರೆಕಾಗ್ನಿಷನ್ ಫೀಚರ್ ಸಹ ಇದೆ. ಗೂಗಲ್ ಕೀಪ್ ಅನ್ನು ನೋಡಿಲ್ಲದಿದ್ದರೆ ಗೂಗಲ್ ಕೀಪ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ಇದೇ ರೀತಿ ಗೂಗಲ್‌ ಕ್ಲಾಸ್‌ರೂಂ ಸೇರಿದಂತೆ ವಿವಿಧ ಟೂಲ್‌ಗಳು ಗೂಗಲ್‌ನಲ್ಲಿ ಇವೆ. ಇವುಗಳ ಪ್ರಯೋಜನ ಪಡೆಯಿರಿ. ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಮನೆಯಲ್ಲಿಯೇ ಸುರಕ್ಷಿತವಾಗಿರಿ. ಇಂತಹ ಸಮಯದಲ್ಲಿ ಬಿಡುವಿನ ವೇಳೆಯನ್ನು ವ್ಯರ್ಥ ಮಾಡಬೇಡಿ. ಈ ಸಮಯದಲ್ಲಿ ನಿಮ್ಮ ಭವಿಷ್ಯಕ್ಕೆ ನೆರವಾಗುವ ವಿವಿಧ ಕೋರ್ಸ್‌ಗಳನ್ನು ಕ್ಯಾಡ್‌ನೆಸ್ಟ್‌‌ ಮೂಲಕ ಕಲಿಯಿರಿ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಾಟ್ಸಾಪ್‌ ಲಿಂಕ್ ಅನ್ನು ಕ್ಲಿಕ್‌ ಮಾಡಿ ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿ.

Related Posts

error: Content is protected !!
Scroll to Top