ಕೊರೊನಾ ಬಳಿಕದ ಜಗತ್ತು ಹೆಚ್ಚು ಆನ್‌ಲೈನ್‌ಮಯವಾಗಿರಲಿದೆ. ಆನ್‌ಲೈನ್ ಖರೀದಿ, ಮಾರಾಟವು ಈ ಹಿಂದಿಗಿಂತಲೂ ಹೆಚ್ಚಿರಲಿದೆ. ಇದೇ ಕಾರಣಕ್ಕೆ ಎಲ್ಲರೂ ಆನ್‌ಲೈನ್ ಅಂಗಡಿ ತೆರೆಯಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳು ಸಹ ಇಂತಹ ಸಮಯದಲ್ಲಿ ಆನ್‌ಲೈನ್ ಜಗತ್ತಿಗೆ ಪೂರಕವಾದ ಕೋರ್ಸ್ ಕಲಿಯಬೇಕು. ಇದೇ ಕಾರಣಕ್ಕೆ ಕನ್ನಡ ಕ್ಯಾಡ್‌ನೆಸ್ಟ್‌ನ ಈ ಸಂಚಿಕೆಯಲ್ಲಿ ಇ-ಕಾಮರ್ಸ್ ಗೈಡ್ ನೀಡಲಾಗಿದೆ.
ಒಂದು ಕತೆ ಕೇಳಿ
ಬೆಂಗಳೂರಲ್ಲಿ ಇಬ್ರು ಫ್ರೆಂಡ್ಸ್ ಇದ್ರು. ಅವರಿಗೆ ದೊಡ್ಡ ಕಂಪನಿಯಲ್ಲಿ ಹಲವು ಲಕ್ಷ ರೂಪಾಯಿ ವೇತನದ ಉದ್ಯೋಗವಿತ್ತು. ಆದರೆ, ಅವರು ಕನಸು ಕಣ್ಣಿನ ಹುಡುಗರು. ಸ್ವಂತ ಇ-ಕಾಮರ್ಸ್ ಕಂಪನಿ ಆರಂಭಿಸಲು ಉದ್ದೇಶಿಸಿದರು. ಆಗ ಆನ್‌ಲೈನ್ ಮಾರಾಟ ಈಗಿನಷ್ಟು ಫೇಮಸ್ ಆಗಿರಲಿಲ್ಲ. ಇವರು ಆನ್‌ಲೈನ್‌ನಲ್ಲಿ ಬುಕ್ ಸ್ಟೋರ್ ಆರಂಭಿಸಿದರು. ಎಲ್ಲರೂ ಸಪ್ನ ಬುಕ್ ಹೌಸ್, ಸ್ನೇಹಬುಕ್ ಹೌಸ್ ಎಂದು ಪುಸ್ತಕದಂಗಡಿಗಳಿಗೆ ಹೋಗಿ ಖರೀದಿಸಿಸುತ್ತಿದ್ದರು, ಹೊರತು ಇವರ ಆನ್‌ಲೈನ್ ಅಂಗಡಿಗೆ ಯಾರೂ ಬರಲಿಲ್ಲ. ಆದರೆ, ಈ ಫ್ರೆಂಡ್ಸ್ ನಿರಾಶೆ ಅನುಭವಿಸಲಿಲ್ಲ. ಒಳ್ಳೆಯ ದಿನಕ್ಕಾಗಿ ಕಾದರು.
ಎಷ್ಟೋ ದಿನ ಕಳೆದ ಬಳಿಕ ಯಾರೋ ಒಬ್ಬರು ಒಂದು ಪುಸ್ತಕಕ್ಕೆ ಆರ್ಡರ್ ನೀಡಿದರು. ಕಂಪನಿಯ ಸ್ಥಾಪಕರೇ ಆ ಪುಸ್ತಕವನ್ನು ತೆಗೆದುಕೊಂಡು ಹೋಗಿ ಗ್ರಾಹಕರಿಗೆ ನೀಡಿದರು. ಅಂದ್ರೆ ಅವರೇ ಡೆಲಿವರಿ ಬಾಯ್ ಆಗಿದ್ದರು. ಈಗ ಆ ಕಂಪನಿ ಜಗತ್ತಿನಲ್ಲಿಯೇ ದೊಡ್ಡ ಇ-ಕಾಮರ್ಸ್ ಕಂಪನಿ. ಅದು ಫ್ಲಿಪ್‌ಕಾರ್ಟ್ ಆರಂಭದ ಕತೆ. ಆ ಫ್ರೆಂಡ್ಸ್ ಹೆಸರು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್.
ನೀವೂ ಯಾಕೆ ಒಂದು ಇ-ಕಾಮರ್ಸ್ ಆರಂಭಿಸಬಾರದು?
ಖಂಡಿತಾ, ನೀವು ಕೂಡ ಒಳ್ಳೆಯ ಕನಸು ಹೊಂದಿದ್ದರೆ, ಸ್ಕಿಲ್ ಇದ್ದರೆ ಇ-ಕಾಮರ್ಸ್ ಕಂಪನಿ ಆರಂಭಿಸಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ಮೊದಲು ಕ್ಯಾಡ್‌ನೆಸ್ಟ್ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂನ ಆನ್‌ಲೈನ್ ಕ್ಲಾಸ್‌ಗೆ ಸೇರಿ. ಆನ್‌ಲೈನ್ ಮೂಲಕವೇ ವೆಬ್‌ಡಿಸೈನ್, ಮಾರ್ಕೆಟಿಂಗ್ ಸಂಬಂಧಪಟ್ಟ ಕೋರ್ಸ್‌ಗಳನ್ನು ಕಲಿಯಿರಿ.
ಕ್ಯಾಡ್‌ನೆಸ್ಟ್‌ನಲ್ಲಿ ನೀವು ಸಿ ಲ್ಯಾಂಗ್ವೇಜ್, ಸಿ ಪ್ಲಸ್ ಪ್ಲಸ್ ಲ್ಯಾಂಗ್ವೆಜ್, ಸಿ ಶಾರ್ಪ್, ಬೂಟ್ ಸ್ಟ್ರಾಪ್, ಕೋರ್ ಜಾವಾ, ಪೈಥಾನ್, .ನೆಟ್, ಅರೆಕಲ್, ಮೈ ಸಿಕ್ವೆಲ್ ಸರ್ವರ್ ಇತ್ಯಾದಿ ಹಲವು ಕೋರ್ಸ್‌ಗಳನ್ನು ಕಲಿಯಬಹುದು. ನೀವು ಆನ್‌ಲೈನ್ ಜಗತ್ತಿಗೆ ಕಾಲಿಡಲು ಬಯಸಿದರೆ ಮೊದಲಿಗೆ ವೆಬ್ ಜಗತ್ತಿನ ಬೇಸಿಕ್ ತಿಳಿದುಕೊಂಡಿರಬೇಕು. ಇಲ್ಲವಾದರೆ ವೆಬ್ ಡಿಸೈನರ್‌ಗಳಿಗೆ ನೀವು ಹಲವು ಸಾವಿರ ರೂ.ನಿಂದ ಲಕ್ಷ ರೂ.ವರೆಗೆ ಆಗಾಗ ನೀಡುತ್ತ ಇರಬೇಕಾಗುತ್ತದೆ.
ಕ್ಯಾಡ್‌ನೆಸ್ಟ್ ಕೋರ್ಸ್‌ಗಳ ಮಾಹಿತಿಗೆ ಈ ಪುಟಕ್ಕೆ ಭೇಟಿ ನೀಡಿ.
ಮತ್ತೆ ಇ-ಕಾಮರ್ಸ್ ಆರಂಭಿಸುವ ಕುರಿತು ಮಾತನಾಡೋಣ.
ಸಾಕಷ್ಟು ಆನ್‌ಲೈನ್ ಸ್ಟೋರ್‌ಗಳು ಇವೆ. ಆದರೆ, ಎಲ್ಲವೂ ಸಚಿನ್ ಬನ್ಸಾಲ್ ರೀತಿ ಯಶಸ್ಸು ಪಡೆಯುವುದಿಲ್ಲ. ಯಾಕೆಂದರೆ, ಅವರು ಎರಡು ಪ್ರಮುಖ ತಪ್ಪುಗಳನ್ನು ಮಾಡುತ್ತಾರೆ.
೧. ಮೊದಲು ಉತ್ಪನ್ನಕ್ಕೆ ಆದ್ಯತೆ ನೀಡುವುದು
೨. ನಂತರ ಮಾರ್ಕೆಟ್‌ಗೆ ಆದ್ಯತೆ ನೀಡುವುದು.
ನೀವು ಮೊದಲು ಮಾರ್ಕೆಟ್ ಬಗ್ಗೆ ತಿಳಿದುಕೊಳ್ಳಿ. ಬಳಿಕ ಆ ಮಾರ್ಕೆಟ್‌ಗೆ ಸೂಕ್ತವಾದ ಉತ್ಪನ್ನದ ಕುರಿತು ಆಲೋಚಿಸಿ.
ಮೊದಲು ನೀವು ಇರುವ ಸ್ಥಳದಲ್ಲಿಯೇ ರಿಸಚರ್ ಮಾಡಿ. ಜನರಿಗೆ ಯಾವುದು ಅವಶ್ಯಕತೆ ಇದೆ ಎಂದು ತಿಳಿದುಕೊಳ್ಳಿ ಮತ್ತು ಅದು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿದೆಯೇ ತಿಳಿದುಕೊಳ್ಳಿ. ಮನೆಯ ಪಕ್ಕದ ಅಂಗಡಿಯಲ್ಲಿ ದೊರಕುವ ಉತ್ಪನ್ನವನ್ನು ಹೆಚ್ಚಿನವರು ಆನ್‌ಲೈನ್‌ನಲ್ಲಿ ಖರೀದಿಸಲು ಬಯಸುವುದಿಲ್ಲ.
ಬರೆಯಲು ಕಲಿಯಿರಿ
ನಿಮ್ಮ ಉತ್ಪನ್ನದ ಬಗ್ಗೆ ಬರೆಯಲು ಕಲಿಯಿರಿ. ಮಾರಾಟಕ್ಕಿಡುವ ವಸ್ತು ಯಾವುದು? ಅದನ್ನು ಆಕರ್ಷಕ ಹೆಡ್‍ಲೈನ್‍ನಲ್ಲಿ ಬರೆಯಿರಿ. ನಿಮ್ಮ ಉತ್ಪನ್ನ ಬಗೆಹರಿಸುವ ಸಮಸ್ಯೆಯ ಕುರಿತು ಮಾಹಿತಿ ಬರೆಯಿರಿ. ಈ ಉತ್ಪನ್ನಗಳನ್ನು ಬಳಸುವವರಿಂದ ಟೆಸ್ಟಿಮೋನಿಯಲ್ ಬರೆಸಿ. ಉತ್ಪನ್ನವನ್ನು ನಿಮ್ಮ ತಾಣದಿಂದ ಖರೀದಿಸುವುರಿಂದ ಏನು ಲಾಭ ಇದೆ ಎಂದು ಬರೆಯಿರಿ. ನೀವು ಗಮನಿಸಿದ್ದೀರಾ, ಅಮೇಜಾನ್, ಫ್ಲಿಪ್‌ಕಾರ್ಟ್‌ನ ಒಂದೊಂದು ಉತ್ಪನ್ನದ ಪುಟದಲ್ಲಿಯೂ ಎಷ್ಟೊಂದು ಮಾಹಿತಿ ಇದೆ ಎಂದು. ಈ ರೀತಿ ಕಂಟೆಂಟ್ ಇದ್ದರೆ ಮಾತ್ರ ಗೂಗಲ್ ಸರ್ಚ್‌ನಲ್ಲಿ ನಿಮ್ಮ ವೆಬ್‌ಸೈಟ್ ಸುಲಭವಾಗಿ ಲಭಿಸುತ್ತದೆ.
ವೆಬ್ ಡಿಸೈನ್ ಮಾಡಿ
ಈಗಾಗಲೇ ಹೇಳಿದಂತೆ ಕ್ಯಾಡ್‌ನೆಸ್ಟ್ ಕೋರ್ಸ್‌ಗಳಿಗೆ ಸೇರಿ ವೆಬ್ ಡಿಸೈನ್ ಕಲಿಯಿರಿ. ಅಲ್ಲಿ ಲಭ್ಯವಿರುವ ಮಾರ್ಕೆಟಿಂಗ್ ಕೋರ್ಸ್‌ಗಳನ್ನು ಕಲಿಯಿರಿ. ಬಳಿಕ ಸಾಧ್ಯವಿದ್ದರೆ ನೀವೇ ನಿಮ್ಮ ವೆಬ್‌ಸೈಟ್ ನಿರ್ಮಿಸಿಕೊಳ್ಳಿ. ಸಾಧ್ಯವಿಲ್ಲ ಎಂದಾದರೆ ವೃತ್ತಿಪರರ ಸಹಾಯವನ್ನು ಆರಂಭದಲ್ಲಿ ಪಡೆಯಿರಿ (ಆರಂಭದಲ್ಲಿ ಮಾತ್ರ ಪಡೆಯಿರಿ, ಬಳಿಕದ ಎಲ್ಲಾ ಕೆಲಸವನ್ನು ನೀವೇ ಮಾಡಿ). ಹಣವಿದೆ ಎಂದು ದೊಡ್ಡ ಇ-ಕಾಮರ್ಸ್ ತಾಣದಂತೆ ಬೃಹತ್ ವೆಬ್‍ಸೈಟ್ ನಿರ್ಮಿಸಬೇಡಿ. ಸರಳವಾದ ವೆಬ್‍ಸೈಟ್ ನಿರ್ಮಿಸಿ. ಸರಳವಾಗಿದ್ದುಕೊಂಡು ವಿಭಿನ್ನವಾದ, ಆಕರ್ಷಕ, ಕಣ್ಮನ ಸೆಳೆಯುವ ವೆಬ್ ತಾಣ ನಿಮ್ಮದಾಗಿರಲಿ. ಯಾಕೆಂದರೆ, ಅಂದವಾದ ವೆಬ್‌ಸೈಟ್ ಬೇಕೆಂದು ಲಕ್ಷಲಕ್ಷ ಹಣ ವ್ಯರ್ಥಮಾಡಬೇಡಿ.
ನಿಮ್ಮ ವೆಬ್‌ಸೈಟ್‌ನ ಹಿನ್ನೆಲೆ ಬಣ್ಣ, ಫಾಂಟ್ ಇತ್ಯಾದಿಗಳ ಅರಿವಿರಲಿ. ಇದಕ್ಕಾಗಿ ಕ್ಯಾಡ್‌ನೆಸ್ಟ್ ಗ್ರಾಫಿಕ್ ಡಿಸೈನ್ ಕೋರ್ಸ್‌ಗೆ ಸೇರಿ ನಿಮ್ಮ ವಿನ್ಯಾಸ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಒಟ್ಟಾರೆ ನಿಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುವ ಗ್ರಾಹಕರ ಕಣ್ಣಿಗೆ ಕಿರಿಕಿರಿ ಆಗದಂತೆ ಸರಳ ಸುಂದರ ವೆಬ್‌ಸೈಟ್ ನಿರ್ಮಿಸಿರಿ.
ಎಸ್‌ಇಒ ಬಳಸಿ
ನಿಮ್ಮ ವೆಬ್‌ಸೈಟ್ ಹೆಚ್ಚು ಗ್ರಾಹಕರನ್ನು ತಲುಪಲು ಎಸ್‌ಇಒ ಅತ್ಯಂತ ಅವಶ್ಯಕ. ಗೂಗಲ್‍ನಲ್ಲಿ ಯಾವುದಾದರೂ ಉತ್ಪನ್ನದ ಬಗ್ಗೆ ಗ್ರಾಹಕರು ಹುಡುಕಿದಾಗ ಈ ಜಾಹೀರಾತುಗಳು ಮುಂದೆ ಬರುತ್ತವೆ. ಜಾಹೀರಾತು ನೀಡಲು ಹಣವಿಲ್ಲವೆಂದಾದರೆ ನಿಮ್ಮ ತಾಣದಲ್ಲಿ ಬರೆಯುವ ಬರಹಗಳು ಗೂಗಲ್ ಸರ್ಚ್ ಸ್ನೇಹಿಯಾಗಿರುವಂತೆ ನೋಡಿಕೊಳ್ಳಿ. ಆದಷ್ಟು ಕೀವರ್ಡ್‍ಗಳನ್ನು ಬರೆಯಿರಿ. ಬೇರೆ ತಾಣದಿಂದ ಬರಹಗಳನ್ನು ಕಾಪಿ ಮಾಡಿ ಬರೆಯಬೇಡಿ. ಯೂನಿಕ್ ಕೀವರ್ಡ್‌ಗಳನ್ನು ಬಳಸಿರಿ.
ಜನರ ನಂಬಿಕೆ ಉಳಿಸಿಕೊಳ್ಳಿ.
ಜನರು ಒಂದು ರೂಪಾಯಿಯನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡುವ ಮೊದಲು ಸಾಕಷ್ಟು ಯೋಚಿಸುತ್ತಾರೆ. ಅವರ ವಿಶ್ವಾಸರ್ಹತೆ ಗಳಿಸುವುದು ಅತ್ಯಂತ ಅವಶ್ಯ. ಉತ್ಪನ್ನವನ್ನು ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ತಲುಪಿಸಲು ವಿಫಲವಾದರೆ ನಿಮ್ಮ ತಾಣದ ಬಗ್ಗೆ ವೆಬ್‍ಸೈಟ್‍ಗಳಲ್ಲಿ ಜನರು ಸಾಕಷ್ಟು ದೂರುಗಳನ್ನು, ವಿಮರ್ಶೆಗಳನ್ನು ಬರೆಯಬಹುದು. ಇದಕ್ಕಾಗಿ ಚಿಕ್ಕದಾಗಿ ಆರಂಭಿಸಿ. ಗ್ರಾಹಕರಿಗೆ ವಸ್ತುಗಳು ಸಕಾಲಕ್ಕೆ ತಲುಪುವಂತೆ ನೋಡಿಕೊಳ್ಳಿ. ನಿಮ್ಮ ತಾಣದ ಬಗ್ಗೆ ಜಸ್ಟ್ ಡಯಲ್ ಇತ್ಯಾದಿ ತಾಣಗಳಲ್ಲಿ ಬರೆಯಿರಿ. ಗ್ರಾಹಕರ ವಿಮರ್ಶೆಯೂ ಉತ್ತಮವಾಗಿರುವಂತೆ ನೋಡಿಕೊಳ್ಳಿ. ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಬೇಡಿ.
ಗ್ರಾಹಕರೊಂದಿಗೆ ಇಮೇಲ್ ವ್ಯವಹಾರ
ಒಂದು ಬಾರಿ ನಿಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದ ಗ್ರಾಹಕರು ಇನ್ನೊಮ್ಮೆ ಬರುವಂತೆ ನೋಡಿಕೊಳ್ಳಿ. ಆ ಗ್ರಾಹಕರಿಗೆ ಹೊಸ ಉತ್ಪನ್ನಗಳ ಮಾಹಿತಿಯನ್ನು ಇಮೇಲ್ ಮಾಡುತ್ತ ಇರಿ. ಗ್ರಾಹಕರಿಗೆ ಇ-ಮೇಲ್ ಚಂದದಾರರಾಗುವ ಅವಕಾಶ ನೀಡಿ. ಅಪರೂಪಕ್ಕೆ ಕೆಲವು ಗ್ರಾಹಕರ ಇಮೇಲ್ ದೊರಕಿದೆ ಎಂದು ದಿನಕ್ಕೆ ಹತ್ತಾರು ಇಮೇಲ್‍ಗಳನ್ನು ಮಾಡಬೇಡಿ. ಹಾಗೆ ಮಾಡಿದರೆ ನೀವು ಅವರ ಸ್ಪಾಮ್ ಲಿಸ್ಟ್‍ಗೆ ಸೇರುವ ಅಪಾಯವಿದೆ. ಇದಕ್ಕಾಗಿ ನೀವು ಆತ್ಮೀಯ ಇಮೇಲ್‌ಗಳನ್ನು ನಿಗದಿತ ಸಮಯಕ್ಕೊಮ್ಮೆ ಕಲಿಸುತ್ತ ಇರಿ.
ಸ್ಪರ್ಧಾತ್ಮಕ ಜಗತ್ತು
ನಿಮ್ಮ ವೆಬ್‌ಸೈಟ್‌ನಲ್ಲಿ ದೊರಕುವ ಉತ್ಪನ್ನಗಳು ತುಂಬಾ ದುಬಾರಿ ಆಗುವುದು ಬೇಡ. ಪಕ್ಕದ ಅಂಗಡಿಯಲ್ಲಿ ಒಂದು ಕೆ.ಜಿ. ಅಕ್ಕಿಗೆ ೫೦ ರೂಪಾಯಿ ಇದ್ದರೆ ನಿಮ್ಮ ಆನ್‌ಲೈನ್ ಅಂಗಡಿಯಲ್ಲಿ ಅದಕ್ಕಿಂತ ಕಡಿಮೆ ದರದಲ್ಲಿ ಇರಬೇಕು. ನೀವು ವಸ್ತುಗಳ ಮಾರಾಟಗಾರರೊಂದಿಗೂ ಉತ್ತಮ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ಆರಂಭದಲ್ಲಿ ಕಡಿಮೆ ಲಾಭ ಇಟ್ಟುಕೊಂಡು ವ್ಯವಹಾರ ಮಾಡಿ. ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಒಳಿತು ಉಂಟಾಗಲಿದೆ.
ಅಪ್‌ಡೇಟ್ ಆಗುತ್ತ ಇರಿ
ಇಂಟರ್‌ನೆಟ್ ಜಗತ್ತು ಪ್ರತಿದಿನ ಬದಲಾಗುತ್ತ ಇರುತ್ತದೆ. ನಿಮ್ಮ ವೆಬ್‌ಸೈಟ್ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತ ಇರಲಿ. ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುವ ಟೆಕ್ನಿಕಲ್ ಪ್ರಾಬ್ಲಂಗಳನ್ನು ಸರಿಪಡಿಸಿಕೊಳ್ಳಿ. ಚಿಕ್ಕದಾಗಿ ಆರಂಭಿಸಿದರೆ ಇಂತಹ ತಪ್ಪುಗಳ ಬಗ್ಗೆ ಕಲಿಯುತ್ತ ಬೆಳೆಯಬಹುದು.
ಸ್ನೇಹಿತರೇ, ಈ ಲಾಕ್‌ಡೌನ್ ಸಮಯದಲ್ಲಿ ನಿಮ್ಮ ಭವಿಷ್ಯಕ್ಕೆ ಪೂರಕವಾದ ಸಂಕಲ್ಪವನ್ನು ಹಾಕಿಕೊಳ್ಳಿ. ವಿವಿಧ ಆನ್‌ಲೈನ್ ಕೋರ್ಸ್‌ಗಳಿಗೆ ಸೇರಿ, ಅಗತ್ಯ ಸ್ಕಿಲ್‌ಗಳನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಹೊಸ ಕನಸಿಗೆ ಶುಭವಾಗಲಿ.