Kannada CADD Nest Private Limited

ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ?

ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ?

ಕನ್ನಡ ಕ್ಯಾಡ್‌ನೆಸ್ಟ್‌ ಕರಿಯರ್ ಗೈಡ್ ಮಾಲಿಕೆಯಲ್ಲಿ ಇಂದು ಉದ್ಯೊಗ ಸಂದರ್ಶನದಲ್ಲಿ ಕೇಳಬಹುದಾದ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ. ಜೊತೆಗೆ, ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೇಗೆ ಉತ್ತರಿಸಬಹುದು ಎಂಬ ಸಂಭಾವ್ಯ ಉತ್ತರಗಳನ್ನೂ ಇಲ್ಲಿ ನೀಡಲಾಗಿದೆ. ಉದ್ಯೋಗ ಸಂದರ್ಶಕರು ಪ್ರತಿದಿನ ಹಲವು ಅಭ್ಯರ್ಥಿಗಳನ್ನು ಸಂದರ್ಶನ ನಡೆಸುತ್ತ ಇರುತ್ತಾರೆ. ಇವರಲ್ಲಿ ಕೇಳಲು ಪ್ರತಿನಿತ್ಯ ಹೊಸ ಪ್ರಶ್ನೆಗಳು ಇರುವುದಿಲ್ಲ. ಯಾವುದೋ ಕೆಲವು ಪ್ರಶ್ನೆಗಳು ಮಾತ್ರ ಹೊಸದಿರಬಹುದು. ಹೀಗಾಗಿ, ಯಾವುದೇ ಉದ್ಯೋಗ ಸಂದರ್ಶನಕ್ಕೆ ಹೋದಾಗ ಒಂದಿಷ್ಟು ಪ್ರಶ್ನೆಗಳನ್ನು ಮೊದಲೇ ನಿರೀಕ್ಷಿಸಬಹುದು. ನೀವು ಅಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಹೇಗೆಂದು ಮೊದಲೇ ಸಿದ್ಧತೆ ನಡೆಸಿಕೊಂಡರೆ ಉದ್ಯೋಗ ಪಡೆಯುವುದು ನಿಮಗೆ ಸುಲಭವಾದೀತು.

Tell me about yourself

ನಿಮ್ಮ ಬಗ್ಗೆ ಹೇಳುವುದು ಸುಲಭವಾದ ಪ್ರಶ್ನೆ ಎಂದುಕೊಂಡಿರಾ? ಆದರೆ, ಸಾಮಾನ್ಯ ಪ್ರಶ್ನೆಯಂತೆ ಕಂಡರೂ ಇದು ಅಸಾಮಾನ್ಯ ಪ್ರಶ್ನೆ. ನನ್ನ ಹೆಸರು ರಮೇಶ್. ನನ್ನ ತಂದೆ ಎಂಜಿನಿಯರ್. ಅಮ್ಮ ಹೌಸ್ ವೈಫ್. ನನ್ನ ಊರು ಮೈಸೂರು. ನಾನು ಕ್ಯಾಡ್‌ನೆಸ್ಟ್‌ ಬಸವನಗುಡಿಯಲ್ಲಿ ಅನಿಮೇಷನ್ ಓದಿದ್ದೇನೆ. ಹೀಗೆ ಹೇಳುತ್ತ ಹೋಗುವುದಲ್ಲ. ಇಲ್ಲಿ ನಿಮ್ಮ ಪರ್ಸನಲ್ ಲೈಫ್ ಬಗ್ಗೆ ಹೆಚ್ಚು ಹೇಳದೆ ಪ್ರೊಫೆಷನಲ್ ಕ್ವಾಲಿಟಿ ಮೂಲಕ ನಿಮ್ಮನ್ನು ನೀವು ಪರಿಚಯಿಸಿಕೊಳ್ಳಬೇಕು.

Why did you leave your last job?

ಹಳೆಯ ಉದ್ಯೋಗ ಬಿಡಲು ನಿಮ್ಮಲ್ಲಿ ನೂರಾರು ಕಾರಣಗಳು ಇರಬಹುದು. ಅಲ್ಲಿನ ಮ್ಯಾನೇಜರ್ ಜೊತೆಗೆ ನಿಮಗೆ ಮಾರಾಮಾರಿ ಆಗಿರಬಹುದು. ಹಾಗಂತ, ನೀವು ಹಳೆಯ ಕಂಪನಿಯನ್ನು ದೂರುತ್ತ ಅಲ್ಲಿನ ವ್ಯವಸ್ಥೆಯ ಬಗ್ಗೆ ಟೀಕಿಸಬಾರದು. ಆ ರೀತಿ ಮಾಡಿದರೆ ಮುಂದೆ ನಮ್ಮ ಕಂಪನಿಯ ಬಗ್ಗೆಯೂ ಈತ ಇದೇ ರೀತಿ ಹೇಳಬಹುದು ಎಂಬ ಭಾವನೆಯನ್ನು ಸಂದರ್ಶಕರಿಗೆ ಮೂಡಿಸಬಹುದು. ಇದರ ಬದಲು ಅತ್ಯುತ್ತಮ ಅವಕಾಶ ಪಡೆಯುವ ಸಲುವಾಗಿ ಅಥವಾ ಇಲ್ಲಿ ಕೆಲಸ ಮಾಡುವುದು ನನ್ನ ಬಹುದಿನದ ಕನಸಾಗಿತ್ತು ಎಂದೆಲ್ಲ ಹೇಳಬಹುದು.

What experience do you have in this field?

ನೀವು ಅರ್ಜಿ ಸಲ್ಲಿಸಿದ ಹುದ್ದೆಗೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಇರುವ ವಿಶೇಷ ಪರಿಣತಿ ಬಗ್ಗೆ ಹೇಳಿರಿ. ಈ ಹಿಂದೆ ಇಂತಹ ಹುದ್ದೆಯಲ್ಲಿ ಪಡೆದ ಅನುಭವದ ಬಗ್ಗೆಯೂ ಹೇಳಬಹುದು.

Do you consider yourself successful?

ಹೌದು ಎನ್ನಲು ಹಿಂಜರಿಯಬೇಡಿ. ಆತ್ಮವಿಶ್ವಾಸದಿಂದ ಯೆಸ್ ಎನ್ನಿರಿ. ಯಾಕೆ ನೀವು ಯಶಸ್ವಿ ವ್ಯಕ್ತಿಯೆಂದು ಪರಿಗಣಿಸಿಕೊಳ್ಳುವಿರಿ ಎಂದು ಸಂಕ್ಷಿಪ್ತವಾಗಿ ತಿಳಿಸಿ.

What do your co-workers say about you?

ನಿಮ್ಮ ಬಗ್ಗೆ ನಿಮ್ಮ ಸಹೋದ್ಯೋಗಿಗಳು ಏನು ಹೇಳುತ್ತಾರೆ ಎಂಬ ಪ್ರಶ್ನೆಯನ್ನೂ ನಿಮ್ಮಲ್ಲಿ ಕೇಳಬಹುದು. ಇಂತಹ ಸಮಯದಲ್ಲಿ ನಿಮ್ಮ ಕಲೀಗ್ ಒಬ್ಬರ ಹೆಸರು ಅಲ್ಲೇಖಿಸಿ ಅವರು ಹೀಗೆನ್ನುತ್ತಿದ್ದರು, ಇನ್ನೊಬ್ಬರು ಹೀಗೆ ಹೇಳುತ್ತಾರೆ ಎಂದು ತಿಳಿಸಿ. ನಿಮ್ಮ ಕ್ವಾಲಿಟಿ ಬಗ್ಗೆ ನಿಮ್ಮ ಸಹೋದ್ಯೋಗಿಗಳ ಅಭಿಪ್ರಾಯವನ್ನು ಅವರಿಗೆ ತಿಳಿಸಬೇಕು.

What do you know about our company?

ಇಂಟರ್ವ್ಯೂಗೆ ಹೋಗುವ ಮೊದಲು ಆ ಕಂಪನಿಯ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ. ಕಂಪನಿಯ ವೆಬ್ಸೈಟ್ಗೆ ಹೋಗಿ ರಿಸರ್ಚ್ ಮಾಡಿ. ಉದಾಹರಣೆಗೆ ಕ್ಯಾಡ್‌ನೆಸ್ಟ್‌ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ವೆಬ್ಸೈಟ್ಗೆ ಭೇಟಿ ನೀಡಿ.

What Have You Done To Improve Yourself In The Past Year?

ನೀವು ಕಲಿತ ಹೊಸ ಕೌಶಲ್ಯಗಳ ಬಗ್ಗೆ, ಓದಿರುವ ಪುಸ್ತಕ ಇತ್ಯಾದಿಗಳ ಬಗ್ಗೆ ತಿಳಿಸಿ. ಯಾವುದಾದರೂ ಸರ್ಟಿಫಿಕೇಷನ್ ಕೋರ್ಸ್ಗಳನ್ನು ಪಡೆದಿದ್ದರೆ ತಿಳಿಸಿ. ನಿಮಗೆ ಗೊತ್ತೆ ನೀವು ಕ್ಯಾಡ್‌ನೆಸ್ಟ್‌ ಆನ್ಲೈನ್ ಕ್ಲಾಸ್ಗೆ ಸೇರಿ ನಿಮಗೆ ಬೇಕಾದ ಔದ್ಯೋಗಿಕ ಕೌಶಲಗಳನ್ನು ಪಡೆಯಬಹುದಾಗಿದೆ.

why do you want to join our company?

ಅಯ್ಯೋ ಸಾರ್, ಎಲ್ಲಾ ಕಂಪನಿಗೂ ಅರ್ಜಿ ಸಲ್ಲಿಸಿದ್ದೇನೆ, ನಿಮ್ಮಿಂದ ಇಂಟರ್ವ್ಯೂಗೆ ಕಾಲ್ ಬಂತು ಎನ್ನುವುದು ನಿಮ್ಮ ಮನಸ್ಸಿನಲ್ಲಿರುವ ನಿಜವಾದ ಉತ್ತರವಾಗಿದ್ದರೂ ಆ ರೀತಿ ಹೇಳಬೇಡಿ. ನೀವು ಸಂದರ್ಶನ ಎದುರಿಸುತ್ತಿರುವ ಕಂಪನಿಯ ಬಗ್ಗೆ ಮೊದಲೇ ರಿಸರ್ಚ್ ಮಾಡಿರಿ. ಆ ಕಂಪನಿಯ ಕುರಿತು ಕೆಲವು ಒಳ್ಳೆಯ ಮಾತುಗಳನ್ನು ಆಡಿ. ನಿಮ್ಮ ಕರಿಯರ್ ಗುರಿಗೆ ಈ ಕಂಪನಿ ಹೇಗೆ ಪೂರಕವಾಗಿದೆ ಎನ್ನುವುದನ್ನು ತಿಳಿಸಿರಿ.

Do you know anyone who works for us?

ನಿಮ್ಮನ್ನು ಸಂದರ್ಶನ ಮಾಡುತ್ತಿರುವ ಕಂಪನಿಯಲ್ಲಿ ಯಾರಾದರೂ ಪರಿಚಿತರು ಇದ್ದರೆ ತಿಳಿಸಿ. ಯಾರೂ ಇಲ್ಲವೆಂದಾದರೆ ಇಲ್ಲ ಎನ್ನಿರಿ.

ನೀವು ಬೇರೆ ಕಡೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೀರಾ? ನಿಮಗೆ ಎಷ್ಟು ಉತ್ತರ ಬೇಕು? ಹೀಗೆ ಇನ್ನೂ ನೂರಾರು ಸಂಭಾವ್ಯ ಇಂಟರ್ವ್ಯೂ ಪ್ರಶ್ನೆಗಳು ನಮ್ಮಲ್ಲಿ ಇವೆ. ಇವುಗಳಿಗೆ ಉತ್ತರ ಹೇಗೆ ಹೇಳುವುದೆಂದು ಮುಂದಿನ ದಿನಗಳಲ್ಲಿ ಕನ್ನಡಕ್ಯಾಡ್‌ನೆಸ್ಟ್‌.ಕಾಂನಲ್ಲಿ ಹೇಳುತ್ತೇವೆ. ಇಂಟರ್ವ್ಯೂ ಟಿಪ್ಸ್, ಸರ್ಟಿಫಿಕೇಷನ್ ಕೋರ್ಸ್ಗಳು, ಕರಿಯರ್ ಗೈಡ್, ಇಂಗ್ಲಿಷ್ ಕಲಿಕೆ ಸೇರಿದಂತೆ ಹಲವು ಬಗೆಯ ಶಿಕ್ಷಣ ಮತ್ತು ಉದ್ಯೊಗ ಮಾಹಿತಿಯನ್ನು ಪಡೆಯಲು ಕನ್ನಡಕ್ಯಾಡ್‌ನೆಸ್ಟ್‌.ಕಾಂಗೆ ಭೇಟಿ ನೀಡುತ್ತ ಇರಿ. ಇಲ್ಲಿರುವ ಲೇಖನಗಳನ್ನು ನಿಮ್ಮ ಸ್ನೇಹಿತರು ಮತ್ತು ಸ್ನೇಹಿತೆಯರ ಜೊತೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಕ್ಯಾಡ್‌ನೆಸ್ಟ್‌ ಆನ್ಲೈನ್ ಅಥವಾ ಆಫ್ಲೈನ್ ಕ್ಲಾಸ್ ಮೂಲಕ ಯಾವುದಾದರೂ ಕೊರ್ಸ್ ಕಲಿಯಲು ಬಯಸಿದರೆ ಈ ಕೆಳಗೆ ನೀಡಲಾದ ಬಟನ್ ಒತ್ತಿ ವಾಟ್ಸಪ್ ಮಾಡಿ. ಶುಭ ದಿನ ಗೆಳೆಯರೇ.

Related Posts

error: Content is protected !!
Scroll to Top