Kannada CADD Nest Private Limited

ನಿಮ್ಮ ಜೀವನದ ಗುರಿಯೇನು? ಆ ಗುರಿಯನ್ನು ತಲುಪುವುದು ಹೇಗೆ?

ನಿಮ್ಮ ಜೀವನದ ಗುರಿಯೇನು? ಆ ಗುರಿಯನ್ನು ತಲುಪುವುದು ಹೇಗೆ?

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಈ ವೆಬ್‌ಸೈಟ್‌ನಲ್ಲಿ ನೀಡುವ ಸರಣಿ ಲೇಖನಗಳು ನಿಮಗೆ ಉಪಯುಕ್ತವಾಗುತ್ತಿವೆ ಎಂಬ ನಂಬಿಕೆಯೊಂದಿಗೆ ಇಂದು ಅತ್ಯಂತ ಆಸಕ್ತಿದಾಯಕವಾದ ವಿಷಯದೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು “ನಿಮ್ಮ ಜೀವನದಲ್ಲಿ ಗುರಿ ನಿಗದಿಪಡಿಸಿಕೊಳ್ಳುವುದು ಹೇಗೆ’’ ಎಂಬ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ನಿಮ್ಮ ಗುರಿಯೇನು? ಈ ಪ್ರಶ್ನೆಯನ್ನು ಎಲ್ಲರಿಗೂ ಯಾರಾದರೂ ಯಾವುದಾದರೂ ಸಂದರ್ಭದಲ್ಲಿ ಕೇಳಿರುತ್ತಾರೆ. ಒಬ್ಬ ಪ್ರಾಥಮಿಕ ಶಾಲಾ ವಿದ್ಯಾರ್ಥಿಯನ್ನೇ ಕೇಳಿ ನೋಡಿ. ನಿನ್ನ ಗುರಿಯೇನು ಎಂದರೆ “ಡಾಕ್ಟರ್‌ ಆಗಬೇಕು” “ಸೈಂಟಿಸ್ಟ್‌ ಆಗಬೇಕು” ಎಂದೆಲ್ಲ ಹೇಳುತ್ತಾರೆ. ಹೈಸ್ಕೂಲ್‌ ವಿದ್ಯಾರ್ಥಿಯ ಗುರಿ ಇನ್ನೊಂದು ರೀತಿ ಇರುತ್ತದೆ. ಹೀಗೆ ಬೆಳೆಯುತ್ತ ಹೋದಂತೆ ವ್ಯಕ್ತಿಯ ಗುರಿಯು ಬದಲಾಗುತ್ತ ಹೋಗುತ್ತದೆ, ಗುರಿಯ ಕುರಿತು ಸ್ಪಷ್ಟತೆ ದೊರಕುತ್ತ ಹೋಗುತ್ತದೆ.

ಹೈಸ್ಕೂಲ್‌ ವಿದ್ಯಾರ್ಥಿಗೆ ಕಾಲೇಜಿಗೆ ಸೇರುವ ಗುರಿ, ಕಾಲೇಜು ವಿದ್ಯಾರ್ಥಿಗೆ ಎಂಜಿನಿಯರಿಂಗ್‌, ಮೆಡಿಕಲ್‌ ಇತ್ಯಾದಿ ಸೀಟು ಪಡೆಯುವ ಗುರಿ. ಓದು ಮುಗಿಸಿದ ಬಳಿಕ ಯಾವುದಾದರೂ ಒಳ್ಳೆಯ ವೇತನದ ಉದ್ಯೊಗ ಪಡೆಯುವ ಗುರಿ. ಐಎಎಸ್‌, ಐಪಿಎಸ್ ಆಗುವ ಗುರಿ.. ನಂತರ ಮದುವೆಯಾಗುವ ಗುರಿ, ಮನೆಕಟ್ಟುವ ಗುರಿ… ಹೀಗೆ ಗುರಿಗಳು ಮುಂದುವರೆಯುತ್ತಲೇ ಇರುತ್ತವೆ.

ಕೆಲವರು ತಮ್ಮ ಕರಿಯರ್‌ ಪಥದ ಕುರಿತು ಸರಿಯಾದ ಆಲೋಚನೆ ಹೊಂದಿರುತ್ತಾರೆ. ತಾವು ಅಂದುಕೊಂಡಿರುವುದನ್ನು ಸಾಧಿಸುತ್ತಾರೆ. ಇದಕ್ಕೆ ಕಾರಣವಾಗಿರುವುದು ಅವರು ಹಾಕಿಕೊಂಡಿರುವ ಗುರಿ. ಕೆಲವರು ಗುರಿ ಹಾಕಿಕೊಳ್ಳುತ್ತಾರೆ. ಆದರೆ, ಅದು ತಪ್ಪು ಗುರಿಯಾಗಿರುತ್ತದೆ. ಸಮರ್ಪಕ ಗುರಿ ಹಾಕಿಕೊಂಡು ಆ ದಿಸೆಯಲ್ಲಿ ಕಾರ್ಯನಿರ್ವಹಿಸುವವರು ಯಶಸ್ಸು ಪಡೆಯುತ್ತಾರೆ.

ಹೇಗಿರಬೇಕು ನಿಮ್ಮ ಗುರಿ?

  • ನೀವು ಬಿಎ ಓದುತ್ತ ಡಾಕ್ಟರ್‌ ಆಗುವ ಕನಸು ಕಂಡರೆ ಹೇಗಿರುತ್ತದೆ? ಅದಕ್ಕಾಗಿ ಎಂಬಿಬಿಎಸ್ ಓದಬೇಕು. ಹೀಗಾಗಿ, ಆದಷ್ಟು ರಿಯಲಿಸ್ಟಿಕ್‌ ಆಗಿರುವ ಗುರಿಯನ್ನು ಹೊಂದಿರಿ. ಸಾಧಿಸಲು ಸಾಧ್ಯವಿರುವಂತಹ ಗುರಿ ನಿಮ್ಮದಾಗಿರಲಿ.
  • ನಿಮ್ಮಲ್ಲಿರುವ ಕನಸು, ಆಸಕ್ತಿ ಮತ್ತು ಕೌಶಲಗಳಿಗೆ ಹೊಂದಿಕೆಯಾಗುವಂತಹ ಗುರಿಯನ್ನು ಹಾಕಿಕೊಳ್ಳಿರಿ.
  • ನೀವು ಉದ್ಯೋಗಾಧರಿತ ಗುರಿ ಹೊಂದಿದ್ದರೆ ಉದ್ಯೋಗ ಟ್ರೆಂಡ್‌ ಗಮನದಲ್ಲಿಟ್ಟುಕೊಂಡು ಗುರಿ ನಿಗದಿಪಡಿಸಿ. ಉದ್ಯೋಗ ಕ್ಷೇತ್ರದ ಭವಿಷ್ಯದ ಟ್ರೆಂಡ್‌ ಅಂದಾಜಿಸಿ ಮುಂದುವರೆಯಿರಿ. ನೇಪತ್ಯಕ್ಕೆ ಸೇರುವ ಉದ್ಯೋಗಗಳ ಕುರಿತು ಎಚ್ಚರವಿರಲಿ.
  • ಗುರಿ ಹಾಕಿಕೊಳ್ಳುವುದು ಸುಲಭ. ಆದರೆ, ಪರಿಶ್ರಮ ಪಡದೆ ಇದ್ದರೆ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗದು. ಹೀಗಾಗಿ, ಗುರಿಯನ್ನು ಸಾಧಿಸುವ ಸಂಕಲ್ಪ ಮಾಡಿ ಸತತ ಪರಿಶ್ರಮ ಪಡಿ.
  • ನಿಮ್ಮ ಗುರಿ ನಿರ್ದಿಷ್ಟವಾಗಿರಲಿ. ಹತ್ತು ಹಲವು ಗುರಿಗಳನ್ನು ಇಟ್ಟುಕೊಳ್ಳುವುದಕ್ಕಿಂತ ಒಂದು ಸ್ಪಷ್ಟ ಗುರಿ ಇಟ್ಟುಕೊಳ್ಳುವುದು ಒಳ್ಳೆಯದು. ಹಲವು ದೋಣಿಗಳಿಗೆ ಒಂದೇ ಬಾರಿ ಕಾಲಿಡುವ ಸಾಹಸ ಬೇಡ.

ಈ ಅಂಶಗಳನ್ನು ಗಮನಿಸಿ

  • ನಿಮ್ಮ ಗುರಿಯ ಫಲಿತಾಂಶ ಹೇಗಿರಬೇಕು ಎಂದು ಯೋಚಿಸಿ. ಅದು ನಿಮಗೆ ಜೀವನದಲ್ಲಿ ತೃಪ್ತಿ ನೀಡುವಂತೆ ಇರಬೇಕು.
  • ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ಹಾಕಿಕೊಳ್ಳಿರಿ.
  • ನಿಮ್ಮ ಅಲ್ಪಾವಧಿ ಗುರಿಯು ದೀರ್ಘಾವಧಿಯ ಗುರಿಯನ್ನು ಸಾಧಿಸಲು ಪೂರಕವಾಗಿರಲಿ. ಒಂದಕ್ಕೊಂದು ಸಂಬಂಧವಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ಹಾಕಿಕೊಳ್ಳಿರಿ.
  • ಗುರಿ ಸಾಧನೆಗೆ ಅವಶ್ಯವಿರುವ ಕೌಶಲಗಳನ್ನು ಕಲಿಯಿರಿ. ಸರ್ಟಿಫಿಕೇಷನ್‌ಗಳನ್ನು ಪಡೆಯಿರಿ. ಅಲ್ಪಾವಧಿ ಕೋರ್ಸ್‌ಗಳನ್ನು ಮಾಡಿರಿ.
  • ಗುರಿನಿಗದಿ ಪಡಿಸಿ ಸುಮ್ಮನಿರಬೇಡಿ. ಅದಕ್ಕೆ ಬೇಕಾದ ಕೌಶಲಗಳನ್ನು ಪಡೆದುಕೊಂಡು ಆ ಗುರಿ ಸಾಧನೆಯನ್ನು ಒಂದು ತಪಸ್ಸು ಎಂದುಕೊಂಡು ಕೆಲಸ ಮಾಡಿರಿ.

ನಿಮ್ಮಲ್ಲಿ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು

ಕನ್ನಡಕ್ಯಾಡ್‌ನೆಸ್ಟ್‌ ಓದುಗ ಸ್ನೇಹಿತರೇ, ದಯವಿಟ್ಟು ಈ ಮುಂದಿನ ಪ್ರಶ್ನೆಗಳನ್ನು ಓದಿಕೊಳ್ಳಿ. ಬಳಿಕ ಈ ಮುಂದಿನ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿ.

ಯಾವ ಉದ್ಯೋಗ ನನಗೆ ಸೂಕ್ತ?

ಭವಿಷ್ಯದಲ್ಲಿ ನಾನು ಏನಾಗಬಯಸಿದ್ದೇನೆ?

ಎಲ್ಲಾದರೂ ನನ್ನ ಈ ಗುರಿ ಸಾಧನೆಯಾದರೆ ನನಗೆ ಸಂತೋಷವಾಗಲಿದೆಯೇ?

ನಾನು ಹೆಮ್ಮೆ ಪಡುವಂತಹ ಉದ್ಯೊಗ ಯಾವುದು?

ನನಗೆ ಯಾವ ಉದ್ಯೋಗ ಹೊಂದಿಕೆಯಾಗುತ್ತದೆ?- ಎಲ್ಲಾದರೂ ನೀವು ಪ್ರಯಾಣ ಇಷ್ಟಪಡದೆ ಇದ್ದರೆ ಗಗನಸಖಿಯಂತಹ ಉದ್ಯೋಗದ ಕನಸು ಕಾಣಬೇಡಿ.

ನನ್ನಲ್ಲಿ ಯಾವೆಲ್ಲ ಕೌಶಲಗಳಿವೆ? ನನ್ನ ಗುರಿ ಸಾಧನೆಗೆ ನಾನು ಇನ್ನು ಮುಂದೆ ಯಾವೆಲ್ಲ ಕೌಶಲಗಳನ್ನು ಪಡೆದುಕೊಳ್ಳಬೇಕು.

ನನಗೆ ಮತ್ತು ನನ್ನ ಕುಟುಂಬಕ್ಕೆ ಹಣದ ಅವಶ್ಯಕತೆ ಎಷ್ಟಿದೆ? ನನಗೆ ಎಂತಹಜೀವನಶೈಲಿ ಬೇಕು. ಎಷ್ಟು ವೇತನದ ಉದ್ಯೋಗ ಭವಿಷ್ಯದಲ್ಲಿ ನಿಮ್ಮದಾಗಬೇಕು? ಇಂತಹ ವೇತನದ ಉದ್ಯೋಗ ಪಡೆಯಲು ನಾನು ಏನು ಕಲಿಯಬೇಕು? ಯಾವೆಲ್ಲ ಕೌಶಲಗಳನ್ನು ಪಡೆಯಬೇಕು….. ಹೀಗೆ ನಿಮ್ಮಲ್ಲಿ ನೀವು ಪ್ರಶ್ನಿಸುತ್ತ ಹೋಗಿ. ಅವುಗಳಿಗೆ ಒಂದು ಸ್ಪಷ್ಟ ಉತ್ತರ ಸಿಗುವ ತನಕ ಯೋಚಿಸುತ್ತ ಇರಿ.

ನೆನಪಿಡಿ, ನಿಮ್ಮಲ್ಲಿ ಈಗಾಗಲೇ ಇರುವ ಮೊಬೈಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಒಂದು ವರ್ಷ ಹಳೆಯದಾಗಿದೆ ಎಂದು ಹೊಸ ಮೊಬೈಲ್‌ ಖರೀದಿಸುವಿರಿ. ಇದಕ್ಕೆ ವ್ಯರ್ಥ ಸುರಿಯುವ ಹಣವನ್ನು ನಿಮ್ಮ ಭವಿಷ್ಯ ಬದಲಿಸಬಲ್ಲ ಕೋರ್ಸ್‌ ಕಲಿಯಲು ವಿನಿಯೋಗಿಸಬಾರದೇಕೆ? ನೀವು ನಿಮ್ಮ ಗುರಿ ಸಾಧಿಸಿದ ಬಳಿಕ ದುಬಾರಿ ಸ್ಮಾರ್ಟ್‌ಫೋನ್‌, ಕಾರು, ಬಂಗಲೆ, ಎಲ್ಲವನ್ನೂ ಹೆಚ್ಚು ಕಷ್ಟಪಡದೆ ನಿಮ್ಮದಾಗಿಸಿಕೊಳ್ಳಬಹುದು. ಈಗ ನಿಮ್ಮ ಗುರಿಯು ಒಳ್ಳೆಯ ಕರಿಯರ್‌ ರೂಪಿಸಿಕೊಳ್ಳುವುದಾಗಿರಲಿ.

ಶುಭವಾಗಲಿ ಸ್ನೇಹಿತರೇ, ಕ್ಯಾಡ್‌ನೆಸ್ಟ್‌‌ನಲ್ಲಿ ಲಭ್ಯವಿರುವ ಆನ್‌ಲೈನ್‌ ಮತ್ತು ಆಫ್‌ಲೈನ್‌ ಕೋರ್ಸ್‌ಗಳನ್ನು ಈ ಸಮಯದಲ್ಲಿ ನೀವು ಪಡೆಯಬಹುದು. ಮಾಹಿತಿಗಾಗಿ ಈಗಲೇ ವಾಟ್ಸಪ್‌ ಮಾಡಿ.

Related Posts

error: Content is protected !!
Scroll to Top