ಪುಟ್ಟ ಮಕ್ಕಳಿಗೆ ಕಾರ್ಟೂನ್ ಟೀವಿ ನೋಡಬೇಕು. ಬಾಹುಬಲಿಯ ಬಳಿಕ ಭಾರತದ ಬಹುತೇಕ ಸಿನಿಮಾಗಳಲ್ಲಿ ವಿಷುಯಲ್ ಎಫೆಕ್ಟ್, ಗ್ರಾಫಿಕ್ಸ್, ವಿಎಫ್‌ಎಕ್ಸ್ ತಂತ್ರಜ್ಞಾನಗಳ ಬಳಕೆ ಹೆಚ್ಚಿದೆ. ಟೀವಿಯಲ್ಲಿ ಗ್ರಾಫಿಕ್ಸ್ ಮೂಲಕ ಸುದ್ದಿಯ ಸೆನ್ಸೆಷನ್ ಹೆಚ್ಚಿಸಲಾಗುತ್ತಿದೆ. ದೃಶ್ಯ ಮಾಧ್ಯಮವನ್ನು ಇನ್ನಷ್ಟು ಆಕರ್ಷಕಗೊಳಿಸಲು ಅನಿಮೇಟರ್ ಮತ್ತು ಗ್ರಾಫಿಕ್ಸ್ ಕಲಾವಿದರ ಕೈಚಳಕ ಬೇಕೇ ಬೇಕು. ಇಂತಹ ಸಮಯದಲ್ಲಿ ಅನಿಮೇಷನ್ ಎನ್ನುವುದು ಬಹುಬೇಡಿಕೆಯ ಕರಿಯರ್ ಆಗಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತ, ಕ್ರಿಯಾಶೀಲ ಅನಿಮೇಟರ್‌ಗಳಿಗೆ ಬಹುಬೇಡಿಕೆ ಇರಲಿದೆ.
ಈ ಕ್ಷೇತ್ರದ ವಿಶಾಲ ವ್ಯಾಪ್ತಿ ಮತ್ತು ಕರಿಯರ್ ಅವಕಾಶಗಳನ್ನು ಮನಗಂಡು ಈಗಿನ ದಿನಗಳಲ್ಲಿ ಬಹುತೇಕ ತರುಣ/ತರುಣಿಯರು ಅನಿಮೇಷನ್ ಕೋರ್ಸ್‌ಗಳನ್ನು ಕಲಿಯಲು ಆಸಕ್ತಿವಹಿಸುತ್ತಿದ್ದಾರೆ. ಅನಿಮೇಷನ್ ವೃತ್ತಿಪರರಿಗೆ ಇರುವ ಅತ್ಯುತ್ತಮ ವೇತನ, ಕರಿಯರ್‌ನಲ್ಲಿ ಪ್ರಗತಿ ಕಾಣುವ ಅವಕಾಶಗಳನ್ನು ಮನಗಂಡು ೨ಡಿ, ೩ಡಿ ಅನಿಮೇಷನ್ ಸೇರಿದಂತೆ ವಿವಿಧ ಅನಿಮೇಷನ್ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ.
ಬಾಹುಬಲಿ, ಕುಂಗ್ ಫೂ ಪಾಂಡ, ಐಸ್ ಏಜ್ ಸೇರಿದಂತೆ ವಿವಿಧ ಸಿನಿಮಾಗಳನ್ನು ಮಕ್ಕಳು,ದೊಡ್ಡವರು ಎಂಬ ಬೇಧಭಾವವಿಲ್ಲದೆ ನೋಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಪಡೆಯಬಹುದಾದ ಅವಕಾಶಗಳಿಗೆ ಇಂತಹ ಸಿನಿಮಾಗಳೇ ಸಾಕ್ಷಿ.
ಒಂದು ನಿರ್ಜೀವ ವಸ್ತುವಿಗೆ ಆಕಾರ ಮತ್ತು ಜೀವ ನೀಡುವ ಮಹೋನ್ನತ ಕಲೆಯನ್ನು ಅನಿಮೇಷನ್ ಎನ್ನಬಹುದು. ಮನರಂಜನೆ ಉದ್ಯಮ ಮತ್ತು ತಂತ್ರಜ್ಞಾನದ ಯುಗಳಗೀತೆಯಾಗಿ ಅನಿಮೇಷನ್ ಉದ್ಯಮವು ಕಾರ್ಯನಿರ್ವಹಿಸುತ್ತಿದೆ. ವಿನ್ಯಾಸ, ಚಿತ್ರ ರಚನೆ, ವಿನ್ಯಾಸ ಮತ್ತು ಪ್ರೊಡಕ್ಷನ್ ಇತ್ಯಾದಿ ವಿಭಾಗಗಳನ್ನು ಬಳಸಿಕೊಂಡು ಗ್ರಾಫಿಕ್ ಶ್ರೀಮಂತವಾದ ಮಲ್ಟಿಮೀಡಿಯಾ ಕ್ಲಿಪ್‌ಗಳನ್ನು ರಚಿಸಲಾಗುತ್ತದೆ.
ಯಾವೆಲ್ಲ ಹುದ್ದೆಗಳನ್ನು ಪಡೆಯಬಹುದು?
- ೨ಡಿ ಅನಿಮೇಟರ್
- ೩ಡಿ ಅನಿಮೇಟರ್
- ಕೀ ಫ್ರೇಮ್ ಅನಿಮೇಟರ್
- ಇಮೇಜ್ ಎಡಿಟರ್
- ಮಾಡೆಲ್ಲರ್
- ಕ್ಯಾರೇಕ್ಟರ್ ಅನಿಮೇಟರ್
- ಟೆಕ್ಸಚರ್ ಆರ್ಟಿಸ್ಟ್
- ಲೇಔಟ್ ಆರ್ಟಿಸ್ಟ್
- ಲೈಟಿಂಗ್ ಆರ್ಟಿಸ್ಟ್
- ಸ್ಟೋರಿ ಬೋರ್ಡ್ ಆರ್ಟಿಸ್ಟ್
- ಬ್ಯಾಕ್‌ಗ್ರೌಂಡ್ ಆರ್ಟಿಸ್ಟ್
- ಕ್ಲೀನ್‌ಅಪ್ ಆರ್ಟಿಸ್ಟ್
- ರಿಗ್ಗಿಂಗ್ ಆರ್ಟಿಸ್ಟ್
- ರೆಂಡರಿಂಗ್ ಆರ್ಟಿಸ್ಟ್
- ಡಿಜಿಟಲ್ ಇಂಕ್ ಮತ್ತು ಪೇಂಟ್ ಆರ್ಟಿಸ್ಟ್
ಅನಿಮೇಷನ್ ಉದ್ಯೋಗಕ್ಕೆ ಬೇಕಾದ ಕೌಶಲಗಳು
- ಕ್ರಿಯೇಟಿವಿಟಿ ಅಥವಾ ಕ್ರಿಯಾಶೀಲತೆ
- ಅನನ್ಯ ವಿಷುಯಲ್ ಇಮ್ಯಾಜಿನೇಷನ್ ಅಥವಾ ಕಲ್ಪನಾಶಕ್ತಿ
- ಬಣ್ಣದ ಬಗ್ಗೆ ಅತ್ಯುತ್ತಮ ಜ್ಞಾನ
- ಆರ್ಟಿಸ್ಟಿಕ್ ಸ್ಕಿಲ್ಸ್ ಅಥವಾ ಕಲಾ ಕೌಶಲಗಳು
- ಚಿತ್ರಗಳ ಮೂಲಕ ಭಾವಗಳನ್ನು ವ್ಯಕ್ತಪಡಿಸುವ ಕಲೆಗಾರಿಕೆ
- ಕಂಪ್ಯೂಟರ್ ಕೌಶಲ್ಯಗಳು
ಯಾವೆಲ್ಲ ಕೋರ್ಸ್‌ಗಳನ್ನು ಮಾಡಬಹುದು?
ಎಸ್‌ಎಸ್‌ಎಲ್‌ಸಿ/ಪಿಯುಸಿ ಬಳಿಕ (ಫೇಲ್ ಆದವರೂ ಕೂಡ) ಅನಿಮೇಷನ್‌ಗೆ ಸಂಬಂಧಪಟ್ಟ ಡಿಪ್ಲೊಮಾ ಅಥವಾ ಪದವಿ ಕೋರ್ಸ್‌ಗಳನ್ನು ಮಾಡಬಹುದು. ಅನಿಮೇಷನ್‌ಗೆ ಸಂಬಂಧಪಟ್ಟ ಟೆಕ್ನಿಕಲ್ ಕೋರ್ಸ್‌ಗಳನ್ನು ಮಾಹಿತಿ ಪಡೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನ ಕ್ಯಾಡ್‌ನೆಸ್ಟ್ ಶಿಕ್ಷಣ ಸಂಸ್ಥೆಯಿಂದ ಪಡೆದುಕೊಳ್ಳಬಹುದು.
ಯಾವೆಲ್ಲ ಉದ್ಯೋಗಗಳು ದೊರಕುತ್ತವೆ?
ಭಾರತದಲ್ಲಿ ೩೦೦ಕ್ಕೂ ಹೆಚ್ಚು ಅನಿಮೇಷನ್ ಸ್ಟುಡಿಯೋಗಳು ಇವೆ. ಹಲವು ಸಾವಿರ ಅನಿಮೇಷನ್ ವೃತ್ತಿಪರರು ಇದ್ದಾರೆ. ನಿಜ ಏನೆಂದರೆ, ಉದ್ಯಮಕ್ಕೆ ಬೇಕಾದಷ್ಟು ಪ್ರತಿಭಾನ್ವಿತರ ಲಭ್ಯತೆಯಿಲ್ಲ. ಗೇಮಿಂಗ್ ಉದ್ಯಮದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಉದ್ಯೋಗವಿದೆ. ಇದರೊಂದಿಗೆ ಸಿನಿಮಾ ಮತ್ತು ಟೆಲಿವಿಷನ್ ವಿಭಾಗದಲ್ಲಿಯೂ ಅನಿಮೇಷನ್ ಕೋರ್ಸ್ ಕಲಿತವರಿಗೆ ಅತ್ಯುತ್ತಮ ಉದ್ಯೋಗಾವಕಾಶ ದೊರಕುತ್ತಿದೆ. ಬಿಸ್ನೆಸ್, ಸೇಲ್ಸ್, ಎಂಜಿನಿಯರಿಂಗ್, ಶಿಕ್ಷಣ ಮತ್ತು ಜಾಹೀರಾತು, ಮುದ್ರಣ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಗಳಲ್ಲಿಯೂ ಅನಿಮೇಷನ್ ಕೋರ್ಸ್ ಕಲಿತವರಿಗೆ ಉದ್ಯೋಗಾವಕಾಶ ದೊರಕುತ್ತಿದೆ.
ನೀವು ಅನಿಮೇಷನ್ ಕೋರ್ಸ್ ಕಲಿತು ಪೂರ್ಣಕಾಲಿಕವಾಗಿಯೇ ಕೆಲಸ ಮಾಡಬೇಕೆಂದಿಲ್ಲ. ಫ್ರೀಲ್ಯಾನ್ಸರ್ ಆಗಿಯೂ ಕೆಲಸ ಮಾಡಿ ಕೈ ತುಂಬಾ ಹಣ ಸಂಪಾದಿಸಬಹುದು. ಅನಿಮೇಷನ್ ಕೋರ್ಸ್‌ನ ಭಾಗವಾಗಿರುವ ವೆಬ್ ಡಿಸೈನ್, ಸಿಡಿ ರೋಮ್ ಪ್ರೊಡಕ್ಷನ್, ಗ್ರಾಫಿಕ್ ಡಿಸೈನಿಂಗ್ ಮತ್ತು ೩ ಆಯಾಮದ ಪ್ರಾಡಕ್ಟ್ ಮಾಡೆಲಿಂಗ್ ವಿಭಾಗದಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ.
ಇಲ್ಲಿ ಉದ್ಯೋಗ ಪಡೆಯಿರಿ
- ಆನ್‌ಲೈನ್ ಮತ್ತು ಪ್ರಿಂಟ್ ಮೀಡಿಯಾ
- ಕಾರ್ಟೂನ್ ಪ್ರೊಡಕ್ಷನ್
- ಜಾಹೀರಾತು
- ವಿಡಿಯೋ ಗೇಮಿಮಗ್
- ಥಿಯೇಟರ್
- ಫಿಲ್ಮ್ ಮತ್ತು ಟೆಲಿವಿಷನ್
- ಇ ಲರ್ನಿಂಗ್
ಅನಿಮೇಷನ್ ವೃತ್ತಿಪರರಿಗೆ ವೇತನ ಎಷ್ಟಿರುತ್ತದೆ?
ಆರಂಭದಲ್ಲಿ ವೇತನ ಅಷ್ಟೇನೂ ಉತ್ತಮವಾಗಿರದೆ ಇರಬಹುದು. ೧೦ ಸಾವಿರ ರೂ.ನಿಂದ ೧೫ ಸಾವಿರ ರೂ. ದೊರಕಬಹುದು. ಈ ಕಡಿಮೆ ವೇತನದ ಅವಧಿಯನ್ನು ಕೌಶಲವೃದ್ಧಿಗೆ ಮತ್ತು ಆ ಕ್ಷೇತ್ರದಲ್ಲಿ ಬೆಳೆಯಲು ಬಳಸಿಕೊಳ್ಳಿ. ಮೂರರಿಂದ ಐದು ವರ್ಷ ಅನುಭವವಾದ ಬಳಿಕ ನಿಮ್ಮವೇತನವು ೨೫ ಸಾವಿರ ರೂ.ನಿಂದ ೪೦ ಸಾವಿರ ರೂ. ಆಸುಪಾಸಿನಲ್ಲಿರಬಹುದು. ಬಳಿಕ ನಿಮ್ಮ ಪ್ರತಿಭೆಗೆ ತಕ್ಕಂತೆ ನಿಮ್ಮ ವೇತನ ಲಕ್ಷ ದಾಟಬಹುದು.
ನಿಮಗೊಂದು ವಿಷಯ ಗೊತ್ತೆ, ಭಾರತವು ಪ್ರತಿಭಾನ್ವಿತರ ಬೀಡು. ಇಲ್ಲಿನವರ ಕ್ರಿಯೇಟಿವಿಟಿಗೆ ಎಲ್ಲೆಲ್ಲೂ ಬೇಡಿಕೆಯಿದೆ. ಇದನ್ನು ಮನಗಂಡು ಅಮೆರಿಕ ಸೇರಿದಂತೆ ವಿವಿಧ ದೇಶಗಳ ಅನಿಮೇಷನ್ ಸ್ಟುಡಿಯೋಗಳು ಅನಿಮೇಷನ್ ಉದ್ಯೋಗಗಳನ್ನು ಭಾರತದಲ್ಲಿರುವ ಕಂಪನಿಗಳಿಗೆ ಗುತ್ತಿಗೆ ನೀಡುತ್ತಿವೆ.
ಇನ್ನೇಕೆ ತಡ ಸ್ನೇಹಿತರೇ, ಅನಿಮೇಷನ್ ಜಗತ್ತಿನಲ್ಲಿ ನೀವು ಹೊಸ ಕ್ರಾಂತಿಯನ್ನೇ ಸೃಷ್ಟಿಸಲು ಮೊದಲ ಹೆಜ್ಜೆ ಇಡಿ. ವಿಳಂಬ ಮಾಡದೆ ಅನಿಮೇಷನ್ ಕೋರ್ಸ್‌ಗಳಿಗೆ ಸೇರಿರಿ. ಕ್ಯಾಡ್‌ನೆಸ್ಟ್‌ಅನಿಮೇಷನ್ ಕುರಿತು ವಾಟ್ಸಪ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
Computer Training Institutes
Animation Training Institutes
Graphic Training Institutes
Computer Training Institutes For Coreldraw
Photo Shop Training Institutes
Computer Training Institutes For Web Designing
Computer Training Institutes For Adobe Photoshop
Multimedia Training Institutes
Visual Effects Training Institutes
Computer Training Institutes For 3D Studio Max
Computer Training Institutes For 3D Animation
Computer Training Institutes For Animation & Visual Effects
Computer Training Institutes For 3D Modelling
Computer Training Institutes For Maya 3D Animation
Computer Training Institutes For Adobe
Computer Training Institutes For Graphic Animation
Computer Training Institutes For 2D Animation
Computer Training Institutes For Adobe Premier
Institutes For Visual Effects
Computer Training Institutes For Adobe Illustrator
Computer Training Institutes For Interior Designing
Computer Training Institutes For After Effect
Computer Training Institutes For Corporate 3D Max
Computer Training Institutes For Flash
Computer Training Institutes For Multimedia Diploma