ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ಪಡೆಯುವುದು ಪ್ರತಿಯೊಬ್ಬರ ಕನಸು. ಯಶಸ್ಸು ಪಡೆಯಲು ಬೇಕಿರುವುದು ಏನು? ಹಣವೇ? ಶೈಕ್ಷಣಿಕ ಅರ್ಹತೆಗಳೇ? ಅಥವಾ ಮಹಾತ್ವಕಾಂಕ್ಷೆಯೇ? ಇವೆಲ್ಲವೂ ಅವಶ್ಯಕ ನಿಜ. ಆದರೆ, ಯಶಸ್ಸು ಪಡೆಯಲು ಇಷ್ಟೇ ಸಾಕಾಗದು. ಇಂದಿನ ಕನ್ನಡ ಕ್ಯಾಡ್‌ನೆಸ್ಟ್ ಲೇಖನದಲ್ಲಿ ಯಶಸ್ಸು ಪಡೆಯಲು ಅತ್ಯಮೂಲ್ಯವಾದ ಅಂಶವೊಂದರ ಬಗ್ಗೆ ಚರ್ಚಿಸೋಣ. ಅದು ಟೈಮ್ ಮ್ಯಾನೇಜ್ ಮೆಂಟ್ ಅಥವಾ ಸಮಯದ ನಿರ್ವಹಣೆ.
ಜಗತ್ತು ಈಗ ಕೊರೊನಾ ಸಂಕಷ್ಟದಲ್ಲಿದೆ. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮನೆಯಿಂದಲೇ ಓದುತ್ತಿದ್ದಾರೆ. (ನೀವು ಆನ್‌ಲೈನ್ ಸರ್ಟಿಫಿಕೇಷನ್ ಕೋರ್ಸ್‌ಗಳಿಗೆ ಸೇರಲು ಬಯಸಿದರೆ ಕ್ಯಾಡ್‌ನೆಸ್ಟ್ ಸಹಾಯವಾಣಿ ಸಂಪರ್ಕಿಸಬಹುದು). ಈಗಿನ ವರ್ಕ್ ಫ್ರಂ ಹೋಂ ಟ್ರೆಂಡ್ ಗಮನಿಸಿದರೆ ಕಂಪನಿಗಳು ಕೊರೊನಾ ಮುಗಿದ ಬಳಿಕವೂ ನಿಮ್ಮ ಮನೆಯನ್ನೇ ಅವರ ಆಫೀಸ್ ಆಗಿಸಬಹುದು. ಭವಿಷ್ಯದಲ್ಲಿ ನಿಮ್ಮ ಉದ್ಯೋಗ ಸ್ಥಳವು ನಿಮ್ಮ ಮನೆಯೇ ಆಗಿರಬಹುದು.
ಆಫೀಸ್ ಆಗಲಿ, ಮನೆಯಿಂದ ಮಾಡುವ ಕೆಲಸವಾಗಲಿ ಅಥವಾ ನಿಮ್ಮ ಸ್ವಂತ ಉದ್ಯಮವಾಗಲಿ. ಅಲ್ಲಿ ಯಶಸ್ಸು ಪಡೆಯಬೇಕಿದ್ದರೆ ನೀವು ಸಮಯದ ನಿರ್ವಹಣೆ ಕಲಿಯಲೇ ಬೇಕು. ಇಲ್ಲದಿದ್ದರೆ ಬಿಸಿ ತಾಗಿದ ಬೆಣ್ಣೆಯಂತೆ ನಿಮ್ಮ ಆಯಸ್ಸು ಕ್ಷಣಾರ್ಧದಲ್ಲಿ ಕರಗಿ ಹೋಗುತ್ತದೆ, ವಯಸ್ಸು ಕಳೆದು ಹೋದ ಬಳಿಕ ಅಯ್ಯೋ ನಾನು ಆಗಲೇ ಅದು ಮಾಡಬೇಕಿತ್ತು, ಇದು ಮಾಡಬೇಕಿತ್ತು ಎಂದು ಪರಿತಪಿಸಬೇಕಾಗುತ್ತದೆ.
ಏನಿದು ಟೈಮ್ ಮ್ಯಾನೇಜ್‌ಮೆಂಟ್?
ಸಮಯದ ನಿರ್ವಹಣೆ ಎಂದರೆ ಟೈಂಟೇಬಲ್ ಹಾಕಿಕೊಂಡು ಕತ್ತೆಯಂತೆ ದುಡಿಯುವುದಲ್ಲ. ಕೆಲಸವನ್ನು ಸ್ಮಾರ್ಟ್ ಆಗಿ ಮುಗಿಸಿ ಸಮಯವನ್ನು ಉಳಿಸುವುದಾಗಿದೆ. ಸಮಯದ ನಿರ್ವಹಣೆ ಮಾಡುವುದು ಹೇಗೆಂದು ಯೋಚಿಸುತ್ತ ಹೆಚ್ಚು ಸಮಯ ವ್ಯರ್ಥ ಮಾಡಬೇಕೆಂದಿಲ್ಲ. ದಿನನಿತ್ಯದ ಬದುಕಿನಲ್ಲಿ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಹೋದರೆ ತನ್ನಷ್ಟಕ್ಕೆ ಸಮಯದ ನಿರ್ವಹಣೆಯಾಗುತ್ತದೆ.
ಸಮಯ ಎಂದರೇನು?
ಸಮಯದ ಕುರಿತು ಸಾಕಷ್ಟು ವ್ಯಾಖ್ಯಾನಗಳು ಇವೆ. ಯಾವುದಾದರೂ ವಿಷಯ ಅಥವಾ ಘಟನೆ ನಡೆಯುವ ಅವಧಿಯನ್ನು ಸಮಯ ಎಂದು ಕರೆಯಲಾಗುತ್ತದೆ. ಸಮಯದಲ್ಲಿ ಎರಡು ಬಗೆಯಿದೆ. ಒಂದು ಗಡಿಯಾರದ ಸಮಯ. ಮತ್ತೊಂದು ನಿಜವಾದ ಸಮಯ!. ಗಡಿಯಾರದ ಸಮಯದಲ್ಲಿ ನಿಮಿಷದಲ್ಲಿ 60 ಸೆಕೆಂಡ್, ಒಂದು ಗಂಟೆಯಲ್ಲಿ 60 ನಿಮಿಷ, ದಿನದಲ್ಲಿ 24 ಗಂಟೆ ಮತ್ತು ವರ್ಷದಲ್ಲಿ 365 ದಿನವಿದೆ.
ಆದರೆ, ಗಡಿಯಾರದ ಸಮಯವೇ ನಿಜವಾದ ಸಮಯವಲ್ಲ. ನೀವು ನಿಮ್ಮ ಸಮಯದಲ್ಲಿ ಎಷ್ಟು ಬಳಸಿದ್ದೀರಿ ಅದು ನಿಜವಾದ ಸಮಯ. ವಾಹನ ತಯಾರು ಮಾಡುವ 2 ಗಂಟೆಯ ಅವಧಿಯು ನಿಮಗೆ 12 ವರ್ಷದಂತೆ ಫೀಲ್ ನೀಡಬಹುದು. 12 ವರ್ಷದ ಮಕ್ಕಳು ಕೆಲವೇ ಗಂಟೆಗಳಲ್ಲಿ ಬೆಳೆದಂತೆ ಅನಿಸಬಹುದು! ಈ ಬಾರಿ ಬರ್ತ್‌ಡೇ ಆಚರಿಸುವಾಗ ಅಯ್ಯೋ ಮೊನ್ನೆಯಷ್ಟೇ ಹಿಂದಿನ ಬರ್ತ್‌ಡೇ ಆಚರಿಸಿದಂತೆ ಭಾಸವಾಗುತ್ತದೆ. ಇದೇ ರೀತಿ ನೀವು ಉದ್ಯೋಗದಲ್ಲಿ ಸಮಯವನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ.
ಸಮಯದ ನಿರ್ವಹಣೆ ಹೇಗೆ?
- ನೀವು ಈಗ ಕೊರೊನಾ ಕಾಲದಲ್ಲಿ ಶಾಲೆ/ಕಾಲೇಜು ಇಲ್ಲದೆ ಮನೆಯಲ್ಲಿ ಕುಳಿತಿರಬಹುದು. ಈ ಸಮಯದಲ್ಲಿ ನಿಮ್ಮ ಸಮಯ ಕಳೆದು ಹೋಗುತ್ತಿರುತ್ತದೆ ಎನ್ನುವುದು ನೆನಪಿದೆಯೇ. ಈ ಸಮಯದಲ್ಲಿ ಶಾಲಾ/ಕಾಲೇಜಿನವರು ಅಪರೂಪಕ್ಕೆ ಮಾಡುವ ಆನ್‌ಲೈನ್ ಕ್ಲಾಸ್‌ಗಳಲ್ಲಿ ಭಾಗಿಯಾಗುವುದು ಮಾತ್ರ ನಿಮ್ಮ ಕೆಲಸವಾಗಬಾರದು. ಉಳಿದ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಗಮನ ನೀಡಬೇಕು.
- ಸಮಯ ವ್ಯರ್ಥ ಮಾಡುವವರಿಂದ ದೂರವಿರಿ. ನಿಮ್ಮ ಈ ಬಿಡುವಿನ ಸಮಯದಲ್ಲಿ ಯಾವುದಾದರೂ ಸರ್ಟಿಫಿಕೇಷನ್ ಕೋರ್ಸ್ ಪಡೆಯಬಹುದು. ಆನ್‌ಲೈನ್‌ನಲ್ಲಿ ಲಭ್ಯವಿರುವ ಉಚಿತ ಕೋರ್ಸ್‌ಗಳನ್ನು ಕಲಿಯಬಹುದು. ನಿಮ್ಮ ಕೌಶಲವೃದ್ಧಿಗೆ ಅಮೂಲ್ಯ ಸಮಯವನ್ನು ಮೀಸಲಿಡಬಹುದು.
- ನೀವು ಉದ್ಯೋಗಿಯಾಗಿದ್ದರೆ ಪ್ರತಿದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದರ ಕುರಿತು ಸ್ಪಷ್ಟತೆ ಇರಲಿ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಿ. ಸಮಯಕ್ಕೆ ಸರಿಯಾಗಿ ಹೊರಕ್ಕೆ ಹೋಗಿ. ಕೆಲಸ ಮತ್ತು ಬದುಕಿನ ಸಮತೋಲನ ಉತ್ತಮವಾಗಿರಲಿ.
- ನೀವು ಮಾಡಬೇಕಾದ ಕೆಲಸ ಮಾಡಿ ಮುಗಿಸುವ ತನಕ ‘ಡು ನಾಟ್ ಡಿಸ್ಟರ್ಬ್’ ಎಂಬ ಬೋರ್ಡ್ ಅನ್ನು ಹಾಕಬಹುದು. ಫೋನ್‍ನಲ್ಲಿ ನೋಟಿಫಿಕೇಷನ್ ಸೌಂಡ್‍ಗಳನ್ನು ಮ್ಯೂಟ್ ಮಾಡಿಡಿ. ಫೇಸ್‍ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಕಡೆಗೂ ನೀವು ಕೆಲಸದ ಸಮಯದಲ್ಲಿ ಗಮನ ಹರಿಸಬೇಡಿ.
- ನಿಮ್ಮ ಸಮಯದ ಪ್ಲಾನ್ ಸರಿಯಾಗಿ ರೂಪಿಸದೆ ಕೆಲಸ ಆರಂಭಿಸಬೇಡಿ. ಶೆಡ್ಯೂಲ್ ಸಿದ್ಧವಾದ ನಂತರ ಅದೇ ಪ್ರಕಾರ ಕೆಲಸ ಮಾಡಿ.
- ನೀವು ಮಾಡುವ ಕೆಲಸವನ್ನು ಹೀಗೆ ವಿಂಗಡಿಸಿ. ಅಗತ್ಯ ಮತ್ತು ತುರ್ತು ಕೆಲಸಗಳು, ಅಗತ್ಯ ಮತ್ತು ತುರ್ತು ಅಲ್ಲದ್ದು, ತುರ್ತು ಆದರೆ, ತುಂಬಾ ಅಗತ್ಯವಲ್ಲದ್ದು ಎಂದು ವಿಂಗಡಿಸಿ ಕೆಲಸ ಮಾಡಿರಿ.
- ಯಾರಾದರೂ ತಮ್ಮ ಹೊರೆಯನ್ನು ನಿಮ್ಮ ತಲೆ ಮೇಲಿಡಲು ಕಾಯುತ್ತಿರುತ್ತಾರೆ. ಅಂತಹ ಹೆಚ್ಚುವರಿ ಕೆಲಸ ನೀಡುವವರಿಗೆ ಧೈರ್ಯವಾಗಿ ನೋ ಎನ್ನಿ. ನೀವು ವಿದ್ಯಾರ್ಥಿಯಾಗಿದ್ದರೆ ಮನೆಯಲ್ಲಿ ಅಪ್ಪ/ಅಮ್ಮ ಏನಾದರೂ ಕೆಲಸ ಹೇಳಬಹುದು. ಅವರಿಗೆ ನೋ ಎನ್ನಬೇಡಿ ಮತ್ತೆ!. ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಕೆಲಸಕ್ಕೆ ಸಹಾಯ ಮಾಡುವುದು ಸಹ ಉತ್ತಮ. ಹಾಗಂತ, ಓದು ತಪ್ಪಿಸುವ ಸಲುವಾಗಿ ಪ್ರತಿಯೊಂದು ಕೆಲಸದ ಉಸ್ತುವಾರಿ ನೀವೇ ವಹಿಸಬೇಡಿ.
- ಪ್ರತಿದಿನ ಮಧ್ಯಾಹ್ನದೊಳಗೆ ಮಾಡಿಮುಗಿಸಬೇಕಾದ ಮತ್ತು ಮಧ್ಯಾನದ ನಂತರ ಮಾಡಬೇಕಾದ ಕೆಲಸವೆಂದು ನಿಮ್ಮ ಕೆಲಸವನ್ನು ವಿಂಗಡಿಸಿರಿ.
- ಸಮಯದ ನಿರ್ವಹಣೆಯಲ್ಲಿ ವ್ಯಾಯಾಮ, ಉತ್ತಮ ಆಹಾರ ಸೇವನೆ, ಆರೋಗ್ಯ ಇತ್ಯಾದಿಗಳ ಕುರಿತೂ ಕಾಳಜಿ ಇರಲಿ.
ಸಮಯ ಎನ್ನುವುದು ಅಮೂಲ್ಯವಾದದ್ದು. ಅದನ್ನು ವ್ಯರ್ಥ ಮಾಡಬೇಡಿ.
ಇದನ್ನೂ ಓದಿ: ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಏನು ಮಾಡಬಹುದು?
Autocad training institute bangalore
Best Autocad Training Online Bangalore
CAE Training classes in Bangalore
Computer Training institute class in Bangalore
Tally training institute bangalore
SAP training institute bangalore
Advanced excel training in bangalore
Vba macros training in bangalore
full stack development training institute bangalore
Software Testing training institute bangalore
Job Oriented Software Training Institutes Bangalore
Spoken English Classes in RAJAJINAGAR
Spoken English Classes in Bangalore
CAD training center in bangalore
Animation courses in bangalore
CAD Training classes in Bangalore
CAM Training classes in Bangalore
CAD training institute in bangalore
VBA course in bangalore
CAD courses in bangalore
best web development training institute in bangalore
e commerce training courses in bangalore
web development courses in bangalore
best soft skills training institutes in bangalore
animation centers in bangalore
graphic and web design courses in bangalore
CADD NEST CADD Courses Bangalore
CADD NEST Animation Studios Bangalore
CADD NEST Computer Training Institute Bangalore
Advance Excel classes in bangalore
Tally Training Institute in bangalore
The Best Digital Marketing Training Institute In bangalore